»   » ದಿನೇಶ್‌ಬಾಬು ಕ್ಯಾಂಪ್‌ಗೆ ಬಲಗಾಲಿಟ್ಟು ಒಳಗೆ ಬಂದ ನಾರಾಯಣ

ದಿನೇಶ್‌ಬಾಬು ಕ್ಯಾಂಪ್‌ಗೆ ಬಲಗಾಲಿಟ್ಟು ಒಳಗೆ ಬಂದ ನಾರಾಯಣ

Posted By: Staff
Subscribe to Filmibeat Kannada

ಎಸ್‌. ನಾರಾಯಣ್‌ ಅವರ ಶುಕ್ರದೆಶೆ ಮುಂದುವರಿದಿದೆ. ಅವರ ನಟನೆಯ ಕೋತಿಗಳು ಸಾರ್‌ ಕೋತಿಗಳು ಚಿತ್ರ ಶತದಿನೋತ್ಸವದತ್ತ ನಾಗಾಲೋಟದಿಂದ ಸಾಗುತ್ತಿದ್ದರೆ, ಅವರ ಮಹತ್ವಾಕಾಂಕ್ಷೆಯ ಚಿತ್ರ (ವಿಷ್ಣು ಅಭಿನಯದ) ಜಮೀನ್ದಾರ್ರು ತೆರೆಗೆ ಬರಲು ಇನ್ನೇನು ಹೆಚ್ಚೂಕಮ್ಮಿ ರೆಡಿ. ಈ ಸಂಭ್ರಮದ ಜೊತೆಗೆ ನಾರಾಯಣ್‌ ಪಾಲಿಗೆ ಇನ್ನೊಂದು ಖುಷಿ ; ಇದು ನಿರ್ದೇಶನದ್ದಲ್ಲ- ನಟನೆಯದು.

ಮಲೆಯಾಳದಿಂದ ಬಂದು ಕನ್ನಡದಲ್ಲಿ ಕಾಲೂರಿರುವ ದಿನೇಶ್‌ಬಾಬು ನಿರ್ದೇಶನದಲ್ಲಿ ನಟಿಸುವ ಅವಕಾಶ ನಾರಾಯಣ್‌ ಅವರಿಗೆ ಸಿಕ್ಕಿದೆ. ಅಂಬಳೆ ಆರ್ಟ್ಸ್‌ ಲಾಂಛನದಲ್ಲಿ ಎ.ಎಸ್‌.ಬಾಲು ನಿರ್ಮಿಸುತ್ತಿರುವ ಬಲಗಾಲಿಟ್ಟು ಒಳಗೆ ಬಾ ಚಿತ್ರದಲ್ಲಿ ನಾರಾಯಣ್‌ ನಾಯಕ, ದಿನೇಶ್‌ಬಾಬು ನಿರ್ದೇಶಕ. ಚಿತ್ರಕಥೆ, ಸಂಭಾಷಣೆ ಹಾಗೂ ಛಾಯಾಗ್ರಹಣದ ಹೊಣೆಯನ್ನೂ ಬಾಬು ಅವರೇ ಹೊತ್ತಿದ್ದಾರೆ.

ಚಿತ್ರದ ಆರು ಗೀತೆಗಳ ಧ್ವನಿಮುದ್ರಣ ಕಾರ್ಯ ಹಂಸಲೇಖಾ ನಿರ್ದೇಶನದಲ್ಲಿ ಇತ್ತೀಚೆಗೆ ಹಂಸಲೇಖಾ ಸ್ಟುಡಿಯೋದಲ್ಲಿ ನಡೆಯಿತು. ಸಾಹಿತ್ಯ ಕೂಡ ಹಂಸಲೇಖಾ ಅವರದ್ದೇ. ಏಪ್ರಿಲ್‌ 4 ರಿಂದ ಶೂಟಿಂಗ್‌ ಶುರು.

ನಾರಾಯಣ್‌ ಅವರಿಗೆ ನಾಯಕಿಯಾಗಿ ಛಾಯಾಸಿಂಗ್‌ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ವಿಶೇಷ. ರಮೇಶ್‌ಭಟ್‌, ರಾಮಕೃಷ್ಣ , ಮುಖ್ಯಮಂತ್ರಿ ಚಂದ್ರು, ಚಿತ್ರಾ ಶೆಣೈ, ರೀತೂಸಿಂಗ್‌, ಎಸ್‌.ಉಮೇಶ್‌ ತಾರಾಗಣದಲ್ಲಿದ್ದಾರೆ. ರಂಗ ಕಲಾವಿದೆ ಹಾಗೂ ಗಡುಸು ಕಂಠದ ಗಾಯಕಿ ಬಿ.ಜಯಶ್ರೀ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಲಗಾಲಿಟ್ಟು ಒಳಗೆ ಬಾ ಬಳಗ -
ಸಂಕಲನ : ಕೆಂಪರಾಜ್‌ ಅರಸ್‌
ನಿರ್ದೇಶನ ಸಹಕಾರ : ಗುರುದಾಸ್‌ ಶೆಣೈ
ನಿರ್ಮಾಣ ನಿರ್ವಹಣೆ : ಚಂದ್ರಪ್ಪ

ಮುಖಪುಟ / ಸ್ಯಾಂಡಲ್‌ವುಡ್‌

English summary
S.Narayan is the hero for Dineshbabus next venture
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada