'ನಟ ಸಾರ್ವಭೌಮ' ಕ್ರೇಜ್ ಅಂದ್ರೆ ಇದು: ಊರ್ವಶಿಯಲ್ಲಿ ಮುಂಜಾನೆ 4 ಗಂಟೆ ಶೋ ಟಿಕೆಟ್ಸ್ ಸೋಲ್ಡ್ ಔಟ್.!

Recommended Video

Nata Sarvabhouma Movie : ಫೆಬ್ರವರಿ 7ಕ್ಕೆ ನಟಸಾರ್ವಭೌಮ ರಿಲೀಸ್ | ಊರ್ವಶಿ ಥಿಯೇಟರ್ ಟಿಕೆಟ್ಸ್ ಸೋಲ್ಡ್ ಔಟ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೇನೇ ಹಾಗೆ... ಒಂಥರಾ ಹೈ ವೋಲ್ಟೇಜ್ ಕರೆಂಟ್ ಇದ್ದ ಹಾಗೆ. ಅಪ್ಪು ಸಿನಿಮಾಗಳು ತೆರೆಗೆ ಬರುತ್ತೆ ಅಂದ್ರೆ, ಬಾಕ್ಸ್ ಆಫೀಸ್ ಅಲುಗಾಡುತ್ತೆ. ಅಭಿಮಾನಿಗಳ ಎದೆಬಡಿತ ಜೋರಾಗುತ್ತೆ. ಕ್ಲಾಸ್ ಮತ್ತು ಮಾಸ್ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜ್ ಕುಮಾರ್, 'ನಟ ಸಾರ್ವಭೌಮ' ಮೂಲಕ ಎಲ್ಲಾ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಹೇಳಿ ಕೇಳಿ.. 'ನಟ ಸಾರ್ವಭೌಮ' ಪವನ್ ಒಡೆಯರ್ ನಿರ್ದೇಶನದ ಚಿತ್ರ. ಈಗಾಗಲೇ, ಪವನ್ ಒಡೆಯರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಬಂದ 'ರಣವಿಕ್ರಮ' ಹಿಟ್ ಆಗಿದೆ. ಹೀಗಾಗಿ, 'ನಟ ಸಾರ್ವಭೌಮ' ಚಿತ್ರದ ಮೇಲೆ ನಿರೀಕ್ಷೆ ಸಹಜವಾಗಿ ತುಸು ಜಾಸ್ತಿಯೇ ಇದೆ.

ಸದ್ಯ ಬಿಡುಗಡೆ ಆಗಿರುವ 'ನಟ ಸಾರ್ವಭೌಮ' ಚಿತ್ರ ಟ್ರೈಲರ್ ಮತ್ತು ಹಾಡುಗಳು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಹಾರರ್ ಫೀಲ್ ಹೊಂದಿರುವ 'ನಟ ಸಾರ್ವಭೌಮ' ಚಿತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮುಂದಿನ ವಾರ ತೆರೆಗೆ ಬರುತ್ತಿರುವ 'ನಟ ಸಾರ್ವಭೌಮ' ಚಿತ್ರದ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಒಂದು ಸಣ್ಣ ಉದಾಹರಣೆ ನಾವು ಕೊಡ್ತೀವಿ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಊರ್ವಶಿ ಥಿಯೇಟರ್ ನಲ್ಲಿ 'ನಟ ಸಾರ್ವಭೌಮ' ಚಿತ್ರ

ಊರ್ವಶಿ ಥಿಯೇಟರ್ ನಲ್ಲಿ 'ನಟ ಸಾರ್ವಭೌಮ' ಚಿತ್ರ

ಒಂದ್ಕಾಲದಲ್ಲಿ ಪರಭಾಷೆಯ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಬೆಂಗಳೂರಿನ ಲಾಲ್ ಬಾಗ್ ಬಳಿಯಿರುವ ಊರ್ವಶಿ ಥಿಯೇಟರ್ ನಲ್ಲಿ ಈಗೀಗ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. 'ನಟ ಸಾರ್ವಭೌಮ' ಚಿತ್ರ ಕೂಡ ಊರ್ವಶಿ ಥಿಯೇಟರ್ ನಲ್ಲಿ ಪ್ರದರ್ಶನವಾಗಲಿದೆ. ಮುಂಜಾನೆ 4 ಗಂಟೆಯಿಂದಲೇ ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ'ನ ಅಬ್ಬರ ಶುರುವಾಗಲಿದೆ.

