For Quick Alerts
  ALLOW NOTIFICATIONS  
  For Daily Alerts

  'ಮಫ್ತಿ' ಆದ್ಮೇಲೆ ನಿರ್ದೇಶಕ ನರ್ತನ್ ಕಣ್ಣು ಯಶ್ ಮೇಲೆ.!

  By Harshitha
  |
  ಮಫ್ತಿ ನಂತರ ನರ್ತನ್ ಅಖಾಡದಲ್ಲಿ ಯಶ್ ಹವಾ | Filmibeat Kannada

  'ಉಗ್ರಂ' ಹಾಗೂ 'ರಥಾವರ' ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ನರ್ತನ್ 'ಮಫ್ತಿ' ಎಂಬ ಸೂಪರ್ ಹಿಟ್ ಚಿತ್ರ ಕೊಟ್ಮೇಲೆ 'ಸ್ಟಾರ್ ಡೈರೆಕ್ಟರ್' ಪಟಕ್ಕೆ ಏರಿದರು.

  'ಮಫ್ತಿ' ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಆಕ್ಷನ್ ಕಟ್ ಹೇಳಿದ ನರ್ತನ್ ಇದೀಗ ರಾಕಿಂಗ್ ಸ್ಟಾರ್ ಯಶ್ ಗಾಗಿ ಒಂದು ಚಿತ್ರಕಥೆ ರೆಡಿ ಮಾಡ್ತಿದ್ದಾರೆ.

  ಹೌದು, 'ಮಫ್ತಿ' ಬಳಿಕ ಯಶ್ ಗಾಗಿ ಒಂದು ಸಿನಿಮಾ ಮಾಡಲು ನರ್ತನ್ ತಯಾರಿ ನಡೆಸುತ್ತಿದ್ದಾರೆ. ಇದು ಗಾಸಿಪ್ ಇರಬೇಕು ಎಂದು ಮೂಗು ಮುರಿಯಬೇಡಿ. ''ಯಶ್ ಗೆ ನಾನು ಆಕ್ಷನ್ ಕಟ್ ಹೇಳುವುದು ಪಕ್ಕಾ'' ಅಂತ ಸ್ವತಃ ನರ್ತನ್ ಹೇಳಿದ್ದಾರೆ. ಅದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

  'ಮಫ್ತಿ' ನಿರ್ದೇಶಕನ ಮುಂದಿನ ಸಿನಿಮಾಗೆ 'ಯಶ್' ನಾಯಕ'ಮಫ್ತಿ' ನಿರ್ದೇಶಕನ ಮುಂದಿನ ಸಿನಿಮಾಗೆ 'ಯಶ್' ನಾಯಕ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನರ್ತನ್ ಹಾಗೂ ಶ್ರೀಮುರಳಿ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಮುಂದಿನ ಚಿತ್ರದ ಪ್ಲಾನ್ ಬಗ್ಗೆ ನರ್ತನ್ ಬಾಯ್ಬಿಟ್ಟರು.

  ರಾಕಿಂಗ್ ಸ್ಟಾರ್ ಯಶ್ ಗಾಗಿ ಮಾಸ್ ಎಂಟರ್ ಟೇನರ್ ಚಿತ್ರ ರೆಡಿ ಮಾಡುತ್ತಿದ್ದಾರೆ ನರ್ತನ್. ಪೊರ್ಕಿಯೊಬ್ಬ ಸಮಾಜಕ್ಕೋಸ್ಕರ ಬದುಕಿದರೆ ಹೇಗಿರುತ್ತೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.

  ಸದ್ಯ ಯಶ್ 'ಕೆ.ಜಿ.ಎಫ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಅದು ಮುಗಿದ ಬಳಿಕ ಯಶ್ ಯಾವ ಚಿತ್ರಕ್ಕೆ ಜೈ ಅಂತಾರೋ, ನೋಡ್ಬೇಕು.

  English summary
  Director Narthan of 'Mufti' fame to direct Yash in his next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X