'ನಟಸಾರ್ವಭೌಮ' ಚಿತ್ರದಲ್ಲಿ ಕಂಡ ರಿಯಲ್ ಸ್ಟಾರ್ ಉಪೇಂದ್ರ.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಟ್ರೈಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದೆ. ಸದ್ಯ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರೋ ಟ್ರೈಲರ್ ಒಂದು ಮಿಲಿಯನ್ ವೀಕ್ಷಣೆ ದಾಟಿ ಮುನ್ನುಗ್ಗುತ್ತಿದೆ.
'ನಟಸಾರ್ವಭೌಮ' ಹಾರರ್ ಥ್ರಿಲ್ಲಿಂಗ್ ಸಿನಿಮಾ ಎಂಬುದು ಟ್ರೈಲರ್ ನೋಡಿದ್ಮೇಲೆ ಅಧಿಕೃತವಾಗಿದೆ. ಆದ್ರೆ, ಮತ್ತಷ್ಟು ಕುತೂಹಲ ಮೂಡಿಸುವಂತಹ ದೃಶ್ಯಗಳು ಟ್ರೈಲರ್ ನಲ್ಲಿದೆ.
ಅಪ್ಪು ಅವರ ರೆಗ್ಯುಲರ್ ಸಿನಿಮಾಗಳಂತೆ ಒಳ್ಳೆಯ ಡ್ಯಾನ್ಸ್, ಫೈಟ್, ಕಾಮಿಡಿ, ಫ್ಯಾಮಿಲಿ ಆಡಿಯೆನ್ಸ್ ಸೆಳಯುವ ಕಥೆ, ಹಾಡುಗಳು ಎಲ್ಲವೂ ಈ ಚಿತ್ರದಲ್ಲಿದೆ. ಇದೆಲ್ಲರ ಮಧ್ಯೆ ಗಮನ ಸೆಳೆದಿದ್ದು ಪುನೀತ್ ದೇಹದಲ್ಲಿ ಉಪೇಂದ್ರ ಆತ್ಮ. ಏನಿದು ಟ್ವಿಸ್ಟ್? ಮುಂದೆ ಓದಿ....

ಉಪ್ಪಿ ಸ್ಟೈಲ್ ನಲ್ಲಿ ಅಪ್ಪು
ನಟಸಾರ್ವಭೌಮ ಟ್ರೈಲರ್ ಗಮನಿಸಿದಾಗ ಅಲ್ಲೊಂದು ದೃಶ್ಯದಲ್ಲಿ ಉಪೇಂದ್ರ ಅವರ ಸ್ಟೈಲ್ ಕಣ್ಣಿಗೆ ಬೀಳುತ್ತೆ. ಸಾಮಾನ್ಯವಾಗಿ ಎರಡು ಕಣ್ಣುಗಳನ್ನ ಎಡಕ್ಕೆ ಬಲಕ್ಕೆ ಜೋರಾಗಿ ಆಡಿಸುವುದು ಉಪ್ಪಿ ಸ್ಟೈಲ್. ಈ ಸ್ಟೈಲ್ ಪುನೀತ್ ಅವರಲ್ಲಿ ಕೂಡ ಕಾಣಬಹುದು. ಬಹುಶಃ ಅಪ್ಪು ಇದೇ ಮೊದಲ ಸಲ ಈ ರೀತಿ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.

ಮೊದಲೇ ಹಾರರ್ ಸಿನಿಮಾ
ನಟಸಾರ್ವಭೌಮ ಸಿನಿಮಾ ಹಾರರ್ ಕಥೆ. ಈ ಸಿನಿಮಾದಲ್ಲಿ ದೆವ್ವದ ಕಾಟ ಇದೆ. ಅದು ಪುನೀತ್ ಅವರಿಗೆ ಇರಬಹುದು ಎಂಬುದು ಸದ್ಯದ ಕುತೂಹಲ. ಹಾಗಾಗಿ, ಅಪ್ಪು ದೇಹದಲ್ಲಿ ಇರಬಹುದು ಎನ್ನುವ ದೆವ್ವ ಉಪ್ಪಿ ಸ್ಟೈಲ್ ನಲ್ಲಿ ಕಣ್ಣಾಡಿಸಿದೆ. ಅದಕ್ಕೆ ಪುನೀತ್ ದೇಹದಲ್ಲಿ ಉಪೇಂದ್ರ ಆತ್ಮ ಎಂದು ಹೇಳಿದ್ದು.

ನಿಜವಾಗಲೂ ಅಪ್ಪು 'ನಟಸಾರ್ವಭೌಮ'
ಅಂದ್ಹಾಗೆ, ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ನಟಸಾರ್ವಭೌಮ ಎಂದು ಶೀರ್ಷಿಕೆ ಇಟ್ಟಾಗ, ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕಮರ್ಷಿಯಲ್ ಚಿತ್ರಕ್ಕೆ ಇಂತಹ ಟೈಟಲ್ ಬೇಡ ಎಂದಿದ್ದರು. ಬಹುಶಃ ಅಪ್ಪು ಅವರ ಅಭಿನಯ ನೋಡಿದ್ಮೇಲೆ ಈ ಟೈಟಲ್ ಇದಕ್ಕೆ ಸೂಕ್ತವಾಗಿದೆ ಎನ್ನಬಹುದು. ಯಾಕಂದ್ರೆ, ಅಪ್ಪು ಈ ಚಿತ್ರದಲ್ಲಿ ಹೆಚ್ಚು ಫರ್ಫಾಮೆನ್ಸ್ ಗೆ ಅವಕಾಶ ನೀಡಿದ್ದಾರೆ.

ಫೆಬ್ರವರಿ 7ಕ್ಕೆ ಗ್ರ್ಯಾಂಡ್ ಎಂಟ್ರಿ
ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಈ ಸಿನಿಮಾ ಫೆಬ್ರವರಿ 7 ರಂದು ಗ್ರ್ಯಾಂಡ್ ಎಂಟ್ರಿಯಾಗ್ತಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿದೆ. ಪುನೀತ್ ಗೆ ಜೋಡಿಯಾಗಿ ರಚಿತಾ ರಾಮ್ ಮತ್ತು ಅನುಪಮ ಪರಮೇಶ್ವರನ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರವಿಶಂಕರ್, ಸಾಧುಕೋಕಿಲಾ, ಚಿಕ್ಕಣ್ಣ, ಅಚ್ಯುತ್ ಕುಮಾರ್, ಬಿ ಸರೋಜಾ ದೇವಿ ಅಭಿನಯಿಸಿದ್ದಾರೆ. ಡಿ ಇಮ್ಮನ್ ಸಂಗೀತ ನೀಡಿದ್ದಾರೆ.


Click it and Unblock the Notifications











