100, 200 ಕೋಟಿ ಅಲ್ಲ, 4 ದಿನಗಳಲ್ಲಿ 'ನಟ ಭಯಂಕರ' ಮಾಡಿದ ಕಲೆಕ್ಷನ್ ಇಷ್ಟು!

ಸದ್ಯ ಸ್ಯಾಂಡಲ್‌ವುಡ್ ವಿವಾದಗಳ ಗೂಡಾಗಿದೆ. ಅದರಲ್ಲೂ ಕಳೆದ ಹಲವು ವರ್ಷಗಳಿಂದ ಕಲೆಕ್ಷನ್ ವಿಚಾರವಾಗಿ ತುಸು ಹೆಚ್ಚೇ ವಿವಾದಕ್ಕೊಳಗಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಡಿಟ್ ಬಲ್ಲವರು ತಮ್ಮ ಮನಸ್ಸಿಗೆ ಬಂದಷ್ಟು ಕೋಟಿಗಳನ್ನು ಹಾಕಿ ಹೊಸದಾಗಿ ಬಿಡುಗಡೆಗೊಂಡ ಚಿತ್ರಗಳು ಅಷ್ಟು ಕೋಟಿ ಗಳಿಸಿತು, ಇಷ್ಟು ಕೋಟಿ ಗಳಿಸಿತು ಎಂದು ಪೋಸ್ಟರ್ ಮಾಡಿ ವೈರಲ್ ಮಾಡುತ್ತಿದ್ದಾರೆ ಹಾಗೂ ಟ್ರೋಲ್ ಕೂಡ ಆಗುತ್ತಿದ್ದಾರೆ.

ಹೌದು, ಕನ್ನಡ ಚಿತ್ರರಂಗದ ಚಿತ್ರತಂಡಗಳು ಚಿತ್ರಗಳು ಮಾಡಿದ ಕಲೆಕ್ಷನ್ ಮಾಹಿತಿಯನ್ನು ಹಂಚಿಕೊಳ್ಳದ ಕಾರಣ ಈ ರೀತಿಯ ಎಡಿಟ್‌ಗಳನ್ನು ಮಾಡಿ ತಪ್ಪು ತಪ್ಪಾದ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಈ ಎಡಿಟರ್‌ಗಳು. ಇನ್ನು ಕೆಲವರು ಇದು ಫೇಕ್ ಕಲೆಕ್ಷನ್ ಎಂದು ಟ್ರೋಲ್ ಮಾಡಿದರೆ, ಇನ್ನೂ ಕೆಲವರು ಅದನ್ನೇ ನಿಜವೆಂದು ನಂಬಿ ಶೇರ್ ಮಾಡಿ ದಾಖಲೆ ನಿರ್ಮಿಸಿದೆ ಎಂದು ಬರೆದುಕೊಂಡಿದ್ದಾರೆ. ಇಂತಹ ನಕಲಿ ಪೋಸ್ಟರ್‌ಗಳಿಂದ ಫ್ಯಾನ್‌ವಾರ್‌ಗಳೂ ಸಹ ಆಗಿವೆ.

ಇಂತಹ ಚಿತ್ರಗಳ ಸಾಲಿಗೆ ಈಗ ನೂತನವಾಗಿ ಸೇರ್ಪಡೆಗೊಂಡಿರುವ ಚಿತ್ರವೆಂದರೆ ಅದು ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರ. ಹೌದು, ಪ್ರಥಮ್ ನಾಯಕನಾಗಿ ನಟಿಸಿರುವ ಮೂರನೇ ಚಿತ್ರ ನಟ ಭಯಂಕರ ಕಳೆದ ಶುಕ್ರವಾರ ಬಿಡುಗಡೆಗೊಂಡಿತ್ತು. ಚಿತ್ರ ತನ್ನ ಮೊದಲ ದಿನವನ್ನು ಪೂರೈಸಿದ ಬೆನ್ನಲ್ಲೇ ಚಿತ್ರ ಬಿಡುಗಡೆ ದಿನ ಬರೋಬ್ಬರಿ 35.15 ಕೋಟಿ ಗಳಿಕೆಯನ್ನು ಮಾಡಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಬಳಿಕ ಎರಡೇ ದಿನಕ್ಕೆ 109 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಆದರೆ ಇದೆಲ್ಲಾ ನಕಲಿ ಪೋಸ್ಟರ್ ಎಂಬುದು ತಿಳಿದುಬಂದಿದೆ. ಚಿತ್ರದ ನಿರ್ಮಾಪಕರು ಚಿತ್ರ ಎಷ್ಟು ಗಳಿಕೆ ಮಾಡಿದೆ ಎಂಬುದನ್ನು ಹೇಳಿಕೊಳ್ಳದಿದ್ದರೂ ಸಹ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಮಾತ್ರ ಚಿತ್ರ ಯಾವ ದಿನ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರ ವಿವರ ಈ ಕೆಳಕಂಡಂತಿದೆ..

