For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ನಡೆಯಲಿದೆ ನಾಸಿರುದ್ದೀನ್ ಶಾ ನಾಟಕ ಪ್ರದರ್ಶನ

  |

  ಖ್ಯಾತ ಬಾಲಿವುಡ್ ನಟ, ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ನಾಸಿರುದ್ದೀನ್ ಶಾ ಅವರ ಮತ್ತೊಂದು ನಾಟಕ ಬೆಂಗಳೂರಿನಲ್ಲಿ ಪ್ರದರ್ಶನ ಆಗುತ್ತಿದೆ. ತಮ್ಮ 'ದಿ ಫಾದರ್' ನಾಟಕವನ್ನು ಈ ಬಾರಿ ಬೆಂಗಳೂರಿಗೆ ಅವರು ತಂದಿದ್ದಾರೆ.

  ಬೆಂಗಳೂರಿನ ಜೆಪಿ ನಗರದ ರಂಗಶಂಕರದಲ್ಲಿ ಏಪ್ರಿಲ್ 23ರಿಂದ ನಾಟಕ ಪ್ರದರ್ಶನ ಶುರು ಆಗುತ್ತಿದೆ. ಮೇ 4ರ ವರೆಗೆ ಸೋಮವಾರವನ್ನು ಹೊರತು ಪಡಿಸಿ ಪ್ರತಿದಿನ ಕೂಡ ನಾಟಕ ನಡೆಯುತ್ತದೆ. 11 ದಿನಗಳ ಕಾಲ ನಾಟಕ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ.

  ಪ್ರತಿ ದಿನವೂ ಸಂಜೆ 7.30ಕ್ಕೆ ನಾಟಕ ಪ್ರದರ್ಶನ ಪ್ರಾರಂಭ ಆಗಲಿದೆ. ನಾಟಕದ ಅವಧಿ 120 ನಿ‍ಮಿಷಗಳಾಗಿವೆ. ಟಿಕೆಟ್ ದರ 750 ರೂಪಾಯಿ.

  ನಾಸಿರುದ್ದೀನ್ ಶಾ ವರ್ಷ, ಎರಡು ವರ್ಷಗಳಿಗೊಮ್ಮೆ ತಮ್ಮ ನಾಟಕಗಳನ್ನು ಬೆಂಗಳೂರಿಗೆ ತರುತ್ತಾರೆ. ಈ ಬಾರಿ 'ದಿ ಫಾದರ್' ಜೊತೆ ಬಂದಿದ್ದಾರೆ. 'ದಿ ಫಾದರ್' ಮೂಲ ಫ್ರೆಂಚ್ ಭಾಷೆಯ ಫ್ಯಾಮಿಲಿ ಡ್ರಾಮಾವಾಗಿದೆ. ಫ್ಲೋರಿಯನ್ ಝೆಲ್ಲರ್ ಇದನ್ನು ಬರೆದಿದ್ದರು. ಕ್ರಿಸ್ಟೋಫರ್ ಹ್ಯಾಂಪ್ಟನ್ ಅದನ್ನು ಭಾಷಾಂತರ ಮಾಡಿದ್ದಾರೆ.

  ನಾಸಿರುದ್ದೀನ್ ಶಾ ನಿರ್ದೇಶನ, ರತ್ನ ಪಾಠಕ್ ಷಾ ಸಹ ನಿರ್ದೇಶನ ಹಾಗೂ ಜೈರಾಜ್ ಪಾಟೀಲ್ ನಿರ್ಮಾಣದ ನಾಟಕ ಇದಾಗಿದೆ.

  naseeruddin shahs the father play will be held in bengaluru.

  ನಾಸಿರುದ್ದೀನ್ ಶಾ, ರತ್ನ ಪಾಠಕ್ ಷಾ, ಸಯನ್ ಮುಖರ್ಜಿ ಹಾಗೂ ಭಾವನ ಪನಿ ನಾಟಕದಲ್ಲಿ ಅಭಿನಯಿಸುವ ಕಲಾವಿದರಾಗಿದ್ದಾರೆ. ಮುಂಬೈ ಪ್ರೇಕ್ಷಕರನ್ನು ರಂಜಿಸಿರುವ ಈ ನಾಟಕ ಈಗ ಬೆಂಗಳೂರಿನ ಜನರ ಮುಂದೆ ಬಂದಿದೆ.

  English summary
  Bollywood actor Naseeruddin Shah's 'The Father' play will be held in Rangashankara Bengaluru on April 23 to May 4th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X