For Quick Alerts
  ALLOW NOTIFICATIONS  
  For Daily Alerts

  'ನಟಸಾರ್ವಭೌಮ' ಆಡಿಯೋ ಬಿಡುಗಡೆ ಶೋನಲ್ಲಿ ಏನೆಲ್ಲಾ ಇರುತ್ತೆ?

  |

  ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಆಡಿಯೋ ಬಿಡುಗಡೆ ಕಾರ್ಯಕ್ರಮ ಜನವರಿ 5 ರಂದು ಹುಬ್ಬಳ್ಳಿಯ ನೆಹರು ಸ್ಟೇಡಿಯಂನಲ್ಲಿ ಜರುಗಿತ್ತು. ಈ ಕಾರ್ಯಕ್ರಮ ಈಗ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದೆ.

  ಭಾನುವಾರ ಮಧ್ಯಾಹ್ನ 2 ಗಂಟೆಗೆ 'ನಟಸಾರ್ವಭೌಮ' ವಿಶೇಷ ಸಂಚಿಕೆ ನಿಮ್ಮ ಮುಂದೆ ಬರ್ತಿದೆ. ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ರಾಘವೇಂದ್ರ ರಾಜ್ ಕುಮಾರ್, ಯುವ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

  ಈ ಕಾರ್ಯಕ್ರಮವನ್ನ ಲೈವ್ ನಲ್ಲಿ ನೋಡಲು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು. ಈಗ ಈ ಶೋ ಟಿವಿಯಲ್ಲಿ ಪ್ರಸಾರವಾಗ್ತಿದೆ. ನಿರೂಪಕಿ ಅನುಶ್ರೀ ನಡೆಸಿಕೊಟ್ಟ ಈ ಪ್ರೋಗ್ರಾಂ ಸಖತ್ ಕಲರ್ ಫುಲ್ ಆಗಿತ್ತು. ಹಾಗಿದ್ರೆ, 'ನಟಸಾರ್ವಭೌಮ' ಆಡಿಯೋ ಬಿಡುಗಡೆ ಶೋನಲ್ಲಿ ಏನೆಲ್ಲಾ ಇರುತ್ತೆ? ಮುಂದೆ ಓದಿ.....

  ಯುವರಾಜ್ ಕುಮಾರ್ ಡ್ಯಾನ್ಸ್

  ಯುವರಾಜ್ ಕುಮಾರ್ ಡ್ಯಾನ್ಸ್

  ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ಗೆ ಮೆರುಗು ನೀಡಿದ್ದು ಯುವರಾಜ್ ಕುಮಾರ್ ಡ್ಯಾನ್ಸ್. ಇದೇ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ರಾಜ್ ಮೊಮ್ಮಗ ಹೆಜ್ಜೆಹಾಕಿದ್ದಾರೆ. ಡಾ ರಾಜ್ ಮತ್ತು ರಾಜ್ ಪುತ್ರರಾದ ಶಿವಣ್ಣ, ಪುನೀತ್, ರಾಘಣ್ಣ ಚಿತ್ರದ ಹಾಡುಗಳಿಗೆ ಯುವರಾಜ ನೃತ್ಯ ಮಾಡಿದ್ರು. ಇದು ಕಾರ್ಯಕ್ರಮದ ಬಹುದೊಡ್ಡ ಹೈಲೈಟ್.

  ವಿಜಯ ಪ್ರಕಾಶ್ ಗಾನ ಸುಧೆ

  ವಿಜಯ ಪ್ರಕಾಶ್ ಗಾನ ಸುಧೆ

  ಗಾಯಕ ವಿಜಯ ಪ್ರಕಾಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಬ್ಬರು ವೇದಿಕೆ ಮೇಲೆ ಬೊಂಬೆ ಹೇಳುತೈತೆ ಹಾಡನ್ನ ಹೇಳಿದರು. ಇದು ಆಡಿಯೋ ಶೋಗೆ ಮತ್ತಷ್ಟು ಜೋಶ್ ಹೆಚ್ಚಿಸಿದೆ.

  ರಚಿತಾ ಸೂಪರ್ ಡ್ಯಾನ್ಸ್

  ರಚಿತಾ ಸೂಪರ್ ಡ್ಯಾನ್ಸ್

  ಇನ್ನು ನಟಸಾರ್ವಭೌಮ ಚಿತ್ರದ ನಾಯಕಿ ರಚಿತಾ ರಾಮ್ ಭರ್ಜರಿ ಡ್ಯಾನ್ಸ್ ಪ್ರೇಕ್ಷಕರಿಗೆ ಕಿಕ್ ನೀಡುತ್ತೆ. ದೊಡ್ಮನೆ ನಟೆ ಹಾಡುಗಳಿಗೆ ಸ್ಪಾಟ್ ನಲ್ಲೇ ಕುಣಿದ ರಚಿತಾ ಅವರ ಟಪ್ಪಾಂಗುಚ್ಚಿ ಸಖತ್ ಆಗಿತ್ತು.

  ಪುನೀತ್ ಎಂಟ್ರಿ ಮತ್ತು ಡ್ಯಾನ್ಸ್

  ಪುನೀತ್ ಎಂಟ್ರಿ ಮತ್ತು ಡ್ಯಾನ್ಸ್

  ಇನ್ನು ಅಂತಿಮವಾಗಿ ಪುನೀತ್ ರಾಜ್ ಕುಮಾರ್ ಎಂಟ್ರಿ, ಡ್ಯಾನ್ಸ್, ಡೈಲಾಗ್, ಹಾಡು ನಟಸಾರ್ವಭೌಮ ಆಡಿಯೋ ಕಾರ್ಯಕ್ರಮದ ಮೇನ್ ಅಟ್ರ್ಯಾಕ್ಷನ್. ಇದೆಲ್ಲವೂ ಸೇರಿ ಹುಬ್ಬಳ್ಳಿಯ ವೇದಿಕೆ ರಂಗೇರಿದೆ. ಇದಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ.

  English summary
  Puneeth rajkumar starrer nata sarvabhouma movie audio launch programme will telecasting on sunday 2pm in zee kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X