For Quick Alerts
  ALLOW NOTIFICATIONS  
  For Daily Alerts

  Exclusive: ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ಟ ರಮ್ಯಾ ರಘುಪತಿ: ಪವಿತ್ರಾ ಲೋಕೇಶ್ ಕಥೆಯೇನು?

  |

  ತೆಲುಗು ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಸ್ಟೋರಿ ಈಗ ಜಗತ್‌ಜಾಹೀರಾಗಿದೆ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಹೋರಾಟಕ್ಕೆ ಇಳಿದ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರ ನಡುವೆ ಸಂಬಂಧ ಇರೋದು ಬೆಳಕಿಗೆ ಬಂದಿತ್ತು.

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾರೆಂದು ರಮ್ಯಾ ಆರೋಪ ಮಾಡಿದ್ದರು. ಆ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮೈಸೂರಿನ ಹೋಟೆಲ್‌ ಒಂದರಲ್ಲಿ ರಮ್ಯಾ ರಘುಪತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

  ಪವಿತ್ರಾ ಲೋಕೇಶ್‌ ಜೊತೆ ಮೈಸೂರಿನ ಹೋಟೆಲ್‌ನಲ್ಲಿರುವ ವಿಷಯ ಪತ್ನಿಗೆ ತಿಳಿಸಿದ್ದೇ ನರೇಶ್: ಕಥೆಯಲ್ಲಿ ಟ್ವಿಸ್ಟ್?ಪವಿತ್ರಾ ಲೋಕೇಶ್‌ ಜೊತೆ ಮೈಸೂರಿನ ಹೋಟೆಲ್‌ನಲ್ಲಿರುವ ವಿಷಯ ಪತ್ನಿಗೆ ತಿಳಿಸಿದ್ದೇ ನರೇಶ್: ಕಥೆಯಲ್ಲಿ ಟ್ವಿಸ್ಟ್?

  ಮೈಸೂರಿನ ಹೊಟೇಲ್‌ನಲ್ಲಿ ರಂಪಾಟ ನಡೆದ ಬಳಿಕ ಮತ್ತೆಂದೂ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮೈಸೂರು ಘಟನೆ ಬಳಿಕ ಮಾಧ್ಯಮಗಳ ಪ್ರತಿಕ್ರಿಯೆ ನೀಡುವುದಾಗಲಿ, ಒಟ್ಟಿಗೆ ಕಾಣಿಸಿಕೊಳ್ಳುವುದಾಗಲಿ ಮಾಡದೆ ಇರುವಂತೆ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತ ವರದಿಯಾಗಿತ್ತು. ಈಗ ಬಹಳ ದಿನಗಳ ಬಳಿಕ ಮತ್ತೆ ರಮ್ಯಾ ಹಾಗೂ ನರೇಶ್ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದ್ದು, ಫಿಲ್ಮಿಬೀಟ್‌ಗೆ ಲಭ್ಯವಾಗಿದೆ.

   ನರೇಶ್ ಮನೆಗೆ ಮತ್ತೆ ರಮ್ಯಾ ಎಂಟ್ರಿ

  ನರೇಶ್ ಮನೆಗೆ ಮತ್ತೆ ರಮ್ಯಾ ಎಂಟ್ರಿ

  ತೆಲುಗು ನಟ ವಿಕೆ ನರೇಶ್ ಮೂರನೇ ಪತ್ನಿ ರಮ್ಯಾ ಕಿತ್ತಾಟದ ಬಳಿಕೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೈಸೂರಿನಲ್ಲಿ ನಡೆದ ರಂಪಾಟದ ಬಳಿಕ ರಮ್ಯಾ ಕೂಡ ಸೈಲೆಂಟ್ ಆಗಿದ್ದರು. ಆದ್ರೀಗ ಮೂಲಗಳ ಕೊಟ್ಟಿರೋ ಮಾಹಿತಿ ಪ್ರಕಾರ, ಮತ್ತೆ ರಮ್ಯಾ ರಘುಪತಿ ಪತಿ ನರೇಶ್ ಮನೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೆಲ್ಲಾ ಗಲಾಟೆಯ ಬಳಿಕ ನರೇಶ್ ಹೆದರಿದ್ದು, ಈಗ ಪತ್ನಿಯನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ ಅನ್ನೋ ಮಾಹಿತಿ ಮೂಲಗಳಿಂದ ಫಿಲ್ಮಿಬೀಟ್‌ಗೆ ಸಿಕ್ಕಿದೆ.

