ಸಲ್ಮಾನ್ ಖಾನ್ ಮುಂದೆ ಗೆದ್ದು ನಿಂತ ಪುನೀತ್
ಕನ್ನಡ ಸಿನಿಮಾಗಳು ಪರಭಾಷೆ ಚಿತ್ರಗಳ ಮಟ್ಟಿಗೆ ಬರಬೇಕು ಎನ್ನುವುದು ಎಷ್ಟೋ ಸಿನಿ ಪ್ರೇಮಿಗಳ ಆಸೆಯಾಗಿತ್ತು. ಆದರೆ, ಕನ್ನಡ ಚಿತ್ರಗಳು ಬೇರೆ ಭಾಷೆಯ ಸಿನಿಮಾಗಳನ್ನು ಮೀರಿಸುವ ಮಟ್ಟಿಗೆ ಬೆಳೆಯುತ್ತಿವೆ ಎನ್ನುವುದು ಖುಷಿ ಪಡುವ ವಿಚಾರ.
ಇತ್ತೀಚೆಗೆ 'ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಈಗ 'ನಟ ಸಾರ್ವಭೌಮ' ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರದ ಟ್ರೇಲರ್ ಅನ್ನೇ ಮೀರಿಸಿದ್ದಾರೆ ಪವರ್ ಸ್ಟಾರ್ ಪವರ್.
ಪುನೀತ್ ನಟನೆಯ 'ನಟ ಸಾರ್ವಭೌಮ' ಟ್ರೇಲರ್ ಎರಡು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಅದೇ ದಿನ ಸಲ್ಮಾನ್ ಅವರ 'ಭಾರತ್' ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ, ಈಗ ಆ ಚಿತ್ರವನ್ನು ಮೀರಿಸಿ 'ನಟ ಸಾರ್ವಭೌಮ' ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಸದ್ಯ 'ನಟ ಸಾರ್ವಭೌಮ' ಚಿತ್ರದ ಟ್ರೇಲರ್ ನಂಬರ್ ಒನ್ ಸ್ಥಾನದಲ್ಲಿದೆ. ಟ್ರೇಲರ್ ಎರಡು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.
ಚಿತ್ರದಲ್ಲಿ ಅಪ್ಪು ಜೋಡಿಯಾಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರದ ನಿರ್ದೇಶನ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ.


Click it and Unblock the Notifications











