ಪುನೀತ್ ನಟಸಾರ್ವಭೌಮ ಚಿತ್ರಕ್ಕೆ 4 ವರ್ಷ; ಅಂದಿಗೆ ಚಿತ್ರ ಮಾಡಿದ್ದ ದಾಖಲೆ ಒಂದೆರಡಲ್ಲ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಪವನ್ ಒಡೆಯರ್ ರಣವಿಕ್ರಮ ಬಳಿಕ ಎರಡನೇ ಬಾರಿಗೆ ನಟ ಸಾರ್ವಭೌಮ ಚಿತ್ರಕ್ಕಾಗಿ ಕೈಜೋಡಿಸಿದ್ದರು. ಮೊದಲ ಚಿತ್ರದಲ್ಲಿ ಫಿಲ್ಮ್‌ಫೇರ್ ಅವಾರ್ಡ್ ಬರುವಂತೆ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆ ಮೇಲೆ ತೋರಿಸಿದ್ದ ನಿರ್ದೇಶಕ ಪವನ್ ಒಡೆಯರ್ ನಟ ಸಾರ್ವಭೌಮ ಚಿತ್ರದಲ್ಲಿ ಅಪ್ಪುಗೆ ವಿಭಿನ್ನ ಹೇರ್‌ಸ್ಟೈಲ್ ಮಾಡಿಸುವ ಮೂಲಕ ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ್ದರು.

ಚಿತ್ರದಲ್ಲಿ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ನಟನೆ, ಡಾನ್ಸ್ ಹಾಗೂ ಫೈಟ್‌ಗೆ ಸಿನಿ ರಸಿಕರು ಹಾಗೂ ಅಭಿಮಾನಿಗಳು ಫಿದಾ ಆಗಿದ್ದರು. ನಟಿಯರಾಗಿ ಅನುಪಮಾ ಪರಮೇಶ್ವರನ್ ಹಾಗೂ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಅಪ್ಪು ಹಾಗೂ ಅನುಪಮಾ ಜೋಡಿಗೆ ವಿಶೇಷ ಫ್ಯಾನ್‌ಬೇಸ್ ಇಂದಿಗೂ ಇದೆ. ಚಿತ್ರಕ್ಕೆ ತಮಿಳಿನ ಡಿ ಇಮ್ಮಾನ್ ಸಂಗೀತ ಸಂಯೋಜನೆ ಮಾಡಿದ್ದರು ಹಾಗೂ ಚಿತ್ರದ ಬಹುತೇಕ ಎಲ್ಲಾ ಹಾಡುಗಳೂ ಸಹ ಹಿಟ್ ಆಗಿದ್ದವು ಹಾಗೂ ಇಂದಿಗೂ ಹಲವರ ಫೇವರಿಟ್ ಲಿಸ್ಟ್‌ನಲ್ಲಿ ಈ ಹಾಡುಗಳಿವೆ.

ಇನ್ನು ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿ ಗೆದ್ದಿದ್ದರು. ಪುನೀತ್ ವಿಭಿನ್ನ ಲುಕ್, ಮೊದಲ ಬಾರಿಗೆ ಪತ್ರಕರ್ತನ ಪಾತ್ರದಲ್ಲಿ ಅಪ್ಪು ಕಾಣಿಸಿಕೊಂಡಿದ್ದು ಹಾಗೂ ಚಿತ್ರದ ಸಖತ್ ಟ್ರೈಲರ್ ಕಟ್ ಸಿನಿಮಾ ಮೇಲೆ ಸಿನಿ ರಸಿಕರಲ್ಲಿ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದ್ದವು. ಹೀಗೆ ವಿಭಿನ್ನ ಕಾರಣಗಳಿಂದ ನಿರೀಕ್ಷೆ ಹುಟ್ಟುಹಾಕಿದ್ದ ನಟ ಸಾರ್ವಭೌಮ ಬಿಡುಗಡೆಯಾಗಿ ಇಂದಿಗೆ ( ಫೆಬ್ರವರಿ 7 ) ನಾಲ್ಕು ವರ್ಷಗಳು ಕಳೆದಿವೆ. ಈ ಕುರಿತಾಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದು, ಚಿತ್ರ ಮಾಡಿದ್ದ ದಾಖಲೆಗಳ ಬಗ್ಗೆ ಬರೆದುಕೊಂಡಿದ್ದಾರೆ. ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ ದೊಡ್ಡಮಟ್ಟದಲ್ಲಿ ಬಿಡುಗಡೆಗೊಂಡು ಅಂದಿಗೆ ಈ ಮೈಲಿಗಲ್ಲುಗಳನ್ನು ನೆಟ್ಟಿತ್ತು.

