'ನಟ ಸಾರ್ವಭೌಮ' ರೀಮೇಕ್ ಚಿತ್ರ ಅಲ್ಲ: ಸುಳ್ಳು ಸುದ್ದಿ ನಂಬಬೇಡಿ.!

By Harshitha

Recommended Video

Nata sarvabhouma kannada movie : ಯಾರ್ ಹೇಳಿದ್ದು ನಟ ಸಾರ್ವಭೌಮ ರಿಮೇಕ್ ಅಂತ | Filmibeat kannada

'ಅಂಜನಿಪುತ್ರ' ಸಿನಿಮಾ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಚಿತ್ರವೇ 'ನಟ ಸಾರ್ವಭೌಮ'. 'ರಣ ವಿಕ್ರಮ' ಬಳಿಕ ಅಪ್ಪು ಹಾಗೂ ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದು.

ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ 'ನಟ ಸಾರ್ವಭೌಮ' ಚಿತ್ರದಲ್ಲಿ ಪುನೀತ್ ಫೋಟೋ ಜರ್ನಲಿಸ್ಟ್. ಅಪ್ಪು ಕೈಗೆ ಕ್ಯಾಮರಾ ಕೊಟ್ಟು ಡೈರೆಕ್ಟರ್ ಪವನ್ ಒಡೆಯರ್ ಫೋಟೋ ಶೂಟ್ ಮಾಡಿದ್ದು ಕೂಡ ನಿಮಗೆ ನೆನಪಿರಬಹುದು.

'ನಟ ಸಾರ್ವಭೌಮ' ಚಿತ್ರದಲ್ಲಿ ಪುನೀತ್ ರವರ ಫೋಟೋ ಜರ್ನಲಿಸ್ಟ್ ಲುಕ್ ಹಾಗೂ ಅವರ ಕೈಯಲ್ಲಿರುವ ಕಪ್ಪು ದಾರದ ಬ್ರೇಸ್ಲೆಟ್ ಫೋಟೋ... ಈ ಎರಡನ್ನು ಬಿಟ್ಟು ಇನ್ಯಾವುದೇ ಗುಟ್ಟನ್ನು ಪವನ್ ಒಡೆಯರ್ ಬಿಟ್ಟುಕೊಟ್ಟಿಲ್ಲ. ಈ ನಡುವೆ ಇದು ರೀಮೇಕ್ ಸಿನಿಮಾ ಎಂಬ ಗುಲ್ಲು ಬೇರೆ. ಹಾಗಾದ್ರೆ, 'ನಟ ಸಾರ್ವಭೌಮ' ರೀಮೇಕ್ ಚಿತ್ರವೇ.? ಉತ್ತರ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ರೀಮೇಕ್ ಅಂತೆ-ಕಂತೆ

ರೀಮೇಕ್ ಅಂತೆ-ಕಂತೆ

'ನಟ ಸಾರ್ವಭೌಮ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಜರ್ನಲಿಸ್ಟ್ ಎಂಬ ಸುದ್ದಿ ಹೊರಬಿದ್ಮೇಲೆ, ಇದು ರೀಮೇಕ್ ಸಿನಿಮಾ ಎಂಬ ಗುಸು ಗುಸು ಆರಂಭವಾಗಿದೆ. ಆದ್ರೆ, ಇದು ಸುಳ್ಳು ಸುದ್ದಿ ಅಂತ ಸ್ಪಷ್ಟ ಪಡಿಸುತ್ತಾರೆ ನಿರ್ದೇಶಕ ಪವನ್ ಒಡೆಯರ್.

ಒರಿಜಿನಲ್ ಸಿನಿಮಾ.!

ಒರಿಜಿನಲ್ ಸಿನಿಮಾ.!

''ನಟ ಸಾರ್ವಭೌಮ' ರೀಮೇಕ್ ಅಲ್ಲವೇ ಅಲ್ಲ. ಇದು ಒರಿಜಿನಲ್ ಸಿನಿಮಾ. ನಾನು ರೀಮೇಕ್ ಮಾಡಲ್ಲ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ತಾರೆ ಡೈರೆಕ್ಟರ್ ಪವನ್ ಒಡೆಯರ್.

ಇದು ಹಾರರ್ ಚಿತ್ರವೇ.?

ಇದು ಹಾರರ್ ಚಿತ್ರವೇ.?

ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಹಾರರ್ ಅಂಶಗಳಿವೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಅದಕ್ಕೆ ತಕ್ಕ ಹಾಗೆ, ಅಪ್ಪು ಕೈಯಲ್ಲಿ ಕಪ್ಪು ದಾರದ ಬ್ರೇಸ್ಲೆಟ್ ಇರುವ ಫೋಟೋ ಒಂದನ್ನೂ ಸದ್ಯ ಪವನ್ ಒಡೆಯರ್ ರಿವೀಲ್ ಮಾಡಿದ್ದಾರೆ. ಸಾಲದಕ್ಕೆ, ಈ ಬ್ರೇಸ್ಲೆಟ್ ಹಿಂದೆ ಚಿತ್ರದಲ್ಲಿ ಒಂದು ಇಂಟ್ರೆಸ್ಟಿಂಗ್ ಕಥೆ ಇರಲಿದೆ ಅಂತಲೂ ಪವನ್ ಒಡೆಯರ್ ಹೇಳಿದ್ದಾರೆ. ಹಾಗಾದ್ರೆ, ಚಿತ್ರದಲ್ಲಿ ದುಷ್ಟಶಕ್ತಿಗಳನ್ನು ನಿಗ್ರಹಿಸಲು ಅಪ್ಪು ಈ ಕಪ್ಪು ದಾರದ ಬ್ರೇಸ್ಲೆಟ್ ತೊಡುತ್ತಾರಾ.? ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇಲ್ಲ. ಪವನ್ ಒಡೆಯರ್ ರವರೇ ಕೊಡಬೇಕು.

ಬಳ್ಳಾರಿಯಲ್ಲಿ ಶೂಟಿಂಗ್

ಬಳ್ಳಾರಿಯಲ್ಲಿ ಶೂಟಿಂಗ್

ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ 'ನಟ ಸಾರ್ವಭೌಮ' ಶೂಟಿಂಗ್ ಕಂಪ್ಲೀಟ್ ಆಗಿದೆ. ಎರಡನೇ ಹಂತದ ಚಿತ್ರೀಕರಣ ಬಳ್ಳಾರಿಯಲ್ಲಿ ನಡೆಯಲಿದೆ. 'ನಟ ಸಾರ್ವಭೌಮ' ಚಿತ್ರದಲ್ಲಿ ಅಪ್ಪು ಜೊತೆಗೆ ರಚಿತಾ ರಾಮ್ ಡ್ಯುಯೆಟ್ ಹಾಡಲಿದ್ದಾರೆ.

More from Filmibeat

English summary
'Nata Sarvabhauma' is a original cinema, not a remake clarifies Director Pawan Wadeyar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X