4 ಗಂಟೆ ಶೋ ಟಿಕೆಟ್ಸ್ ಸೋಲ್ಡ್ ಔಟ್.!

4 ಗಂಟೆ ಶೋ ಟಿಕೆಟ್ಸ್ ಸೋಲ್ಡ್ ಔಟ್.!

ಇಂದು ಬೆಳಗ್ಗೆಯಷ್ಟೇ 'ನಟ ಸಾರ್ವಭೌಮ' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಯ್ತು. ಟಿಕೆಟ್ ಬುಕ್ಕಿಂಗ್ ಶುರುವಾದ ಕೆಲವೇ ಕ್ಷಣಗಳಲ್ಲಿ ಊರ್ವಶಿ ಚಿತ್ರಮಂದಿರದ ಮುಂಜಾನೆ 4 ಗಂಟೆ ಶೋದ ಎಲ್ಲಾ ಟಿಕೆಟ್ ಗಳು ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗಿವೆ.

ಅಪ್ಪು ಭಕ್ತರ ಕ್ರೇಜ್

ಅಪ್ಪು ಭಕ್ತರ ಕ್ರೇಜ್

ಪುನೀತ್ ರಾಜ್ ಕುಮಾರ್ ಅಪ್ಪಟ ಭಕ್ತ ಅಭಿ ಹಾಗೂ ಕೆಲ ಅಪ್ಪು ಅಭಿಮಾನಿಗಳು ಸೇರಿ ಊರ್ವಶಿ ಚಿತ್ರಮಂದಿರದ ಮುಂಜಾನೆ 4 ಗಂಟೆ ಶೋದ ಎಲ್ಲಾ ಟಿಕೆಟ್ ಗಳನ್ನು ಕೊಂಡುಕೊಂಡಿದ್ದಾರೆ.

ಅಪ್ಪಟ ಫ್ಯಾನ್ಸ್ ಶೋ.!

ಅಪ್ಪಟ ಫ್ಯಾನ್ಸ್ ಶೋ.!

ಅಲ್ಲಿಗೆ, ಫೆಬ್ರವರಿ 7 ರಂದು ಮುಂಜಾನೆ 4 ಗಂಟೆಗೆ ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' ಚಿತ್ರದ ಫ್ಯಾನ್ಸ್ ಶೋ ನಡೆದ ಹಾಗೆ ಲೆಕ್ಕ. ಕ್ರೇಜ್ ಅಂದ್ರೆ ಇದೇ ತಾನೆ.?!

ಎಲ್ಲೆಲ್ಲೂ ಫಾಸ್ಟ್ ಫಿಲ್ಲಿಂಗ್.!

ಎಲ್ಲೆಲ್ಲೂ ಫಾಸ್ಟ್ ಫಿಲ್ಲಿಂಗ್.!

ಈಗಾಗಲೇ ಹಲವು ಥಿಯೇಟರ್ ಗಳಲ್ಲಿ 'ನಟ ಸಾರ್ವಭೌಮ' ಚಿತ್ರದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಎಷ್ಟೋ ಕಡೆ ಫಾಸ್ಟ್ ಫಿಲ್ಲಿಂಗ್ ಇದೆ. ನಿಮಗೂ 'ನಟ ಸಾರ್ವಭೌಮ' ಚಿತ್ರವನ್ನ ಫಸ್ಟ್ ಡೇ ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಇದ್ದರೆ, ಈಗಲೇ ಟಿಕೆಟ್ ಬುಕ್ ಮಾಡಿಕೊಳ್ಳಿ.. ಆಮೇಲೆ ಟಿಕೆಟ್ ಸಿಗದೇ ಹೋದರೆ.. ಬೇಜಾರು ನಿಮಗೆ.!

More from Filmibeat

English summary
Puneeth Rajkumar starrer Pavan Wadeyar directorial 'Nata Sarvabhauma' 4 AM show at Urvashi Theatre tickets sold out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X