'ನಟ ಸಾರ್ವಭೌಮ' ಟಿಕೆಟ್ ಬುಕ್ಕಿಂಗ್ ಓಪನ್ ಆಯ್ತು!
Recommended Video

ಮುಂದಿನ ಗುರುವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಹಬ್ಬದ ದಿನ. 'ನಟ ಸಾರ್ವಭೌಮ' ಸಿನಿಮಾಗಾಗಿ ಇಷ್ಟು ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.
'ನಟ ಸಾರ್ವಭೌಮ' ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದೆ. ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಜೋಡಿಯ ಎರಡನೇ ಸಿನಿಮಾ ಇದಾಗಿದ್ದು, ಸಿನಿಮಾದ ಹೈಪ್ ಜಾಸ್ತಿಯಾಗಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಸೂಪರ್ ಹಿಟ್ ಆಗಿದ್ದು, ಚಿತ್ರದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ.
ಫೆಬ್ರವರಿ 7 ರಂದು 'ನಟ ಸಾರ್ವಭೌಮ' ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಇಂದಿನಿಂದ ಸಿನಿಮಾದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ. ಅಂದಹಾಗೆ, ಯಾವ ಯಾವ ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ ಎಂಬ ವಿವರ ಮುಂದಿದೆ ಓದಿ..

ಉರ್ವಶಿ, ಪ್ರಸನ್ನ, ಕಾವೇರಿ
'ನಟ ಸಾರ್ವಭೌಮ' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಇಂದಿನಿಂದ ಶುರುವಾಗಿದೆ. ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ಸದ್ಯಕ್ಕೆ ಟಿಕೆಟ್ ನೀಡಲಾಗುತ್ತಿದೆ. ಲಾಲ್ ಬಾಗ್ ರಸ್ತೆಯ ಉರ್ವಶಿ, ಮಾಗಡಿ ರಸ್ತೆಯ ಪ್ರಸನ್ನ ಹಾಗೂ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರಗಳಲ್ಲಿ ಇಂದೇ ಟಿಕೆಟ್ ಬುಕ್ ಮಾಡಬಹುದಾಗಿದೆ.

ಟಿಕೆಟ್ ಗೆ ಸಖತ್ ಡಿಮ್ಯಾಂಡ್
ಸಿನಿಮಾದ ಟಿಕೆಟ್ ಗೆ ಸಖತ್ ಡಿಮ್ಯಾಂಡ್ ಇದೆ. ಮೂರು ಚಿತ್ರಮಂದಿರಗಳಲ್ಲಿ ಟಿಕೆಟ್ ಮಾರಾಟ ಜೋರಾಗಿ ನಡೆಯುತ್ತಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋ ನ ಕೆಲವೇ ಸೀಟ್ ಗಳು ಬಾಕಿ ಇವೆ. ಕಾವೇರಿ, ಪ್ರಸನ್ನ, ಉರ್ವಶಿಯಲ್ಲಿ ಬೆಳಗ್ಗೆ 7 ಗಂಟೆಗೆ ಮೊದಲ ಪ್ರದರ್ಶನ ಶುರು ಆಗುತ್ತಿದೆ.

ತ್ರಿವೇಣಿ ಮುಖ್ಯ ಚಿತ್ರಮಂದಿರ
'ನಟ ಸಾರ್ವಭೌಮ' ಸಿನಿಮಾಗೆ ಗಾಂಧಿನಗರದಲ್ಲಿ ತ್ರಿವೇಣಿ ಚಿತ್ರಮಂದಿರ ಸಿಕ್ಕಿದೆ. ಇಂದು ಅಲ್ಲಿ 'ಅನುಕ್ತ' ಸಿನಿಮಾ ಬಿಡುಗಡೆಯಾಗಿದ್ದು, ಗುರುವಾರ 'ನಟ ಸಾರ್ವಭೌಮನ' ಆಗಮನ ಆಗಲಿದೆ. ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಅನೇಕ ಕಡೆ ಬೆಳ್ಳಂಬೆಳಗ್ಗೆ ಅಥವಾ ಮಧ್ಯರಾತ್ರಿಯೇ ಸಿನಿಮಾದ ಪ್ರದರ್ಶನ ಶುರು ಆಗುವ ಸಾಧ್ಯತೆ ಇದೆ.

ವರ್ಷದ ಬಳಿಕ ಬಂದ ಅಪ್ಪು
ವಿಶೇಷ ಅಂದರೆ, ಪುನೀತ್ ರಾಜ್ ಕುಮಾರ್ ನಟನೆಯ ಈ ವರ್ಷದ ಮೊದಲ ಸಿನಿಮಾ ಇದಾಗಿದೆ. ಕಳೆದ ವರ್ಷ ಅಪ್ಪು ನಟನೆಯ ಯಾವ ಸಿನಿಮಾ ಕೂಡ ಬಿಡುಗಡೆ ಆಗಿರಲಿಲ್ಲ ಎನ್ನುವ ಬೇಸರದಲ್ಲಿದ್ದ ಪುನೀತ್ ಅಭಿಮಾನಿಗಳನ್ನ ತಣಿಸಲು ಈ ಸಿನಿಮಾ ಬರುತ್ತಿದೆ.

ಪವನ್ ಒಡೆಯರ್ ನಿರ್ದೇಶನ
ಚಿತ್ರದಲ್ಲಿ ಅಪ್ಪು ಜೋಡಿಯಾಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರದ ನಿರ್ದೇಶನ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ. ರಚಿತಾ ರಾಮ್ ಹಾಗೂ ಪುನೀತ್ ಜೋಡಿಯ ಎರಡನೇ ಸಿನಿಮಾ ಇದಾಗಿದೆ. ಪವನ್ ಒಡೆಯರ್ ಕೂಡ ಈ ಹಿಂದೆ 'ರಣವಿಕ್ರಣ' ಸಿನಿಮಾವನ್ನು ಅಪ್ಪುಗಾಗಿ ಮಾಡಿದ್ದರು.


Click it and Unblock the Notifications











