ಹಬ್ಬದ ಶುಭಾಶಯ ತಿಳಿಸಿದ 'ನಟ ಸಾರ್ವಭೌಮ' ತಂಡ
ಇಂದು ಇಡೀ ದೇಶದಲ್ಲಿಯೇ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಈ ವರ್ಷ ಹಬ್ಬದ ಶುಭಾಶಯವನ್ನು ನಟ ಪುನೀತ್ ರಾಜ್ ಕುಮಾರ್ ಅಂಡ್ ಟೀಂ ವಿಶೇಷವಾಗಿ ತಿಳಿಸಿದೆ.
ಪುನೀತ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾದ ಎರಡು ಹೊಸ ಪೋಸ್ಟರ್ ಗಳು ಹಬ್ಬದ ದಿನ ಹೊರ ಬಂದಿವೆ. ಈ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಶುಭಾಶಯ ಮುಟ್ಟಿಸಿದೆ. ಈ ಹಿಂದೆ ಚಿತ್ರದ ಕೆಲ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಈಗ ಬಂದಿರುವ ಲುಕ್ ಕೂಡ ಆಕರ್ಷಕವಾಗಿದೆ.

ಈ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಚಿತ್ರಕ್ಕಿದೆ. ರಚಿತಾ ರಾಮ್ ಸಿನಿಮಾದ ನಾಯಕಿಯಾಗಿದ್ದಾರೆ. ಸಿನಿಮಾದ ಬಿಡುಗಡೆ ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿಗೆ ಆಗುವ ಸಾಧ್ಯತೆ ಇದೆ.
ಮತ್ತೊಂದು ಕಡೆ ಈ ವರ್ಷದ ದೀಪಾವಳಿ ಹಬ್ಬವನ್ನು ನಿರ್ದೇಶಕ ಪವನ್ ಒಡೆಯರ್ ತಮ್ಮ ಪತ್ನಿ ಅಪೇಕ್ಷಾ ಅವರ ಜೊತೆಗೆ ಅವರ ಮನೆಯಲ್ಲಿ ಆಚರಣೆ ಮಾಡುತ್ತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪವನ್ ಫ್ಯಾನ್ಸ್ ಗೆ ವಿಶ್ ಮಾಡಿದ್ದಾರೆ.
More from Filmibeat
English summary
Actor Puneeth Rajkumar's 'Nata Sarvabhouma' kannada movie posters released on the occasion of Deepavali.
puneeth rajkumar rockline venkatesh pawan wodeyar diwali sandalwood ದೀಪಾವಳಿ ಪುನೀತ್ ರಾಜ್ ಕುಮಾರ್ ರಾಕ್ ಲೈನ್ ವೆಂಕಟೇಶ್ ಪವನ್ ಒಡೆಯರ್ ಸ್ಯಾಂಡಲ್ ವುಡ್


Click it and Unblock the Notifications











