For Quick Alerts
  ALLOW NOTIFICATIONS  
  For Daily Alerts

  ಬಂದ ನೋಡೋ 'ನಟಸಾರ್ವಭೌಮ', ದಾಖಲೆಗಳೆಲ್ಲಾ ನೆಲಸಮ

  |
  Nata Sarvabhouma Movie: ಬಿಡುಗಡೆ ಆಯ್ತು ನಟಸಾರ್ವಭೌಮ ಟ್ರೇಲರ್ | FILMIBEAT KANNADA

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಟ್ರೈಲರ್ ಇಂದು ರಿಲೀಸ್ ಆಗಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳ ಮೂಲಕ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದ ನಟಸಾರ್ವಭೌಮ ಈಗ ಮತ್ತಷ್ಟು ಕಿಕ್ ಹೆಚ್ಚಿಸಿದೆ.

  ಇದೇ ಮೊದಲ ಸಲ ಪುನೀತ್ ರಾಜ್ ಕುಮಾರ್ ಜರ್ನಲಿಸ್ಟ್ ಪಾತ್ರ ನಿಭಾಯಿಸಿದ್ದು, ಅದರಲ್ಲಿ ಸಿಕ್ಕಾಪಟ್ಟೆ ಸರ್ಪ್ರೈಸ್ ಸಿಕ್ಕಿದೆ. ಇದನ್ನ ನೋಡಿದ ಅಭಿಮಾನಿಗಳು ಸಿನಿಮಾದಲ್ಲಿ ಫುಲ್ ಹಂಗಾಮಾನೇ ಅಂತಿದ್ದಾರೆ. 14 ನಿಮಿಷದಲ್ಲಿ ಒಂದು ಲಕ್ಷ ವೀವ್ಸ್ ಕಂಡ ಟ್ರೈಲರ್ ನಲ್ಲಿ ಅದ್ಭುತವಾದ ಮನರಂಜನೆ ಕಾಣ್ತಿದೆ.

  ಗಾಂಧಿನಗರದಲ್ಲಿ 'ನಟ ಸಾರ್ವಭೌಮ'ನಿಗೆ ಸಿಕ್ಕ ಚಿತ್ರಮಂದಿರ ಯಾವುದು?ಗಾಂಧಿನಗರದಲ್ಲಿ 'ನಟ ಸಾರ್ವಭೌಮ'ನಿಗೆ ಸಿಕ್ಕ ಚಿತ್ರಮಂದಿರ ಯಾವುದು?

  ಅಪ್ಪು ಅಭಿಮಾನಿ ನಿರೀಕ್ಷೆ ಮಾಡೋ ಎಲ್ಲ ಎಲಿಮೆಂಟ್ಸ್ ಈ ಚಿತ್ರದಲ್ಲಿದೆ. ಡ್ಯಾನ್ಸ್, ಫೈಟ್, ಕಾಮಿಡಿ, ಥ್ರಿಲ್, ಸ್ಟೈಲ್ ಎಲ್ಲವೂ ಇದೆ. ಇದೆಲ್ಲರ ಜೊತೆ ಬಹುದೊಡ್ಡ ಸರ್ಪ್ರೈಸ್ ಸಿಕ್ಕಿರೋದು ಅಪ್ಪಿ ಬಳಗಕ್ಕೆ ತಡೆಯಲಾರದಷ್ಟು ಖುಷಿ ತಂದಿದೆ. ಅಷ್ಟಕ್ಕೂ ಏನದು? ಮುಂದೆ ಓದಿ.....

  ಹಾರರ್ ಥ್ರಿಲ್ಲರ್

  ಹಾರರ್ ಥ್ರಿಲ್ಲರ್

  ನಟಸಾರ್ವಭೌಮ ಟೈಟಲ್ ಗೆ ಒಂದು ಗೌರವವಿದೆ, ಅದಕ್ಕೊಂದು ಗತ್ತಿದೆ ಎಂಬ ಮಾತಿನ ನಡೆವೆಯೂ ಕಥೆ ಏನಿರಬಹುದು ಎಂಬ ಕುತೂಹಲ ಕಾಡುತ್ತಿತ್ತು. ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರದ ಕಥೆ ಬಹಿರಂಗವಾಗಿದೆ. ಹೌದು, ನಟಸಾರ್ವಭೌಮ ಹಾರರ್ ಥ್ರಿಲ್ಲರ್ ಕಥೆಯಾಗಿದೆ.

