Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊದಲ ದಿನ ಕ್ರಾಂತಿಗಿಂತ ನಟ ಭಯಂಕರ ಚಿತ್ರದ ಕಲೆಕ್ಷನ್ ಹೆಚ್ಚು? ಪೋಸ್ಟರ್ ಬಗ್ಗೆ ಪ್ರಥಮ್ ಹೇಳಿದ್ದಿಷ್ಟು!
ಕಳೆದ ವಾರವಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ನಟನೆಯ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆಯಾಯಿತು. ಮೊದಲ ದಿನವೇ 12.85 ಕೋಟಿ ಗಳಿಕೆ ಮಾಡಿದ ಕ್ರಾಂತಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಎರಡು ವರ್ಷಗಳ ಬಳಿಕ ತೆರೆಗೆ ಬಂದ ತಮ್ಮ ನೆಚ್ಚಿನ ನಟನ ಚಿತ್ರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡರು.
ಇನ್ನು ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಕ್ರಾಂತಿ ನಂತರದ ದಿನಗಳಲ್ಲಿ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು. ಒಂದೆಡೆ ಪಠಾಣ್ ಪೈಪೋಟಿ ಹಾಗೂ ನೆಗೆಟಿವ್ ವಿಮರ್ಶೆ ಚಿತ್ರಕ್ಕೆ ಎದುರಾಯಿತು. ಎಷ್ಟೇ ನೆಗೆಟಿವ್ ವಿಮರ್ಶೆ ಎದುರಾದರೂ ನಮ್ಮ ಚಿತ್ರ ಗೆದ್ದಿದೆ ಎಂದು ಚಿತ್ರತಂಡ ಹೇಳಿಕೊಂಡಿತು. ಕೆಲ ಮಾಧ್ಯಮಗಳು ಚಿತ್ರ ಗಳಿಕೆ ಹಾಗೂ ತನ್ನ ವಿವಿಧ ರೈಟ್ಸ್ಗಳ ಮಾರಾಟದ ಹಣ ಸೇರಿ ನೂರು ಕೋಟಿ ಕ್ಲಬ್ ಸೇರಿದೆ ಎಂದು ಪ್ರಕಟಿಸಿದವು. ಅಲ್ಲದೇ ಕ್ರಾಂತಿ ಚಿತ್ರತಂಡ ಸಹ ನೂರು ಕೋಟಿ ಎಂದು ಮಾಡಲಾಗಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿತು.
ಆದರೆ ಸಾಮಾನ್ಯ ಸಿನಿ ರಸಿಕರು ಈ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಮೊದಲ ದಿನ ಚಿತ್ರ 35 ಕೋಟಿ ಗಳಿಸಿದೆ ಎಂದು ಹರಿದಾಡಿದ್ದ ಪೋಸ್ಟರ್ ಅನ್ನು ಟ್ರೋಲ್ ಮಾಡಿದ್ದರು. ಇದು ನಕಲಿ ಕಲೆಕ್ಷನ್ ರಿಪೋರ್ಟ್, ಈ ರೀತಿ ಮಾಡಿ ಜನರಿಗೆ ತಪ್ಪು ಮಾಹಿತಿ ನೀಡಬೇಡಿ ಎಂದಿದ್ದರು. ಆದರೆ ದರ್ಶನ್ ಅಭಿಮಾನಿಗಳ ಪೇಜ್ಗಳಲ್ಲಿ ಮತ್ತು ಟ್ರೋಲ್ ಪೇಜ್ಗಳಲ್ಲಿ ಈ ಪೋಸ್ಟರ್ ಹರಿದಾಡಿತ್ತು. ಇದೀಗ ಈ ಪೋಸ್ಟರ್ಗೆ ಕೌಂಟರ್ ಕೊಡುವಂತ ಮತ್ತೊಂದು ಪೋಸ್ಟರ್ ಹೊರಬಿದ್ದಿದೆ. ಅದೂ ಸಹ ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ್ದು. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಪೋಸ್ಟರ್ ಇದಾಗಿದ್ದು, ಸದ್ಯ ಇದೊಂದು ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಕ್ರಾಂತಿಗಿಂತ ಹೆಚ್ಚು ಕಲೆಕ್ಷನ್