ಬೆಂಗಳೂರು, ಮೈಸೂರಿನಲ್ಲಿ ದೊಡ್ಡ ಬಿಡುಗಡೆ

ಬೆಂಗಳೂರು, ಮೈಸೂರಿನಲ್ಲಿ ದೊಡ್ಡ ಬಿಡುಗಡೆ

ನಟ ಸಾರ್ವಭೌಮ ಚಿತ್ರ ಬಿಡುಗಡೆಯಾದಾಗ ಈ ಹಿಂದಿನ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ದೊಡ್ಡ ಬಿಡುಗಡೆಯನ್ನು ಕಂಡಿತ್ತು. ನಟ ಸಾರ್ವಭೌಮ ಬೆಂಗಳೂರಿನಲ್ಲಿ ಮೊದಲ ದಿನ 575 ಪ್ರದರ್ಶನಗಳನ್ನು ಕಂಡಿತ್ತು ಹಾಗೂ ಮೈಸೂರಿನಲ್ಲಿ 66 ಪ್ರದರ್ಶನಗಳನ್ನು ಕಂಡಿತ್ತು. ಇಷ್ಟು ದೊಡ್ಡ ಮಟ್ಟದ ಚಿತ್ರಗಳನ್ನು ಅಲ್ಲಿಯವರೆಗೂ ಯಾವ ಕನ್ನಡ ಚಿತ್ರವೂ ಸಹ ಪಡೆದುಕೊಂಡಿರಲಿಲ್ಲ.

ಮಲ್ಟಿಪ್ಲೆಕ್ಸ್ ದಾಖಲೆ, ಮೈಸೂರಿನಲ್ಲಿ ದಾಖಲೆಯ ಓಪನಿಂಗ್ ಕಲೆಕ್ಷನ್

ಮಲ್ಟಿಪ್ಲೆಕ್ಸ್ ದಾಖಲೆ, ಮೈಸೂರಿನಲ್ಲಿ ದಾಖಲೆಯ ಓಪನಿಂಗ್ ಕಲೆಕ್ಷನ್

ಇನ್ನು ನಟ ಸಾರ್ವಭೌಮ ಮೊದಲ ದಿನ ರಾಜ್ಯಾದ್ಯಂತ 440 ಮಲ್ಟಿಪ್ಲೆಕ್ಸ್‌ಗಳನ್ನು ಕಂಡಿತ್ತು. ಈ ಮೂಲಕ ಅಂದಿಗೆ ಬಿಡುಗಡೆ ದಿನ ಅತಿಹೆಚ್ಚು ಮಲ್ಟಿಪ್ಲೆಕ್ಸ್ ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರ ಎಂಬ ದಾಖಲೆಯನ್ನು ಬರೆದಿತ್ತು. ಅಷ್ಟೇ ಅಲ್ಲದೇ ಮೈಸೂರಿನಲ್ಲಿ ಮೊದಲ ದಿನ 49 ಲಕ್ಷ ರೂಪಾಯಿ ಗಳಿಸುವ ಮೂಲಕ ನಗರದಲ್ಲಿ ಬಿಡುಗಡೆ ದಿನ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನೂ ಸಹ ಬರೆದಿತ್ತು.

ರಿಲೀಸ್ ಡೇಗೂ ಮುನ್ನ ಪ್ರದರ್ಶನ, ಸತತ 24 ಗಂಟೆ ಶೋಸ್

ರಿಲೀಸ್ ಡೇಗೂ ಮುನ್ನ ಪ್ರದರ್ಶನ, ಸತತ 24 ಗಂಟೆ ಶೋಸ್

ಇನ್ನು ನಟಸಾರ್ವಭೌಮ ಚಿತ್ರ ಸತತವಾಗಿ ಒಂದು ದಿನದ ಪೂರ್ತಿ ಅಂದರೆ 24 ಗಂಟೆಗಳ ಕಾಲ ಪ್ರದರ್ಶನಗೊಂಡ ಮೊದಲ ಚಿತ್ರ ಎಂಬ ದಾಖಲೆಯನ್ನು ಬರೆದಿತ್ತು. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ದಿನ ಸತತವಾಗಿ 7 ಪ್ರದರ್ಶನಗಳನ್ನು ಕಂಡಿತ್ತು. ಅಲ್ಲದೇ ಬಿಡುಗಡೆಗೂ ಹಿಂದಿನ ದಿನ ರಾತ್ರಿ ವೇಳೆಯೇ ಪ್ರಸನ್ನ ಚಿತ್ರಮಂದಿರದಲ್ಲಿ ನಟ ಸಾರ್ವಭೌಮ ಪ್ರದರ್ಶನವನ್ನು ಕಂಡಿತ್ತು. ಆದರೆ ಇದೂ ಪ್ರೆಸ್ ಶೋ ಕೂಡ ಆಗಿರಲಿಲ್ಲ ಹಾಗೂ ಸೆಲೆಬ್ರಿಟಿ ಪ್ರೀಮಿಯರ್ ಶೋ ಕೂಡ ಆಗಿರದೇ ಅಭಿಮಾನಿಗಳೇ ಟಿಕೆಟ್ ಖರೀದಿಸಿ ನೋಡಿದ್ದ ಪ್ರದರ್ಶನವಾಗಿತ್ತು. ನಗರದ ಒಟ್ಟು ನಾಲ್ಕು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯ ಪ್ರದರ್ಶನಗಳು ಆಯೋಜನೆಗೊಂಡಿದ್ದವು.

More from Filmibeat

English summary
Natasaarvabhowma completes 4 years; Checkout the list of records done by the film. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X