  'ನಟ ಸಾರ್ವಭೌಮ': ಸಾಂಗ್ ಹಿಟ್ಟಾಯ್ತು, ಟ್ರೇಲರ್ ರೆಡಿಯಾಯ್ತು'ನಟ ಸಾರ್ವಭೌಮ': ಸಾಂಗ್ ಹಿಟ್ಟಾಯ್ತು, ಟ್ರೇಲರ್ ರೆಡಿಯಾಯ್ತು

  ಅಪ್ಪು ಮೈಮೇಲೆ ಗುಮ್ಮ

  ಅಪ್ಪು ಮೈಮೇಲೆ ಗುಮ್ಮ

  'ನಟಸಾರ್ವಭೌಮ' ಹಾರರ್ ಸಿನಿಮಾ. ಈ ಚಿತ್ರದಲ್ಲಿ ದೆವ್ವ ಯಾರ ಮೇಲೆ ಬರುತ್ತೆ ಎಂಬ ಕುತೂಹಲ ಬೇಡ. ಯಾಕಂದ್ರೆ ಟ್ರೈಲರ್ ನಲ್ಲೇ ಅದನ್ನ ಬಿಟ್ಟುಕೊಟ್ಟಿದ್ದಾರೆ. ಅಂದ್ಹಾಗೆ, ಈ ಸಿನಿಮಾದಲ್ಲಿ ದೆವ್ವ ಇರೋದು ಪುನೀತ್ ರಾಜ್ ಕುಮಾರ್ ಅವರ ಮೇಲೆ. ಹಾಗಾಗಿ, ಪುನೀತ್ ಹಾರರ್ ಪಾತ್ರ ಮಾಡ್ತಿರೋದು ಇದೇ ಮೊದಲು.

  'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ 'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

  ಜರ್ನಲಿಸ್ಟ್ ಅಪ್ಪು

  ಜರ್ನಲಿಸ್ಟ್ ಅಪ್ಪು

  ಇನ್ನು ಸಿನಿಮಾದಲ್ಲಿ ಅಪ್ಪು ಫೋಟೋ ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಕೂಡ ಪವರ್ ಸ್ಟಾರ್ ಅಭಿಮಾನಿಗಳಿಗೆ ಸರ್ಪ್ರೈಸ್. ಯಾಕಂದ್ರೆ, ಇದೇ ಮೊದಲ ಸಲ ಪುನೀತ್ ಜರ್ನಲಿಸ್ಟ್ ಆಗಿ ಅಭಿನಯಿಸಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

  ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

  ಸದ್ಯ ಟ್ರೈಲರ್ ಆದ 110 ನಿಮಿಷದಲ್ಲಿ 4 ಲಕ್ಷ ವೀಕ್ಷಣೆ ಕಂಡಿರುವ ನಟಸಾವಭೌಮ ಟ್ರೈಲರ್, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ. ಅಪ್ಪು ಹೊಸ ಆಟ ನೋಡಿದ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

  ಫೆಬ್ರವರಿ 7 ರಂದು ಎಂಟ್ರಿ

  ಫೆಬ್ರವರಿ 7 ರಂದು ಎಂಟ್ರಿ

  ಫೆಬ್ರವರಿ 7 ರಂದು ನಟಸಾರ್ವಭೌಮ ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಪವನ್ ಒಡೆಯರ್ ನಿರ್ದೇಶನ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ರಚಿತಾ ರಾಮ್, ಅನುಪಮಾ ಪರಮೇಶ್ವರನ್, ರವಿ ಶಂಕರ್, ಅಚ್ಯುತ್ ಕುಮಾರ್, ಚಿಕ್ಕಣ್ಣ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಡಿ ಇಮ್ಮನ್ ಸಂಗೀತವಿದೆ.

  ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  English summary
  Power Star Puneeth Rajkumar starring Natasaarvabhowma Trailer opened to excellent response. trailer reached 350K views in 81 min with 33K likes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X