ಚಿಕ್ಕಪ್ಪನ ಸಿನಿಮಾ ಬಗ್ಗೆ ವಿನಯ್, ಯುವ ನೀಡಿದ ವಿಮರ್ಶೆ

Recommended Video

Natasaarvabhowma Movie : ಚಿಕ್ಕಪ್ಪನ ಚಿತ್ರ ವೀಕ್ಷಿಸಿದ ಮಕ್ಕಳು..! | Filmibeat Kannada

'ನಟ ಸಾರ್ವಭೌಮ' ಸಿನಿಮಾ ಹೇಗಿದೆ ಎಂದಾವರಿಗೆ ಸಾಲು ಸಾಲು ರಿವ್ಯೂಗಳು ಬರುತ್ತಿವೆ. ಕೆಲವರು ಈಗಾಗಲೇ ಸಿನಿಮಾ ನೋಡಿದ್ದರೆ, ಇನ್ನು ಕೆಲವರು ಸಿನಿಮಾ ನೋಡಿ ಬಂದವರ ಅಭಿಪ್ರಾಯ ಪಡೆದು ಬಳಿಕ ಚಿತ್ರಮಂದಿರಕ್ಕೆ ಹೋಗುವ ಪ್ಲಾನ್ ನಲ್ಲಿರುತ್ತಾರೆ.

'ನಟ ಸಾರ್ವಭೌಮ' ಅಭಿಮಾನಿಗಳ ಸಿನಿಮಾ. ಈ ಸಿನಿಮಾಗೆ ದೊಡ್ಡ ಒಪನಿಂಗ್ ಸಿಕ್ಕಿದೆ. ಒಬ್ಬ ಸಾಮಾನ್ಯ ಅಭಿಮಾನಿಯಂತೆ ರಾಜ್ ಕುಟುಂಬದ ಕುಡಿಗಳು ಕೂಡ ಸಿನಿಮಾ ನೋಡಿದ್ದಾರೆ. ನಟರಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ನಿನ್ನೆ ರಾತ್ರಿಯೇ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ.

ಸಿನಿಮಾ ನೋಡಿ ಬಂದ ವಿನಯ್ ಹಾಗೂ ಯುವ ಚಿಕ್ಕಪ್ಪನ ಬಗ್ಗೆ ಮಾತನಾಡಿದ್ದಾರೆ. ಈ ಇಬ್ಬರು ನಟರು ಸಿನಿಮಾ ಬಗ್ಗೆ ನೀಡಿರುವ ವಿಮರ್ಶೆ ಮುಂದಿದೆ ಓದಿ...

ಚಿಕ್ಕಪ್ಪನಿಗೆ ಇದು ಡಿಫರೆಂಟ್ ಸಿನಿಮಾ

ಚಿಕ್ಕಪ್ಪನಿಗೆ ಇದು ಡಿಫರೆಂಟ್ ಸಿನಿಮಾ

''ಸಿನಿಮಾ ನೋಡಿದೆ ತುಂಬ ಚೆನ್ನಾಗಿದೆ. ಖುಷಿ ಆಗುತ್ತದೆ. ಹಾರರ್ ಹಾಗೂ ಕಾಮಿಡಿ ಎಲಿಮೆಂಟ್ ಅನ್ನು ತುಂಬ ಚೆನ್ನಾಗಿ ತೋರಿಸಿದ್ದಾರೆ. ಫ್ಯಾಮಿಲಿ ಒಟ್ಟಿಗೆ ಕೂತು ನೋಡುವ ಸಿನಿಮಾ ಇದು. ಜೊತೆಗೆ ಸಣ್ಣ ಸಂದೇಶ ಇದೆ. ಚಿಕ್ಕಪ್ಪನಿಗೆ ಇದು ಡಿಫರೆಂಟ್ ಸಿನಿಮಾ. ಅಭಿಮಾನಿಗಳು ಹಬ್ಬದ ರೀತಿ ಆಚರಿಸುತ್ತಿದ್ದಾರೆ.'' - ಯುವ ರಾಜ್ ಕುಮಾರ್, ನಟ

