ದಕ್ಷಿಣ ಕಾಶಿಯಲ್ಲಿ ನಡೆಯುತ್ತಿದೆ 'ನಟ ಸಾರ್ವಭೌಮ'ನ ದರ್ಬಾರ್
Recommended Video

Natasaarvabhowma : ಹೇಗ್ ನಡೀತಿದೆ ನಟ ಸಾರ್ವಬೌಮ ಚಿತ್ರೀಕರಣ...? | FIlmibeat Kannada
ದಕ್ಷಿಣ ಕಾಶಿ ಎಂದೇ ಹೆಸರು ವಾಸಿಯಾಗಿರುವ ಐತಿಹಾಸಿಕ ಕೇಂದ್ರ ಮಹಾಕೂಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ.
ಮಹಾಕೂಟೇಶ್ವರ ದೇವಾಲಯದ ಪಕ್ಕದಲ್ಲಿಯೇ ಇರುವ ಪುಷ್ಕರಣಿಯಲ್ಲಿ ಬೃಹತ್ ಸೆಟ್ ಹಾಕಿ, ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದ ಕೈಮಾಕ್ಸ್ ಹಂತದ ಶೂಟಿಂಗ್ ಇದಾಗಿದೆ. ಕಳೆದ ಐದು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿರುವ ಪುನೀತ್ ರನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ.

ರಾತ್ರಿ 9 ಗಂಟೆಯಿಂದ ಪ್ರಾರಂಭವಾದ ಶೂಟಿಂಗ್ ಬೆಳಗಿನ ಜಾವ 5 ಗಂಟೆಯವರೆಗೆ ಮಾಡಲಾಗುತ್ತಿದೆ. ಈಗಾಗಲೇ ಶೂಟಿಂಗ್ ಮೇಕಿಂಗ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೊತೆಗೆ ನಟಿ ರಚಿತಾ ರಾಮ್ ಜೊತೆಗೆ ಕೊನೆಯ ಸೀನ್ ಚಿತ್ರೀಕರಣ ಮಾಡಲಾಗುತ್ತಿದೆ.

ಅಂದಹಾಗೆ, ಪವನ ಒಡೆಯರ್ 'ನಟ ಸಾರ್ವಭೌಮ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಕ್ ಲೈನ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
More from Filmibeat
English summary
Power Star Puneet Rajkumar starrer Natasarwabouma Kannada movie movie shooting is taking place in mahakuta.
puneeth rajkumar pawan wadeyar rachita ram sandalwood kannada movies ಪುನೀತ್ ರಾಜ್ ಕುಮಾರ್ ರಚಿತಾ ರಾಮ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ


Click it and Unblock the Notifications











