'ನಾರಾಯಣ ನಾರಾಯಣ' ಸಾಫ್ಟವೇರ್ ಹುಡುಗನ ಸಾಫ್ಟ್ ಸಿನಿಮಾ
ಶ್ರೀಕಾಂತ್ ಕೆ ಸಾಫ್ಟವೇರ್ ಇಂಜಿಯರ್ ಆದರೂ ಸಿನಿಮಾದ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ಅದೇ ರೀತಿ 'ನಾರಾಯಣ ನಾರಾಯಣ' ಎಂದು ಹೇಳುತ್ತಾ ನಾರಾಯಣ ಜಪದ ಮೂಲಕ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ.
'ನಾರಾಯಣ ನಾರಾಯಣ' ಕನ್ನಡದ ಹೊಸ ಸಿನಿಮಾವಾಗಿದ್ದು, ಚಿತ್ರದ ಪೋಸ್ಟರ್ ಗಮನ ಸೆಳೆಯುತ್ತಿದೆ. ಕೃಷ್ಣನ ಜೊತೆಗೆ ನಾಲ್ಕು ಖೈದಿಗಳು ಜೈಲಿನಲ್ಲಿ ಇರುವ ಪೋಸ್ಟರ್ ಫನ್ನಿಯಾಗಿದೆ. ಶ್ರೀಕಾಂತ್ ನಿರ್ದೇಶನದ ಈ ಚಿತ್ರವನ್ನು ಶ್ರೀಕೃಷ್ಣ ಮೂವಿ ಮೇಕರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಕಾನ್ಸೆಪ್ಟ್ ಓರಿಯಂಟೆಡ್ ಸಿನಿಮಾಗಳನ್ನು ಮಾಡುವ ಆಸೆಯಿಂದ ಈ ಚಿತ್ರವನ್ನು ಶುರು ಮಾಡಲಾಗಿದೆ. ಪೌರಾಣಿಕ ಹಿನ್ನಲೆಯ ಕಾಮಿಡಿ ಸಿನಿಮಾ ಇದಾಗಿದೆ. ಕನ್ನಡದಲ್ಲಿ ಪೌರಾಣಿಕ ಹಾಸ್ಯ ಸಿನಿಮಾ ಬಂದು ಬಹಳ ಕಾಲ ಆಗಿದೆ.

ಸಿನಿಮಾದಲ್ಲಿ ಅರ್ಜುನ್ ವಿರಾಟ್, ಕೀರ್ತಿ, ದರ್ಶನ್, ಹಂಪ, ಗುರುಕಿರಣ್, ನಿಧಿ ದೀಕ್ಷಿತ್, ರಘು ಭಟ್, ಶ್ರೀಪ್ರಿಯಾ ನಟಿಸಿದ್ದಾರೆ. ನಟ ಹಂಪ ಈಗಾಗಲೇ 'ಚಮಕ್' ಹಾಗೂ 'ಬಜಾರ್' ಚಿತ್ರಗಳಲ್ಲಿ ನಟಿಸಿದ್ದಾರೆ.
ಸತ್ಯ ರಾಧಾಕೃಷ್ಣ ಹಾಗೂ ಜತಿನ್ ದರ್ಶನ್ ಸಂಗೀತ, ಕಮಲ್ ಸಿಂಗ್ ಸಿನಿಮಾಟೋಗ್ರಾಫಿ ಸಿನಿಮಾದಲ್ಲಿ ಇರಲಿದೆ. ಕನಕಪುರದಲ್ಲಿ ಚಿತ್ರೀಕರಣ ನಡೆದಿದ್ದು, ಈಗಾಗಲೇ ಸಿನಿಮಾದ 60% ಶೂಟಿಂಗ್ ಮುಗಿದಿದೆ.
ಈ ಯುಗಾದಿ ಹಬ್ಬದ ವಿಶೇಷವಾಗಿ 'ನಾರಾಯಣ ನಾರಾಯಣ' ಸಿನಿಮಾದ ವಿಡಿಯೋ ಪ್ರೋಮೋ ಬಿಡುಗಡೆಯಾಗಲಿದೆ.


Click it and Unblock the Notifications











