ದೊಡ್ಮನೆ ಊಟದ ರುಚಿ ಸವಿದ 'ನಟ ಸಾರ್ವಭೌಮ' ತಂಡ
ಡಾ.ರಾಜ್ ಕುಮಾರ್ ಅನ್ನವನ್ನು ದೇವರು ಎಂದು ನಂಬಿದ್ದರು. ಅವರ ಮನೆಗೆ ಯಾರೇ ಬಂದರು ಊಟ ಮಾಡಿಸದೆ ಕಳುಹಿಸುತ್ತಿರಲಿಲ್ಲ. ಅಂದಹಾಗೆ, ಈಗ ದೊಡ್ಮನೆ ಊಟ ಸವಿದಿರುವವರು 'ನಟ ಸಾರ್ವಭೌಮ' ಚಿತ್ರತಂಡ.
ಪುನೀತ್ ರಾಜ್ ಕುಮಾರ್ ಸದ್ಯ 'ನಟ ಸಾರ್ವಭೌಮ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ಈ ಚಿತ್ರದ ನಿರ್ದೇಶಕರ ತಂಡಕ್ಕೆ ಅಪ್ಪು ವಿಶೇಷ ಔತಣವನ್ನು ಏರ್ಪಡಿಸಿದ್ದರು. ಚಿತ್ರದ ನಿರ್ದೇಶಕ ಪವನ್ ಒಡೆಯರ್, ಹಾಸ್ಯ ನಟ ಚಿಕ್ಕಣ್ಣ, ನಿರ್ದೇಶಕ ಕುಮಾರ್ ಹಾಗೂ ನಿರ್ದೇಶಕರ ತಂಡದವರು ಒಟ್ಟಿಗೆ ಊಟ ಮಾಡಿದ್ದಾರೆ.
ಅಪ್ಪು ನಿವಾಸದಲ್ಲಿ ಊಟ ಸವಿದ ವಿಚಾರವನ್ನು ಚಿತ್ರದ ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಅವರ ಕೈ ರುಚಿಯನ್ನು ಹೊಗಳಿದ್ದಾರೆ.

ಅಂದಹಾಗೆ, 'ರಣವಿಕ್ರಮ' ನಂತರ ಮತ್ತೆ ಪುನೀತ್ ರಾಜ್ ಕುಮಾರ್ ಅವರಿಗೆ ಪವನ್ ಒಡೆಯರ್ ಡೈರೆಕ್ಷನ್ ಮಾಡುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಈಗಾಗಲೇ ನಡೆಯುತ್ತಿದೆ.
More from Filmibeat
English summary
'Nata Sarvabhouma' kannada movie direction team had lunch in Actor Puneeth Rajkumar' house.
nata sarvabhouma puneeth rajkumar pawan wodeyar sandalwood ಪುನೀತ್ ರಾಜ್ ಕುಮಾರ್ ಪವನ್ ಒಡೆಯರ್ ಸ್ಯಾಂಡಲ್ ವುಡ್


Click it and Unblock the Notifications