  ಪವಿತ್ರಾ ಲೋಕೇಶ್- ನರೇಶ್, ಅಣ್ಣ ತಂಗಿಯಂತೆ: ಏನಿದು ಹೊಸ ಟ್ವಿಸ್ಟ್?ಪವಿತ್ರಾ ಲೋಕೇಶ್- ನರೇಶ್, ಅಣ್ಣ ತಂಗಿಯಂತೆ: ಏನಿದು ಹೊಸ ಟ್ವಿಸ್ಟ್?

   ನರೇಶ್ ಮೇಲೆ ರಮ್ಯಾ ಕೇಸ್

  ನರೇಶ್ ಮೇಲೆ ರಮ್ಯಾ ಕೇಸ್

  ರಮ್ಯಾ ರಘುಪತಿ ಪತಿ ನರೇಶ್ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಸುಮ್ಮನೆ ಕೂರುವುದಿಲ್ಲ. ಇನ್ನು ಕೆಲವು ದಿನಗಳಲ್ಲಿ ರಮ್ಯಾ ಪತಿ ನರೇಶ್ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವಿಚಾರವಾಗಿ ರಮ್ಯಾ ಶೀಘ್ರವೇ ಕರ್ನಾಟಕಕ್ಕೆ ಬಂದು ಮಾಧ್ಯಮಗಳ ಮುಂದೆ ಸಂಪೂರ್ಣ ಮಾಹಿತಿಯನ್ನು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಪತಿ ನರೇಶ್ ಮನೆಗೆ ಎಂಟ್ರಿ ಕೊಟ್ಟರೂ, ಕಾನೂನು ಸಮರವನ್ನು ನಿಲ್ಲಿಸಲು ರಮ್ಯಾ ಹಿಂದೇಟು ಹಾಕಿಲ್ಲ.

   ಡಿವೋರ್ಸ್ ಬೇಡ, ಮಗನಿಗೆ ತಂದೆ ಬೇಕು!

  ಡಿವೋರ್ಸ್ ಬೇಡ, ಮಗನಿಗೆ ತಂದೆ ಬೇಕು!

  ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮೊದಲಿನಿಂದಲೂ ವಿಚ್ಛೇದನ ಬೇಡ ಅಂತಲೇ ವಾದ ಮಾಡುತ್ತಿದ್ದರು. "ನರೇಶ್ ತನಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾರೆ. ಆದರೆ, ನನಗೆ ವಿಚ್ಛೇದನ ಬೇಡ. ನನ್ನ ಮಗನಿಗೆ ತಂದೆ ಬೇಕು." ಎಂದು ಪತಿ ವಿರುದ್ಧ ರಮ್ಯಾ ಹರಿಹಾಯ್ದಿದ್ದರು. ಈಗಲೂ ಅದನ್ನೇ ಪಟ್ಟು ಹಿಡಿದು ಕೂತಿದ್ದು, ಆಸ್ತಿ ಬೇಡ. ಮಗ ನಿರ್ವಹಣೆಗೆ ಜೀವನಾಂಶ ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

   ಪವಿತ್ರಾ ಲೋಕೇಶ್ ಕಥೆಯೇನು?

  ಪವಿತ್ರಾ ಲೋಕೇಶ್ ಕಥೆಯೇನು?

  ಮೈಸೂರಿನಲ್ಲಿ ನಡೆದ ಘಟನೆ ಬಳಿಕ ನಟಿ ಪವಿತ್ರಾ ಲೋಕೇಶ್ ಕೆಲವರ ವಿರುದ್ಧ ದೂರು ದಾಖಲಿಸಿದ್ದಾರೆ. ಜೊತೆಗೆ ನರೇಶ್ ವಿಚಾರವಾಗಿ ಪವಿತ್ರಾ ಲೋಕೇಶ್ ಇದೂವರೆಗೂ ಎಲ್ಲೂ ಹೇಳಿಕೆ ನೀಡಿಲ್ಲ. ಅಲ್ಲದೆ ಮಾಧ್ಯಮದ ಮುಂದೆನೂ ಬಂದಿಲ್ಲ. ನರೇಶ್ ಕೂಡ ಇದೇ ಪಾಲಸಿಯನ್ನು ಪಾಲಿಸುತ್ತಿದ್ದಾರೆ. ಈಗ ರಮ್ಯಾ ರಘುಪತಿ ಮತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದರಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮುಂದಿನ ನಡೆಯೇನು? ಅನ್ನೋದನ್ನು ಚಿತ್ರರಂಗ ಕಾತುರದಿಂದ ಎದುರು ನೋಡುತ್ತಿದೆ.

  English summary
  Naresh Pavithra Lokesh Story: Ramya Entered Husband V K Naresh House, Know More.
  Friday, September 9, 2022, 15:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X