ಇಂದಿನಿಂದ ವಿದೇಶಗಳಲ್ಲಿ 'ನಟ ಸಾರ್ವಭೌಮ' ಪ್ರದರ್ಶನ
ಪುನೀತ್ ರಾಜ್ ಕುಮಾರ್ ಅಭಿನಯದ ಈ ವರ್ಷದ ಬಿಗ್ ಸಿನಿಮಾ 'ನಟ ಸಾರ್ವಭೌಮ' ಈಗ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಕರ್ನಾಟಕದ ತುಂಬ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗ ಫಾರಿನ್ ನಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ.
ಯು ಎ ಇ, ದುಬೈ, ಕತಾರ್ ಹಾಗೂ ಕುವೈಟ್ ಭಾಗಗಳಲ್ಲಿ 'ನಟ ಸಾರ್ವಭೌಮ' ಸಿನಿಮಾ ರಿಲೀಸ್ ಆಗುತ್ತಿದೆ. ಇಲ್ಲಿನ 20ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಇಂದಿನಿಂದ ಈ ತಿಂಗಳ 27ರ ವರಗೆ ಒಂದು ವಾರಗಳ ಕಾಲ ದಿನನಿತ್ಯ ಸಿನಿಮಾದ ಶೋಗಳು ಇರಲಿದೆ.
ವಿದೇಶದಲ್ಲಿರುವ ಕನ್ನಡ ಸಿನಿಮಾ ಪ್ರೇಮಿಗಳು ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಿನಿಮಾವನ್ನು ನೋಡುವ ಅವಕಾಶ ಪಡೆದಿದ್ದಾರೆ.

ಅಂದಹಾಗೆ, 'ನಟ ಸಾರ್ವಭೌಮ' ಪುನೀತ್ ರಾಜ್ ಕುಮಾರ್, ಅನುಪಮ ಪರಮೇಶ್ವರನ್ ಹಾಗೂ ರಚಿತಾ ರಾಮ್ ನಟನೆಯ ಸಿನಿಮಾವಾಗಿದೆ. ಪವನ್ ಒಡೆಯರ್ ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.
ಸಿನಿಮಾ ಬಿಡುಗಡೆಗೆ ಮೊದಲ ದೊಡ್ಡ ಕ್ರೇಜ್ ಹುಟ್ಟುಹಾಕಿದ್ದ, ಈ ಚಿತ್ರ ಅಪ್ಪು ಫ್ಯಾನ್ಸ್ ಗಳಿಗೆ ಬಹಳ ಇಷ್ಟ ಆಗಿದೆ. ಪುನೀತ್ ರಾಜ್ ಕುಮಾರ್ ಡ್ಯಾನ್ಸ್, ಫೈಟ್ ಜೊತೆಗೆ ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾವಾಗಿದೆ.


Click it and Unblock the Notifications