ಮಿಸ್ ಮಾಡದೆ ಸಿನಿಮಾ ನೋಡಿ

ಮಿಸ್ ಮಾಡದೆ ಸಿನಿಮಾ ನೋಡಿ

''ನನಗೆ ಒಬ್ಬ ಫ್ಯಾನ್ ಆಗಿ ಸಿನಿಮಾ ನೋಡಲು ತುಂಬ ಖುಷಿಯಾಯ್ತು. ಇಡೀ ಸಿನಿಮಾ ಮುಂದೆ ಏನಾಗುತ್ತದೆಯೋ ಅಂತ ನೋಡುವ ಹಾಗೆ ಮಾಡುತ್ತದೆ. ಹಾರರ್ ಎಲಿಮೆಂಟ್ ಸೀಟಿನ ತುದಿಯಲ್ಲಿ ಕೂರಿಸುತ್ತದೆ. ಎಲ್ಲರೂ ಮಿಸ್ ಮಾಡದೆ ಸಿನಿಮಾ ನೋಡಿ. ನಾವು ಕೂಡ ಹಿಂದಿನ ಸಿನಿಮಾವನ್ನು ದಿನವೇ ನೋಡಿದ್ವಿ ಅವರ ಡ್ಯಾನ್ಸ್ ಬಗ್ಗೆ ಮಾತನಾಡುವ ಹಾಗೆ ಇಲ್ಲ. ಪ್ರತಿ ಸಿನಿಮಾದಲ್ಲಿಯೂ ಹೊಸ ಹೊಸ ಸ್ಟೆಪ್ ಹಾಕುತ್ತಾರೆ.ಎಲ್ಲ ಹಾಡಿನ ಡ್ಯಾನ್ಸ್ ಸೂಪರ್ ಆಗಿದೆ..'' - ಯುವ ರಾಜ್ ಕುಮಾರ್, ನಟ

ಸಿನಿಮಾ ತುಂಬ ಚೆನ್ನಾಗಿತ್ತು.

ಸಿನಿಮಾ ತುಂಬ ಚೆನ್ನಾಗಿತ್ತು.

''ಚಿಕ್ಕಪ್ಪನ ಸಿನಿಮಾವನ್ನು ಯಾವಾಗಲೂ ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇವೆ. ಈ ಸಿನಿಮಾದಲ್ಲಿ ಒಂದು ದಿನ ಮುಂಚೆಯೇ ಸಿನಿಮಾ ನೋಡಿದೆ. ಜನ ತುಂಬ ಎಂಜಾಯ್ ಮಾಡುತ್ತಿದ್ದಾರೆ. ಫಸ್ಟ್ ಟೈಮ್ ಹಾರರ್ ಟ್ರೈ ಮಾಡಿದ್ದು ಚೆನ್ನಾಗಿದೆ. ಚಿಕ್ಕಪ್ಪನ ಡ್ಯಾನ್ಸ್, ಫೈಟ್ಸ್ ತುಂಬ ಇಷ್ಟ ಆಯ್ತು. '' - ವಿನಯ್ ರಾಜ್ ಕುಮಾರ್.

ಹೇಗಿದೆ ಸಿನಿಮಾ ?

ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾಗೆ ಹೋಗಬಹುದು. ಇಡೀ ಮನೆ ಮಂದಿಗೆ ಮನರಂಜನೆ ನೀಡುವ ಒಂದೊಳ್ಳೆ ಎಂಟರ್ಟೈನಿಂಗ್ ಸಿನಿಮಾ 'ನಟ ಸಾರ್ವಭೌಮ'. ಟೀಸರ್ ನಲ್ಲಿ ಹೇಳಿರುವ ಹಾಗೆಯೇ ಅಪ್ಪು ಡ್ಯಾನ್ಸ್, ಫೈಟ್ ಖಂಡಿತ 'ನೆಕ್ಟ್ ಲೆವೆಲ್' ನಲ್ಲಿದೆ.

More from Filmibeat

English summary
Actor Puneeth Rajkumar's 'Nata Sarvabhouma' kannada review by vinay and yuva rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X