ಸಫಾರಿಗೆ ಬಂದ ಮೋದಿ ಮಾವುತರಿಗೆ ಎಷ್ಟು ದುಡ್ಡು ಕೊಟ್ರು ಎಂಬುದನ್ನು ಬಿಚ್ಚಿಟ್ಟ ಎಲಿಫೆಂಟ್ ವಿಸ್ಪರರ್ಸ್‌ನ ಬೊಮ್ಮನ್
ನಿನ್ನೆ ( ಏಪ್ರಿಲ್ 9 ) ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಮರಾಜನಗರದ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದರು. ಬಂಡೀಪುರದಲ್ಲಿ ಸಫಾರಿ ಮಾಡಿದ ಮೋದಿ ವನ್ಯಜೀವಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಕಾಡಿನಲ್ಲಿ ಸುತ್ತಾಡಿ ಕೆಲಸದ ಒತ್ತಡದಿಂದ ದೂರಾಗಿ ಅದ್ಭುತ ಕ್ಷಣಗಳನ್ನು ಕಳೆದರು.
ಇನ್ನು ಬಂಡೀಪುರ ಜತೆಗೆ ತಮಿಳುನಾಡಿದ ಮುದುಮಲೈನಲ್ಲಿರುವ ತೆಪ್ಪಕಾಡು ಆನೆಶಿಬಿರಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಅತ್ಯುತ್ತಮ ಶಾರ್ಟ್ ಫಿಲ್ಮ್ ಕೆಟಗರಿ ಅಡಿಯಲ್ಲಿ ಆಸ್ಕರ್ ಗೆದ್ದಿದ್ದ ಎಲಿಫೆಂಟ್ ವಿಸ್ಪರರ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಾವಾಡಿಗರಾದ ಬೊಮ್ಮನ್ ಹಾಗೂ ಬೆಳ್ಳಿ ಜತೆ ನರೇಂದ್ರ ಮೋದಿ ಆನೆಗಳನ್ನು ವೀಕ್ಷಿಸಿದರು.

ಇನ್ನು ನರೇಂದ್ರ ಮೋದಿ ಜತೆ ಕಾಲ ಕಳೆದ ಬೊಮ್ಮನ್ ಹಾಗೂ ಬೆಳ್ಳಿ ಸಂತಸಗೊಂಡರು ಹಾಗೂ ಇದೇ ವೇಳೆ ತಮಗಿರುವ ಕಷ್ಟಗಳನ್ನು ನರೇಂದ್ರ ಮೋದಿ ಅವರ ಬಳಿ ಚರ್ಚಿಸಿದ್ದು, ಇವುಗಳಿಗೆ ನರೇಂದ್ರ ಮೋದಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಹಾಗೂ ಅಲ್ಲಿನ ಪ್ರತಿಯೊಬ್ಬ ಕಾವಾಡಿಗರಿಗೂ ಸಹ ನರೇಂದ್ರ ಮೋದಿ ಹಣ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಕಾವಾಡಿಗರಾದ ಬೊಮ್ಮನ್ ಹಾಗೂ ಬೆಳ್ಳಿಯವರೇ ಈ ಕೆಳಕಂಡಂತೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಬಂದು ಹೋದ ಬಳಿಕ ಮಾತನಾಡಿದ ಬೊಮ್ಮನ್ "ನಾನು ನಮ್ಮ ಕಷ್ಟವನ್ನೆಲ್ಲಾ ಹೇಳಿಕೊಂಡೆ. ಆನೆ ನೋಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಕೇವಲ ನನಗೆ ಮಾತ್ರವಲ್ಲ, ಅವರಿಗೂ ಸಹ ಸಹಾಯ ಮಾಡಬೇಕು. ಅವಾಗ ತಾನೇ ಎಲ್ಲರೂ ಸಂತೋಷ ಪಡ್ತಾರೆ. ಕೇವಲ ನನಗೊಬ್ಬನಿಗೆ ಸಹಾಯ ಮಾಡಿಕೊಟ್ಟರೆ ಬೇರೆಯವರು ನಮ್ಮ ಬಗ್ಗೆ ಬೇರೆ ತರಹ ಕಾಣುತ್ತಾರೆ ಎಂದಾಗ ಸರಿ ಅಂತ ಎಲ್ಲರಿಗೂ ಮನೆ ಕಟ್ಟಿಕೊಡಲು ಹೇಳಿದ್ರು. ಆನೆ ನೋಡಿಕೊಳ್ಳುತ್ತಿದ್ದ ಎಲ್ಲರಿಗೂ ಸಹ ಅವರು ಒಂದೊಂದು ಲಕ್ಷ ರೂಪಾಯಿ ದುಡ್ಡು ಕೊಟ್ಟರು. ನಮಗೆ ಮೊದಲೇ ಮುಖ್ಯಮಂತ್ರಿಗಳು ಕೊಟ್ಟಿದ್ರು. ನನಗೆ ಹಾಗೂ ನನ್ನ ಪತ್ನಿಗೆ ಇಬ್ಬರಿಗೂ ಒಂದೊಂದು ಲಕ್ಷ ಕೊಟ್ಟಿದ್ರು" ಎಂದು ಹೇಳಿಕೊಂಡರು.

