'ನನ್ನ ಪ್ರಕಾರ' ಹಿಂದಿ ರೀಮೇಕ್ನಲ್ಲಿ ಬಾಲಿವುಡ್ ಸ್ಟಾರ್ ಹೀರೋ.!

ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಿಸಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಹೊರರಾಜ್ಯಗಳಲ್ಲು ಸ್ಯಾಂಡಲ್ ವುಡ್ ಚಿತ್ರಗಳ ಬೇಡಿಕೆ ಹೆಚ್ಚಿಸಿಕೊಂಡಿದೆ. ಎರಡು ವಾರದ ಹಿಂದೆ ತೆರೆಕಂಡು ಇನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ನನ್ನ ಪ್ರಕಾರ' ಸಿನಿಮಾ ಈಗ ಹಿಂದಿಗೆ ರೀಮೇಕ್ ಆಗುತ್ತಿದೆ.

ಕ್ರೈಂ ಥ್ರಿಲ್ಲಿಂಗ್ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಕಿಶೋರ್, ಪ್ರಿಯಾಮಣಿ, ಮಯೂರಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಕಥೆ, ಚಿತ್ರಕಥೆ ಬರೆದು ವಿನಯ್ ಬಾಲಾಜಿ ನಿರ್ದೇಶಿಸಿದ್ದರು.

Nanna Prakara Will Remake In Hindi

ಇದೀಗ, ಹಿಂದಿಯಲ್ಲಿ ಈ ಸಿನಿಮಾ ಮಾಡಲು ಬಾಲಿವುಡ್ ಮಂದಿ ಆಸಕ್ತಿ ತೋರಿದ್ದು, ಮಾತುಕತೆ ನಡೆಯುತ್ತಿದೆಯಂತೆ. ಸದ್ಯದ ಮಾಹಿತಿ ಪ್ರಕಾರ, ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅವರು ಹಿಂದಿ ಅವತರಣಿಕೆಯಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಡುಗಡೆಗೂ ಮುಂಚೆಯಿಂದಲೂ ಕುತೂಹಲ ಮೂಡಿಸಿದ್ದ ನನ್ನ ಪ್ರಕಾರ ಚಿತ್ರದ ಮೇಲೆ ಪರಭಾಷಿಗರು ಕಣ್ಣಿಟ್ಟಿದ್ದರು. ಈಗಾಗಲೇ ಮಲಯಾಳಂ ಭಾಷೆಯಲ್ಲಿ ಡಬ್ಬಿಂಗ್ ಹಕ್ಕು ಸೇಲ್ ಆಗಿದೆ ಎಂಬ ಮಾಹಿತಿ ಇದೆ.

Nanna Prakara Will Remake In Hindi

'ಸಾಹೋ' ಸಿನಿಮಾ ಬಂದಾಗ ಚಿತ್ರಮಂದಿರ ಸಮಸ್ಯೆ ಎದುರಿಸಿದ ನನ್ನ ಪ್ರಕಾರ ಚಿತ್ರ ಬಳಿಕ ಮತ್ತೆ ಕಂಬ್ಯಾಕ್ ಮಾಡಿದೆ. ಕನ್ನಡದ ಪ್ರೇಕ್ಷಕರು ಮೆಚ್ಚಿಕೊಂಡಿರುವ 'ನನ್ನ ಪ್ರಕಾರ' ಎರಡು ವಾರ ಪೂರೈಸಿ, ಮೂರನೇ ವಾರಕ್ಕೆ ಕಾಲಿಟ್ಟಿದೆ.

More from Filmibeat

English summary
Kishore, Priyamani and mayuri starrer Nanna Prakara movie will ready to remade in hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X