ಕೆಜಿಎಫ್ ದಾಖಲೆ ಮುರಿದ ನಟಸಾರ್ವಭೌಮ, ಬೆಂಗಳೂರಲ್ಲಿ ಅಪ್ಪುನೇ ಬಾಸ್.!
Recommended Video

ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಮೊದಲ ದಿನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅಪ್ಪು ಆಕ್ಟಿಂಗ್, ಡ್ಯಾನ್ಸ್, ಫೈಟ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ರಿಲೀಸ್ ಗೂ ಮೊದಲು, ರಿಲೀಸ್ ಆದ್ಮೇಲೆ ಹಲವು ದಾಖಲೆಗಳನ್ನ ಮಾಡ್ತಿರುವ ನಟಸಾರ್ವಭೌಮ ಈಗ ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಮೊದಲ ದಿನ ಅತಿ ಹೆಚ್ಚು ಶೋಗಳನ್ನ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ನಟಸಾರ್ವಭೌಮ ಪಾತ್ರವಾಗಿದೆ.
ಈ ಹಿಂದೆ ಯಶ್, ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಸಿನಿಮಾಗಳು ಬೆಂಗಳೂರಿನಲ್ಲಿ ಅತಿ ಹೆಚ್ಚು ಶೋ ಕಂಡ ಚಿತ್ರಗಳ ದಾಖಲೆಯನ್ನ ಮಾಡಿದೆ. ಆದ್ರೀಗ ಹಳೆ ರೆಕಾರ್ಡ್ ಬ್ರೇಕ್ ಮಾಡಿ ಹೊಸ ರೆಕಾರ್ಡ್ ಬರೆದಿದೆ ನಟಸಾರ್ವಭೌಮ. ಈ ಮೂಲಕ ಬೆಂಗಳೂರಲ್ಲಿ ಅಪ್ಪುನೇ ಬಾಸ್ ಆಗಿದ್ದಾರೆ. ಮುಂದೆ ಓದಿ....

ನಟಸಾರ್ವಭೌಮ ಮೊದಲ ದಿನ ಶೋ ಎಷ್ಟು?
ಬೆಂಗಳೂರಿನ ಬಹುತೇಕ ಚಿತ್ರಮಂದಿರದಲ್ಲಿ ನಟಸಾರ್ವಭೌಮ ಸಿನಿಮಾ ಮಧ್ಯರಾತ್ರಿ 12 ಗಂಟೆಗೆ ಮೊದಲ ಶೋ ಆರಂಭಿಸಿತ್ತು. ಲಾಲ್ ಬಾಗ್ ಬಳಿಯಿರುವ ಊರ್ವಶಿ ಚಿತ್ರಮಂದಿರದಲ್ಲಿ 24 ಗಂಟೆಯೂ ಚಿತ್ರಪ್ರದರ್ಶನ ಕಂಡಿದೆ. ಅಂದ್ರೆ, ಬೆಂಗಳೂರಿನಲ್ಲಿ ಮೊದಲ ದಿನ ಒಟ್ಟು 550ಕ್ಕೂ ಅಧಿಕ ಶೋಗಳನ್ನ ಪುನೀತ್ ಸಿನಿಮಾ ಕಂಡಿದೆ. ಇದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯಾಗಿದೆ.

ಕೆಜಿಎಫ್ ದಾಖಲೆ ಮುರಿದ ನಟಸಾರ್ವಭೌಮ
ಈ ಹಿಂದೆ ಬೆಂಗಳೂರಿನಲ್ಲಿ ಮೊದಲ ದಿನ ಅತಿ ಹೆಚ್ಚು ಶೋಗಳನ್ನ ಕಂಡ ದಾಖಲೆ ಹೊಂದಿದ್ದ ಸಿನಿಮಾ ಯಶ್ ಅಭಿನಯದ ಕೆಜಿಎಫ್. 525ಕ್ಕೂ ಅಧಿಕ ಪ್ರದರ್ಶನವನ್ನ ಕೆಜಿಎಫ್ ಸಿನಿಮಾ ಮೊದಲ ಕಂಡಿತ್ತು. ಈ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಈಗಲೂ ಅನೇಕ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದೆ.

ಅಂಜನಿಪುತ್ರ, ಹೆಬ್ಬುಲಿ ಮತ್ತು ದಿ ವಿಲನ್
ಪುನೀತ್ ಹಾಗೂ ಹರ್ಷ ಕಾಂಬಿನೇಷನ್ ನಲ್ಲಿ ಬಂದಿದ್ದ ಅಂಜನಿಪುತ್ರ ಸಿನಿಮಾ ಈ ಹಿಂದೆ 350ಕ್ಕೂ ಅಧಿಕ ಶೋಗಳನ್ನ ಮೊದಲ ದಿನ ಬೆಂಗಳೂರಲ್ಲಿ ಕಂಡಿದೆ ಎಂಬ ದಾಖಲೆ ಇದೆ. ಅದೇ ರೀತಿ ಸುದೀಪ್ ಅಭಿನಯದ ಹೆಬ್ಬುಲಿ 340ಕ್ಕೂ ಅಧಿಕ, ದಿ ವಿಲನ್ 320ಕ್ಕೂ ಅಧಿಕ ಶೋಗಳು ಕಂಡಿದೆ ಎಂದು ಅಭಿಮಾನಿಗಳು ಚರ್ಚೆ ಮಾಡ್ತಿದ್ದಾರೆ.

ಮೊದಲ ದಿನದ ನಂಬರ್ಸ್ ಮಾತ್ರ
ಅಂದ್ಹಾಗೆ, ಇದು ಮೊದಲ ದಿನ ಮತ್ತು ಬೆಂಗಳೂರಿನಲ್ಲಿ ಪ್ರದರ್ಶನ ಕಂಡ ಶೋಗಳ ಸಂಖ್ಯೆ ಎಂದು ಹೇಳಲಾಗ್ತಿದೆ. ಬಟ್, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದ್ರೆ, ನಟಸಾರ್ವಭೌಮ ಸಿನಿಮಾ ಮೊದಲ ದಿನ 550ಕ್ಕೂ ಹೆಚ್ಚು ಶೋ ಕಂಡಿದೆ ಎಂದು ಸ್ವತಃ ಚಿತ್ರತಂಡವೇ ಹೇಳಿದೆ.


Click it and Unblock the Notifications