ಯಶ್- ತ್ರಿಪ್ತಿ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್; 'ಮಫ್ತಿ' ಡೈರೆಕ್ಟರ್ ಏನಂತಾರೆ?

ಸಿನಿರಸಿಕರ ಚಿತ್ತ ಈಗ 'ಟಾಕ್ಸಿಕ್' ಸಿನಿಮಾ ಮೇಲಿದೆ. 4 ವರ್ಷಗಳ ಬಳಿಕ ಯಶ್ ನಟನೆಯ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆಗಸ್ಟ್ 26ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ಮುಂದೇನು? ಎನ್ನುವ ಪ್ರಶ್ನೆ ಶುರುವಾಗಿದೆ. ಯಶ್ ನಟನೆಯ 20ನೇ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. ನರ್ತನ್ ಹೆಸರು ಸದ್ಯ ಚರ್ಚೆಗೆ ಬಂದಿದೆ.

'ಟಾಕ್ಸಿಕ್' ಬಳಿಕ ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸುತ್ತಾರೆ. ನಾಯಕಿಯಾಗಿ ತ್ರಿಪ್ತಿ ದಿಮ್ರಿ ಮಿಂಚುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಅದಕ್ಕೆ ಕಾರಣ IMDb ವೆಬ್‌ಸೈಟ್‌ ಮಾಡಿರುವ ಅಪ್ಡೇಟ್.. ಇದನ್ನು ನೋಡಿ ಅಭಿಮಾನಿಗಳು ನಿಜ ಎಂದೇ ಭಾವಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹೆಚ್ಚಾಗುತ್ತಿದ್ದಂತೆ ನಿರ್ದೇಶಕ ನರ್ತನ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Narthan Breaks Silence on Yash Triptii Dimri Film Rumours After IMDb Update

'ಮಫ್ತಿ' ಬಳಿಕ ಯಶ್ ನಟನೆಯ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಬೇಕಿತ್ತು. ಅದಕ್ಕಾಗಿ ಚಿತ್ರಕಥೆ ಸಿದ್ಧವಾಗಿ ಸಾಕಷ್ಟು ಚರ್ಚೆ ಕೂಡ ಆಗಿತ್ತು. ಮಿಲಿಟರಿ ಆಫೀಸರ್ ಪಾತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ಆ ಕಥೆ ಕೈಬಿಟ್ಟು ಗೀತು ಮೋಹನ್ ದಾಸ್ ಹೇಳಿದ 'ಟಾಕ್ಸಿಕ್' ಕಥೆಯನ್ನು ಯಶ್ ಫೈನಲ್ ಮಾಡಿದ್ದರು. ಚಿತ್ರವನ್ನು ನಿರ್ಮಿಸಿ ನಟಿಸಿದ್ದಾರೆ. ತಾವೇ ಇಡೀ ಸಿನಿಮಾ ಜವಾಬ್ದಾರಿ ವಹಿಸಿಕೊಂಡು ಹಗಳಿರುಳು ಶ್ರಮಿಸುತ್ತಿದ್ದಾರೆ.

'ಟಾಕ್ಸಿಕ್' ಬಳಿಕ ಯಶ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಈ ಹಿಂದೆ ಯಶ್ ಹಾಗೂ ನರ್ತನ್ ಕಾಂಬಿನೇಷನ್‌ನಲ್ಲಿ ಬರಬೇಕಿದ್ದ ಕಥೆಯನ್ನೇ ಹೈಲೆಟ್ ಮಾಡಿ, ತ್ರಿಪ್ತಿ ದಿಮ್ರಿ ನಾಯಕಿ ಎಂದು IMDb ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ಗ್ಯಾರಂಟಿ ನ್ಯೂಸ್ ವಾಹಿನಿಗೆ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದಾರೆ.

