ಸೆನ್ಸಾರ್ ನಲ್ಲಿ ಪಾಸ್ ಆದ ಅಪ್ಪು : ಸಿನಿಮಾ ಎಷ್ಟು ನಿಮಿಷ ಇದೆ?
Recommended Video

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಸಾಲಿಗೆ ನಿಲ್ಲುವ 'ನಟ ಸಾರ್ವಭೌಮ' ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಸದ್ಯ ಸೆನ್ಸಾರ್ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಪಾಸ್ ಆಗಿದ್ದಾರೆ.
'ನಟ ಸಾರ್ವಭೌಮ' ಸಿನಿಮಾಗೆ ಯು ಎ ಪ್ರಮಾಣ ಪತ್ರ ಸಿಕ್ಕಿದೆ. ಯಾವುದೇ ಕಟ್ ಮತ್ತು ಮ್ಯೂವ್ಟ್ ಇಲ್ಲದೆ, ಸಿನಿಮಾ ಸೆನ್ಸಾರ್ ಅಧಿಕಾರಿಗಳ ಮನ ಗೆದ್ದಿದೆ. ಸಿನಿಮಾದ ಅವಧಿ 155 ನಿಮಿಷ ಅಂದರೆ 2 ಗಂಟೆಗೆ 35 ನಿಮಿಷ ಇದೆ. 'ನಟ ಸಾರ್ವಭೌಮ' ಪಕ್ಕಾ ಫ್ಯಾಮಿಲಿ ಹಾಗೂ ಆಕ್ಷನ್ ಸಿನಿಮಾವಾಗಿದೆ.
ಸಿನಿಮಾದ ಆಡಿಯೋ ರಿಲೀಸ್ ಈಗಾಗಲೇ ಆಗಿದ್ದು, ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 'ಡ್ಯಾನ್ಸ್ ವಿತ್ ಅಪ್ಪು..' ಹಾಗೂ 'ಓಪನ್ ದ ಬಾಟೆಲ್' ಹಾಡುಗಳು ಎಲ್ಲರನ್ನು ಕುಣಿಯುವಂತೆ ಮಾಡಿದೆ. ನಿನ್ನೆ ಚಿತ್ರದ 'ಯಾರೋ ನೀನು..' ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.

ಅಂದಹಾಗೆ, ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಈ ವರ್ಷ ರಿಲೀಸ್ ಆದ ಮೊದಲ ಬಿಗ್ ಸಿನಿಮಾ ಇದಾಗುತ್ತಿದೆ. ಪವನ್ ಒಡೆಯರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅದ್ದೂರಿಯಾಗಿ ಚಿತ್ರವನ್ನ ನಿರ್ಮಿಸಿದ್ದಾರೆ.
ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಅಪ್ಪುಗೆ ಜೋಡಿಯಾಗಿದ್ದಾರೆ. ಡಿ ಇಮಾನ್ ಸಂಗೀತ ನೀಡಿದ್ದಾರೆ.


Click it and Unblock the Notifications











