ತನ್ನನ್ನು ತಾನು ಕಂಡುಕೊಳ್ಳಲು ಪ್ರಕೃತಿಯತ್ತ ಮುಖ ಮಾಡಿದ 'ನಟ'
ಸ್ಯಾಂಡಲ್ ವುಡ್ ನ ಹೀರೋ ನಟರಾಜ್ ಅಂದರೆ ಇವ್ರನ್ನ ಯಾರು ಕೂಡ ಪತ್ತೆ ಹಚ್ಚುವುದಿಲ್ಲ. ರಾಮ ರಾಮ ರೇ ಸಿನಿಮಾ ನಾಯಕ ಅಂದ್ರೆ ಓ ಅವ್ರೇನಾ ಅಂತಾರೆ. ಆದ್ರೆ ಅವರು ಎದುರು ಬಂದ್ರೆ ಪತ್ತೆ ಹಚ್ಚೋದು ಸ್ವಲ್ಪ ಕಷ್ಟನೇ. ಅಷ್ಟರ ಮಟ್ಟಿಗೆ ನಟರಾಜ್ ರಾಮ ರಾಮ ರೇ ಚಿತ್ರದಲ್ಲಿ ತಮ್ಮ ಪಾತ್ರದಲ್ಲೇ ಮುಳುಗಿ ಹೋಗಿದ್ದರು.
ಸದ್ಯ ಹೀರೋ ನಟ ಪ್ರಕೃತಿಯತ್ತ ಮುಖ ಮಾಡಿದ್ದಾರೆ. ಹಾಗಂತ ಸಿನಿಮಾರಂಗವನ್ನು ಬಿಟ್ಟಿಲ್ಲ. ತನ್ನನ್ನು ತಾನು ಕಂಡುಕೊಳ್ಳಲು ನಟರಾಜ್ ಒಂದು ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆ ಆದ ನಂತರ ಒಂದು ಚಾರಣ ಹೋಗಿ ಬರುತ್ತಾರೆ. ಇತ್ತೀಚಿಗಷ್ಟೆ "ದೇವಭೂಮಿ" ಎಂದು ಕರೆಸಿಕೊಳ್ಳುವ ಹಿಮಾಚಲ ಪ್ರದೇಶದಲ್ಲಿ 10 ದಿನದ ಚಾರಣ ಮುಗಿಸಿ ಬಂದಿದ್ದಾರೆ.

ಈ ಹಿಂದೆ ನಟ ಅಸ್ಸಾಂ, ಮೇಘಾಲಯಾ, ನಾಗಲ್ಯಾಂಡ್ ಹೀಗೆ ಸಾಕಷ್ಟು ಕಡೆಗಳಲ್ಲಿ ಸುತ್ತಾಡಿದ್ದಾರೆ. ಟ್ರಿಪ್ ಮಾಡುವುದಕ್ಕೂ ಟ್ರಕ್ಕಿಂಗ್ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ನಟ ರಾಜ್ಯ ಬಹುತೇಕ ಬೆಟ್ಟ ಗುಡ್ಡಗಳನ್ನ ಹತ್ತಿ ಇಳಿದಿದ್ದಾರೆ.

ಸಿನಿಮಾ ಅಂದರೆ ಅದಕ್ಕೆ ಅಂಟಿಕೊಳ್ಳದೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಅದರ ಜೊತೆಯಲ್ಲಿ ದೊಡ್ಡವರು ಹೇಳಿದಂತೆ ದೇಶ ಸುತ್ತಿ ನೋಡು ಕೋಶ ಓದಿ ನೋಡು ಅನ್ನುವ ಹಾಗೆ ಇಂತಹ ಹವ್ಯಾಸಗಳನ್ನು ಇಟ್ಟುಕೊಳ್ಳಬೇಕು. ಸದ್ಯ ನಟರಾಜ್ ಅಭಿನಯದ ಕಳ್ಬೆಟ್ಟದ ದರೋಡೆಕೋರರು ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಅದರ ಜೊತೆಯಲ್ಲಿ ಮತ್ತೆರಡು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದು ಚಿತ್ರೀಕರಣ ಶುರುವಾಗಬೇಕಿದೆ.


Click it and Unblock the Notifications











