Exclusive: ಕನ್ನಡ 'ಮಫ್ತಿ'.. ಪ್ಯಾನ್‌ ಇಂಡಿಯಾ 'ಭೈರತಿ ರಣಗಲ್': ಏನಿದು ನರ್ತನ್ ಟ್ವಿಸ್ಟ್?

ಶಿವರಾತ್ರಿ ಸಂಭ್ರಮದಲ್ಲಿ ಶಿವರಾಜ್‌ಕುಮಾರ್- ನರ್ತನ್ ಡೆಡ್ಲಿ ಕಾಂಬಿನೇಷನ್‌ 'ಭೈರತಿ ರಣಗಲ್' ಸಿನಿಮಾ ಅನೌನ್ಸ್ ಆಗಿತ್ತು. ಇದೀಗ ಚಿತ್ರತಂಡದಿಂದ ಮತ್ತೊಂದು ಕ್ರೇಜಿ ನ್ಯೂಸ್ ಹೊರ ಬಿದ್ದಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗಪ್ಪಳಿಸಲಿದೆ.

ಸ್ಯಾಂಡಲ್‌ವುಡ್‌ನಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ಶಿವಣ್ಣನ ಸಿನಿಮಾಗಳು ಪರಭಾಷೆಯಲ್ಲೂ ರಿಲೀಸ್ ಆಗಿ ಸದ್ದು ಮಾಡ್ತಿವೆ. ಆದರೆ ಏಕಕಾಲಕ್ಕೆ ದೊಡ್ಡಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲೂ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. 'ಭೈರತಿ ರಣಗಲ್' ಅವತಾರದಲ್ಲಿ ಶಿವಣ್ಣ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಿದ್ದಾರೆ. ಮಾರ್ಚ್‌ 5ಕ್ಕೆ ಚಿತ್ರದ ಎಲ್ಲಾ ಭಾಷೆಗಳ ಟೈಟಲ್ ಡಿಸೈನ್ ರಿವೀಲ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಸುದ್ದಿ ಸಹಜವಾಗಿಯೇ ಕನ್ನಡ ಸಿನಿರಸಿಕರಿಗೆ ಸಂತಸ ತಂದಿದೆ.

5 ವರ್ಷಗಳ ಹಿಂದೆ ಬಂದ 'ಮಫ್ತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಂದಿನಿಂದಲೇ ಸಿನಿಮಾ ಪ್ರೀಕ್ವೆಲ್ ಬಗ್ಗೆ ಕುತೂಹಲ ಕೆರಳಿತ್ತು. ಇದೀಗ ಕುತೂಹಲ ತಣಿಯುವ ಸುದ್ದಿ ಬಂದಿದೆ.

ಕನ್ನಡದಲ್ಲಿ 'ಮಫ್ತಿ' ಅಬ್ಬರ

ಕನ್ನಡದಲ್ಲಿ 'ಮಫ್ತಿ' ಅಬ್ಬರ

2017ರಲ್ಲಿ 'ಮಫ್ತಿ' ಸಿನಿಮಾ ತೆರಗಪ್ಪಳಿಸಿತ್ತು. ಮಾಫಿಯಾ ಡಾನ್ 'ಭೈರತಿ ರಣಗಲ್' ಆಗಿ ಶಿವಣ್ಣ ಅಬ್ಬರಿಸಿದರೆ ಪೊಲೀಸ್ ಆಫೀಸರ್ ರೋಲ್‌ನಲ್ಲಿ ಶ್ರೀಮುರಳಿ ಮಿಂಚಿದ್ದರು. ಶಿವಣ್ಣ ಲುಕ್‌, ಖದರ್ ಮಾತ್ರ ಅಭಿಮಾನಿಗಳ ಹೃದಯ ಗೆದ್ದಿತ್ತು. ಆದರೆ ಮಫ್ತಿ ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಅದರ ಪ್ರೀಕ್ವೆಲ್ 'ಭೈರತಿ ರಣಗಲ್' ಚಿತ್ರವನ್ನು 5 ಭಾಷೆಗಳಲ್ಲಿ ಹೇಳುವ ಪ್ರಯತ್ನ ನಡೀತಿದೆ. 'ಮಫ್ತಿ' ಕಥೆ ಗೊತ್ತಿಲ್ಲದೇ ಪರಭಾಷಾ ಪ್ರೇಕ್ಷಕರಿಗೆ 'ಭೈರತಿ ರಣಗಲ್' ಕಥೆ ಕನೆಕ್ಟ್ ಆಗುತ್ತಾ ಎನ್ನುವ ಪ್ರಶ್ನೆ ಏಳುವುದು ಸಹಜ.