ನಿನ್ನೆ ( ಫೆಬ್ರವರಿ 3 ) ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾ ತೆರೆಗೆ ಬಂತು. ಮೊದಲ ದಿನದ ಪ್ರದರ್ಶನಗಳು ಮುಗಿದ ಕೂಡಲೇ ಈ ಚಿತ್ರ ಮೊದಲ ದಿನವೇ ಬರೋಬ್ಬರಿ 35.5 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಪೋಸ್ಟರ್ ಹೊರಬಿತ್ತು. ಇನ್ನು ಈ ಪೋಸ್ಟರ್ ಅನ್ನು ಕ್ರಾಂತಿ ಚಿತ್ರ ಮೊದಲ ದಿನ 35.3 ಕೋಟಿ ಕಲೆಕ್ಷನ್ ಮಾಡಿತ್ತು ಎಂಬ ಪೋಸ್ಟರ್ ಜತೆ ಹೋಲಿಸಿ ಪ್ರಥಮ್ ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಟ್ರೋಲ್ ಮಾಡಲಾಗಿದೆ. ಸದ್ಯ ಈ ಹೋಲಿಕೆಯ ಟ್ರೋಲ್ ವೈರಲ್ ಆಗಿದೆ. ಹಾಗೂ ಇದು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪಷ್ಟನೆ ನೀಡಿದ ಪ್ರಥಮ್
ಹೀಗೆ ಕ್ರಾಂತಿ ಚಿತ್ರಕ್ಕಿಂತ ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಟ್ರೋಲ್ ವೈರಲ್ ಆದ ಬೆನ್ನಲ್ಲೇ ನಟ ಪ್ರಥಮ್ ಇದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಹಾಗೂ ಕ್ರಾಂತಿ ಚಿತ್ರದ ಕಲೆಕ್ಷನ್ ಬಗ್ಗೆ ಮಾಡಲಾಗಿರುವ ಟ್ರೋಲ್ ಫೋಟೊವನ್ನು ಹಂಚಿಕೊಂಡಿರುವ ಪ್ರಥಮ್ "ಇದು ಸುಳ್ಳು ಸುದ್ದಿ. ನಾನು ಪೂಜೆ ಮಾಡೋ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ಇದಕ್ಕೂ ನನಗೂ ಸಂಬಂಧವಿಲ್ಲ. ಹಾಗೂ ಮುಖ್ಯವಾಗಿ ನಮ್ಮ ಚಿತ್ರ ಅಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್ ಸರ್ ದೊಡ್ಡವರು. ಸುಮ್ಮನೆ ಸುಳ್ಳು ಹೋಲಿಕೆ ಬೇಡ. ಚೆನ್ನಾಗಾಗ್ತಾ ಇದೆ ಸಂತೋಷ. ಆದರೆ ಈಶ್ವರನ ಸಾಕ್ಷಿಯಾಗಿ ಇದು ಸುಳ್ಳು ಹಾಗೂ ನನಗೂ ಇದಕ್ಕೂ ಸಂಬಂಧವಿಲ್ಲ. ದಯವಿಟ್ಟು ನಿಲ್ಲಿಸಿ" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
ಎರಡೂ ಅಫಿಷಿಯಲ್ ಪೋಸ್ಟರ್ ಅಲ್ಲ
ಇನ್ನು ಈ ರೀತಿ ಟ್ರೋಲ್ಗೆ ಒಳಗಾಗಿರುವ ಈ ಎರಡೂ ಪೋಸ್ಟರ್ಗಳೂ ಸಹ ಅಫಿಷಿಯಲ್ ಅಲ್ಲ. ಚಿತ್ರವನ್ನು ನಿರ್ಮಿಸುವ ನಿರ್ಮಾಪಕರು ಚಿತ್ರ ಮೊದಲ ದಿನ ಇಷ್ಟನ್ನೇ ಗಳಿಕೆ ಮಾಡಿದೆ ಎಂದು ತಾವೇ ಪೋಸ್ಟರ್ ಬಿಡುಗಡೆ ಮಾಡಿ ಹೇಳಿದರೆ ಮಾತ್ರ ಅದು ಅಧಿಕೃತ ಕಲೆಕ್ಷನ್ ಪೋಸ್ಟರ್ ಎನಿಸಿಕೊಳ್ಳಲಿದೆ. ಈ ರೀತಿಯ ರೂಢಿ ತೆಲುಗು ಚಿತ್ರರಂಗದಲ್ಲಿದ್ದು, ಕೆಜಿಎಫ್ ಹಾಗೂ ರಾಬರ್ಟ್ ಚಿತ್ರತಂಡಗಳು ಸಹ ಮೊದಲ ದಿನದ ಕಲೆಕ್ಷನ್ ಅನ್ನು ಬಿಚ್ಚಿಟ್ಟು ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡಿದ್ದವು. ಒಟ್ಟಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆಗಳು ಮೊದಲ ದಿನ ಚಿತ್ರ ಏನು ಕಲೆಕ್ಷನ್ ಮಾಡಿದೆ ಎಂಬುದನ್ನು ಬಿಚ್ಚಿಡದಿದ್ದರೆ ಈ ರೀತಿಯ ಗೊಂದಲ ಹಾಗೂ ಇದರಿಂದ ವಿವಾದ ಉಂಟಾಗುವುದು ತಪ್ಪಲ್ಲ.