ಇನ್ನೂ ಮುಂದುವರಿದು ಮಾತನಾಡಿದ ಬೊಮ್ಮನ್ "ಇವತ್ತು ಪ್ರಧಾನಮಂತ್ರಿ ಅವರು ಬಂದು ನಮ್ಮತ್ರ ಕುಳಿತು ಸಂತಸದಿಂದ ಮಾತನಾಡಿದ್ರು. ಅವರು ಈ ರೀತಿಯೆಲ್ಲಾ ನಡೆದುಕೊಳ್ತಾರೆ ಎಂದು ನಾವು ಊಹಿಸಿಯೂ ಇರಲಿಲ್ಲ. ನಮಗೆಲ್ಲಾ ತುಂಬಾ ಖುಷಿಯಾಗಿತ್ತು. ನಮ್ಮನ್ನು ನೋಡಲು ಬಂದು ಇಡೀ ಗ್ರಾಮದ ಜನರನ್ನೆಲ್ಲಾ ಗಮನಿಸುತ್ತಾರಲ್ಲಾ ಎಂದು ನನಗೆ ತುಂಬಾ ಖುಷಿಯಾಯಿತು" ಎಂದು ನರೇಂದ್ರ ಮೋದಿ ತಮ್ಮ ಹಾಗೂ ತಮ್ಮ ಜನರ ಕುರಿತು ನಡೆದುಕೊಂಡ ರೀತಿಯನ್ನು ಬೊಮ್ಮನ್ ಕೊಂಡಾಡಿದರು.
ಇನ್ನು ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರೀಕರಣಗೊಂಡಿದ್ದ ತೆಪ್ಪಕಾಡು ಆನೆ ಶಿಬಿರದಲ್ಲಿ ಕಾಲ ಕಳೆದ ನರೇಂದ್ರ ಮೋದಿ ಆನೆಗಳ ಜತೆ ಕಾಲ ಕಳೆದರು, ಆನೆಗಳಿಗೆ ಕಬ್ಬು ನೀಡಿ ಪ್ರೀತಿ ತೋರಿಸಿದರು. ಅಷ್ಟೇ ಅಲ್ಲದೇ ಅಲ್ಲಿನ ಮಕ್ಕಳಿಗೆ ಶಿಕ್ಷಣದ ಕೊರತೆ ಇರುವ ವಿಷಯವನ್ನು ಆಲಿಸಿದ ನರೇಂದ್ರ ಮೋದಿ ಶಿಕ್ಷಣ ಸವಲತ್ತನ್ನು ಒದಗಿಸುವ ಭರವಸೆಯನ್ನೂ ಸಹ ನೀಡಿದರು.


Click it and Unblock the Notifications