ಐಡಿಯಾ ಬಗ್ಗೆ ನರ್ತನ್ ಮಾತು

'ಭೈರತಿ ರಣಗಲ್' ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಟ್ಟಿಕೊಡುವ ಬಗ್ಗೆ ನಿರ್ದೇಶಕ ನರ್ತನ್ ಫಿಲ್ಮಿಬೀಟ್‌ ಜೊತೆ ಮಾತನಾಡಿದ್ದಾರೆ. ಮಾರ್ಚ್‌ 5ಕ್ಕೆ ಎಲ್ಲಾ ಭಾಷೆಗಳ ಟೈಟಲ್ ಡಿಸೈನ್ ಬರುತ್ತೆ. ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. 'ಮಫ್ತಿ' ಸಿನಿಮಾ ನೋಡದವರಿಗೂ 'ಭೈರತಿ ರಣಗಲ್' ಅರ್ಥವಾಗುತ್ತದೆ. ಇಷ್ಟವಾಗುತ್ತದೆ. ಸಿನಿಮಾ ನೋಡಿದವರು ಎಂಜಾಯ್ ಮಾಡುತ್ತಾರೆ. 'ಮಫ್ತಿ' ಹಿಂದಿ ವರ್ಷನ್‌ಗೆ ಯೂಟ್ಯೂಬ್‌ನಲ್ಲಿ 40 ಮಿಲಿಯನ್‌ಗೂ ಹೆಚ್ಚು ವೀವ್ಸ್ ಸಿಕ್ಕಿದೆ. ಹಾಗಾಗಿ ಸಮಸ್ಯೆ ಇಲ್ಲ" ಎಂದಿದ್ದಾರೆ.

'ಮಫ್ತಿ' 4 ಭಾಷೆಗಳಿಗೆ ಡಬ್?

'ಮಫ್ತಿ' 4 ಭಾಷೆಗಳಿಗೆ ಡಬ್?

ಒಟ್ನಲ್ಲಿ ಸರಣಿಯ ಒಂದು ಚಿತ್ರವನ್ನು ಒಂದು ಭಾಷೆಯಲ್ಲಿ ರಿಲೀಸ್ ಮಾಡಿ ಮತ್ತೊಂದು ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿರುವುದು ಮೊದಲ ಪ್ರಯತ್ನ ಎನ್ನಬಹುದು. ಇನ್ನು ಕೆಲ ತೆಲುಗು ಪ್ರೇಕ್ಷಕರು ಕೂಡ 'ಮಫ್ತಿ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 'ಭೈರತಿ ರಣಗಲ್' ತೆರೆಗೆ ಬರುವುದಕ್ಕು ಮುನ್ನ 'ಮಫ್ತಿ' ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಿ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನರ್ತನ್ ಅಂತಹ ಪ್ರಯತ್ನ ಕೂಡ ನಡೀತಿದೆ ಎಂದಿದ್ದಾರೆ.

ಚೊಚ್ಚಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್

ಚೊಚ್ಚಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್

ಸೆಂಚುರಿ ಸ್ಟಾರ್ ಒಂದು ಪಕ್ಕಾ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಸದ್ಯ ಶಿವಣ್ಣ 'ಘೋಸ್ಟ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಯೋಗರಾಜ್ ಭಟ್ಟರ 'ಕರಟಕ ದಮನಕ' ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಕೆಲಸಗಳು ನಡೀತಿದೆ. ಆದರೆ ಈ 3 ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುವುದಾಗಿ ಘೋಷಿಸಿಲ್ಲ. ಈ ಹಿಂದೆ 'ಅಶ್ವತ್ಥಾಮ' ಎನ್ನುವ ಸಿನಿಮಾ ಘೋಷಣೆಯಾಗಿತ್ತು. ಆದರೆ ಅದು ತಡವಾಗುತ್ತಿದೆ. ಹಾಗಾಗಿ 'ಭೈರತಿ ರಣಗಲ್' ಅಧಿಕೃತವಾಗಿ ಶಿವಣ್ಣನ ಚೊಚ್ಚಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಎನ್ನಬಹುದು.

More from Filmibeat

English summary
Narthan's Bhairathi Ranagal starring Shivarajkumar to have pan-India release in 5 languages. Bhairathi Ranagal Title Logo Poster will be out in all languages on March 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X