'ಮಫ್ತಿ' ಬಳಿಕ ಯಶ್ ಅವರೊಟ್ಟಿಗೆ ಸಿನಿಮಾ ಮಾಡಬೇಕೆಂದು ಕಥೆ ಸಿದ್ಧಪಡಿಸಿದ್ದು ನಿಜ. ಈಗ ಲೀಕ್ ಆಗಿರುವ ಒನ್‌ಲೈನ್ ಸ್ಟೋರಿ ಕೂಡ ಹೆಚ್ಚು ಕಮ್ಮಿ ಅದೇ ಆಗಿದೆ. ಹೊಸದಾಗಿ ಯಾವುದೇ ಸಿನಿಮಾ ಮಾಡಲು ಹೊರಟ್ಟಿಲ್ಲ. ಯಶ್ ಅವ್ರು ಸದ್ಯ ಸಾಲು ಸಾಲು ಸಿನಿಮಾಗಳಲ್ಲ ಬ್ಯುಸಿ ಆಗಿದ್ದಾರೆ. ಇದೆಲ್ಲ ಅಂತೆಕಂತೆ ಸುದ್ದಿ ಅಷ್ಟೇ ಎಂದು ತಿಳಿಸಿದ್ದಾರೆ.

ಯಶ್ ಜೊತೆ ಸಿನಿಮಾ ಸಾಧ್ಯವಾಗದೇ ಇದ್ದಾಗ ಶಿವಣ್ಣ ಕಾಂಬಿನೇಷನ್‌ನಲ್ಲಿ ಭೈರತಿ ರಣಗಲ್ ಸಿನಿಮಾ ಮಾಡಿ ನರ್ತನ್ ಸಕ್ಸಸ್ ಕಂಡಿದ್ದರು. ಎರಡೂವರೆ ವರ್ಷಗಳಿಂದ ಮತ್ಯಾವುದೇ ಸಿನಿಮಾ ಅವರು ಮಾಡಲಿಲ್ಲ. ಧ್ರುವ ಸರ್ಜಾ ಜೊತೆ ಒಂದು ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ಮುಂದಿನ ಸಿನಿಮಾ ನಿರ್ದೇಶನಕ್ಕೆ ಮಾತು ಕೊಟ್ಟಿದ್ದಾರೆ. ಆದರೆ ಹೀರೊ ಯಾರು ಎನ್ನುವುದು ಇನ್ನು ಫೈನಲ್ ಆಗಿಲ್ಲ.

'ಟಾಕ್ಸಿಕ್' ಬಳಿಕ ಮುಂದೇನು ಎಂದು ಸ್ವತಃ ಯಶ್ ಕೂಡ ಈ ಕ್ಷಣಕ್ಕೆ ಕಲ್ಪನೆ ಮಾಡಿಕೊಂಡಿಲ್ಲ. ಆಗಸ್ಟ್ 26ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಅಕ್ಟೋಬರ್ ಕೊನೆ ವಾರದಲ್ಲಿ 'ರಾಮಾಯಣ' ಚಿತ್ರ ಬಿಡುಗಡೆ ಆಗಬೇಕಿದೆ. ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿ ಯಶ್ ಕೈ ಜೋಡಿಸಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಎರಡೂ ಸಿನಿಮಾಗಳು ತೆರೆಗೆ ಬರಲಿದೆ.

'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಬಿಡುಗಡೆ ಬಳಿಕ ಯಶ್ ಮುಂದಿನ ಸಿನಿಮಾ ಬಗ್ಗೆ ಆಲೋಚನೆ ಮಾಡುವ ಸಾಧ್ಯತೆಯಿದೆ. ರಾಕಿಂಗ್ ಸ್ಟಾರ್‌ಗೆ ಆಕ್ಷನ್ ಕಟ್ ಹೇಳಲು ಸಾಕಷ್ಟು ಜನ ಫಿಲ್ಮ್ ಮೇಕರ್ಸ್ ಕಾಯುತ್ತಿದ್ದಾರೆ. ಆದರೆ ಅವಕಾಶ ಯಾರಿಗೆ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Read more about: yash narthan toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X