ಚಿತ್ರ ನಾಲ್ಕು ದಿನಗಳಲ್ಲಿ ಗಳಿಸಿದ್ದಿಷ್ಟು!

ಚಿತ್ರ ನಾಲ್ಕು ದಿನಗಳಲ್ಲಿ ಗಳಿಸಿದ್ದಿಷ್ಟು!

ನಟ ಭಯಂಕರ ಚಿತ್ರ ಬಿಡುಗಡೆಯ ದಿನ 25 ಲಕ್ಷ ರೂಪಾಯಿಗಳನ್ನು ಕಲೆಕ್ಷನ್ ಮಾಡಿತ್ತು. ಬಳಿಕ ಎರಡನೇ ದಿನ 39 ಲಕ್ಷ ರೂಪಾಯಿ ಗಳಿಸಿದ ನಟ ಭಯಂಕರ ಮೂರನೇ ದಿನ 49 ಲಕ್ಷ ಹಾಗೂ ನಾಲ್ಕನೇ ದಿನ 43 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ನಟ ಭಯಂಕರ 4 ದಿನಗಳಲ್ಲಿ 1.56 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ ಚಿತ್ರತಂಡ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ನೂರು, ಇನ್ನೂರು ಕೋಟಿ ಎಲ್ಲಾ ನಕಲಿ

ನೂರು, ಇನ್ನೂರು ಕೋಟಿ ಎಲ್ಲಾ ನಕಲಿ

ಇನ್ನು ನಟ ಭಯಂಕರ ಮೊದಲ ದಿನವೇ 35 ಕೋಟಿ ಗಳಿಸಿದೆ ಹಾಗೂ ಎರಡನೇ ದಿನಕ್ಕೆ 109 ಕೋಟಿ ಗಳಿಸಿದೆ ಮತ್ತು ಮೊದಲ ನಾಲ್ಕು ದಿನಗಳಲ್ಲಿ ಇನ್ನೂರು ಕೋಟಿ ಗಳಿಸಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಇದೆಲ್ಲಾ ನಕಲಿಯಾಗಿದ್ದು, ಈ ಪೋಸ್ಟರ್‌ಗಳನ್ನೆಲ್ಲಾ ಕಿಡಿಗೇಡಿಗಳು ಎಡಿಟ್ ಮಾಡಿ ಜನರ ದಿಕ್ಕು ತಪ್ಪಿಸಿದ್ದಾರಷ್ಟೇ..

ಪ್ರಥಮ್ ಕೂಡ ಸ್ಪಷ್ಟನೆ ನೀಡಿದ್ರು

ಪ್ರಥಮ್ ಕೂಡ ಸ್ಪಷ್ಟನೆ ನೀಡಿದ್ರು

ನಟ ಭಯಂಕರ ಚಿತ್ರದ ಕುರಿತು ಹರಿದಾಡುತ್ತಿದ್ದ ಕಲೆಕ್ಷನ್ ಪೋಸ್ಟರ್‌ಗಳ ಕುರಿತು ಪ್ರತಿಕ್ರಿಯಿಸಿದ್ದ ಚಿತ್ರದ ನಟ ಹಾಗೂ ನಿರ್ದೇಶಕ ಪ್ರಥಮ್ ಟ್ವೀಟ್ ಮಾಡುವ ಮೂಲಕ ಅವೆಲ್ಲವೂ ಸಹ ಸುಳ್ಳು ಎಂಬುದನ್ನು ತಿಳಿಸಿದ್ದರು. ಅಷ್ಟೇ ಅಲ್ಲದೇ ಒಂದೊಳ್ಳೆ ಎಂಟರ್‌ಟೈಮ್‌ಮೆಂಟ್ ಚಿತ್ರವನ್ನು ಮಾಡಿದ್ದು, ದಯವಿಟ್ಟು ಚಿತ್ರವನ್ನು ನೋಡಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದರು.

More from Filmibeat

English summary
Nata Bhayankara 4 days collection is 1.56 crores as per box office trackers. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X