'ನಟಸಾರ್ವಭೌಮ'ನ ಪಾಲಿಗೆ ನಿಜವಾದ ವಿಲನ್ ಆದ ತಮಿಳು ರಾಕರ್ಸ್
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಯಶಸ್ವಿ 25 ದಿನಗಳನ್ನ ಪೂರೈಸಿ, ರಾಜ್ಯಾದ್ಯಂತ ವಿಜಯಯಾತ್ರೆ ಆರಂಭಿಸಿದೆ. ಸಿನಿಮಾವನ್ನ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಸ್ವತಃ ಪುನೀತ್ ರಾಜ್ಯದ ಹಲವು ಕಡೆ ವಿಜಯಯಾತ್ರೆ ಹೊರಟಿದ್ದಾರೆ.
ಹೀಗಿರುವಾಗ, ನಟಸಾರ್ವಭೌಮ ಸಿನಿಮಾ ಪೈರಸಿಗೆ ಒಳಗಾಗಿದ್ದು, ಇಡೀ ಸಿನಿಮಾ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ. ಕನ್ನಡ ಸಿನಿಮಾಗಳಿಗೆ ಪೈರಸಿ ಸಮಸ್ಯೆ ಕಮ್ಮಿ ಅಥವಾ ಪೈರಸಿಯೇ ಇಲ್ಲ ಎಂದು ದಿಟ್ಟೆದೆಯಿಂದ ಹೇಳಿಕೊಳ್ಳುತ್ತಿದ್ದವರು ಈಗ ತಲೆತಗ್ಗಿಸುವ ಸನ್ನಿವೇಶ ಬಂದಿದೆ.
ಹೌದು, ಪುನೀತ್ ರಾಜ್ ಕುಮಾರ್ ಇಂಡಸ್ಟ್ರಿಯಲ್ಲಿ ದೊಡ್ಟ ನಟ ಮತ್ತು ನಿರ್ಮಾಪಕ. ಇಂತವರ ಚಿತ್ರಗಳೇ ಪೈರಸಿಗೆ ಸಿಲುಕಿಕೊಂಡರೇ ಅದಕ್ಕಿಂತ ದುರ್ದೈವ ಇನ್ನೊಂದಿಲ್ಲ. ಅಷ್ಟಕ್ಕೂ, ಪೂರ್ತಿ ಸಿನಿಮಾ ಸಿಕ್ಕಿದ್ದು ಎಲ್ಲಿ? ಮುಂದೆ ಓದಿ....

ತಮಿಳು ರಾಕರ್ಸ್ ಗೆ ಬಲಿಯಾದ ನಟಸಾರ್ವಭೌಮ
ಹೊಸ ಹೊಸ ಸಿನಿಮಾಗಳು ಬಿಡುಗಡೆಯಾಗದ ಕೆಲವೇ ಗಂಟೆಗಳಲ್ಲಿ ಇಡೀ ಚಿತ್ರವನ್ನೇ ಪೈರಸಿ ಮಾಡುವ ಹಲವು ವೆಬ್ ಸೈಟ್ ಗಳಿವೆ. ಅದರಲ್ಲೂ ತಮಿಳು ರಾಕರ್ಸ್ ಎಂಬ ಕುಖ್ಯಾತ ವೆಬ್ ಸೈಟ್ ಈಗ ಕನ್ನಡ ಚಿತ್ರವೊಂದಕ್ಕೆ ಕಂಟಕವಾಗಿದೆ. ಪುನೀತ್ ಅಭಿನಯದ ನಟಸಾರ್ವಭೌಮ ಇಡೀ ಚಿತ್ರವನ್ನ ವೆಬ್ ಸೈಟ್ ನಲ್ಲಿ ಹರಿಯಬಿಟ್ಟಿದ್ದಾರೆ.

25ನೇ ದಿನಕ್ಕೆ ಸಿನಿಮಾ ಲೀಕ್
ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಪೈರಸಿಗೆ ಸಿಲುಕುವುದು ಬಹಳ ಅಪರೂಪ. ನಟಸಾರ್ವಭೌಮ ಸಿನಿಮಾ ಈಗಷ್ಟೇ 25 ದಿನ ಪೂರೈಸಿ ಮುನ್ನಗ್ಗುತ್ತಿದೆ. ಅಷ್ಟರಲ್ಲೇ ಚಿತ್ರವನ್ನ ಆನ್ ಲೈನ್ ನಲ್ಲಿ ಕಿಡಿಗೇಡಿಗಳು ಹರಿಯಬಿಟ್ಟಿದ್ದಾರೆ, ಇದು ನಿಜಕ್ಕೂ ಖಂಡನೀಯ ಮತ್ತು ಚಿತ್ರರಂಗಕ್ಕೆ ಮಾರಕ.

ಚಿತ್ರತಂಡದ ಗಮನಕ್ಕೆ ಬಂದಿಲ್ವಾ?
ಚಿತ್ರಮಂದಿರಗಳಲ್ಲಿ ಇನ್ನೂ ನಟಸಾರ್ವಭೌಮ ಸಿನಿಮಾ ಪ್ರದರ್ಶನವಾಗ್ತಿದೆ. 25ನೇ ದಾಟಿದಕ್ಕೆ ಸಂಭ್ರಮ ಅಂತಾ ಚಿತ್ರತಂಡ ಸುತ್ತಾಡ್ತಿದೆ. ಆದ್ರೆ, ಈ ಕಡೆ ಇಡೀ ಸಿನಿಮಾವನ್ನ ಪೈರಸಿ ಮಾಡಿದ್ರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ವಾ? ಯಾಕೆ ಈ ಅಸಡ್ಡೆ? ಮೊಬೈಲ್ ನಲ್ಲಿ ಡೌನ್ ಲೌಡ್ ಮಾಡಿ ಸಿನಿಮಾ ನೋಡುವಂತಹ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ಇದನ್ನ ತಡೆಯೋದು ಹೇಗೆ?

ಚಿತ್ರಮಂದಿರದಲ್ಲೇ ನೋಡಿ
ಪೈರಸಿ ವಿಷ್ಯದಲ್ಲಿ ನಿಜಕ್ಕೂ ಕನ್ನಡ ಚಿತ್ರರಂಗ ಶಕ್ತಿಶಾಲಿಯಾಗಿದೆ. ಅಲ್ಲೊಂದು ಇಲ್ಲೊಂದು ಚಿತ್ರವನ್ನ ಹೀಗೆ ಪೈರಸಿ ಮಾಡ್ತಾರೆ, ದಯವಿಟ್ಟು ಇಂತಹದನ್ನ ಪ್ರೋತ್ಸಾಹಿಸಬೇಡಿ. ಚಿತ್ರಮಂದಿರದಲ್ಲೇ ಸಿನಿಮಾ ನೋಡಿ. ಇದನ್ನ ನಮ್ಮ ಫಿಲ್ಮಿಬೀಟ್ ಕನ್ನಡ ವೆಬ್ ಸೈಟ್ ಕೂಡ ಬೆಂಬಲಿಸುವುದಿಲ್ಲ.


Click it and Unblock the Notifications











