twitter
    For Quick Alerts
    ALLOW NOTIFICATIONS  
    For Daily Alerts

    ಚೀನಾದಲ್ಲಿ ಕನ್ನಡ ಸಿನಿಮಾ ಮೋಡಿ: ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಾಚಿಕೊಂಡ ನಟೇಶ

    |

    ನಟೇಶ್ ಹೆಗ್ಡೆ ನಿರ್ದೇಶೀಸಿ, ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ 'ಪೆದ್ರೊ' ಸಿನಿಮಾ ಚೀನಾದ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಮುಖ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

    ಚೀನಾದ ಪ್ರತಿಷ್ಠಿತ ಪಿಂಗ್ಯಾವೊ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡು, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದೆ. ಸಿನಿಮಾದ ನಿರ್ದೇಶಕ ನಟೇಶ್ ಹೆಗಡೆ ಈ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪ್ರಶಸ್ತಿಯನ್ನು ತಮ್ಮ ತಂದೆ, ನಟ ಗೋಪಾಲ ಹೆಗ್ಡೆ ಮತ್ತು ಸುಜಾತಾ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

    ನಟೇಶ ಹೆಗ್ಡೆಗೆ ಖ್ಯಾತ ನಿರ್ದೇಶಕ ರಾಬೆರ್ಟೊ ರೊಸಲೀನಿ ಹೆಸರಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯ ಜೊತೆಗೆ 10000 ಯುಎಸ್ ಡಾಲರ್ (7.51) ಲಕ್ಷ ನಗದು ಹಣ ನೀಡಲಾಗಿದೆ.

    Natesh Hegdes Pedro Movie Won Best Director Award In Pingyao International Film Festival

    ಕ್ರಿಶ್ಚಿಯನ್ ಸಮುದಾಯದ ಲೈನ್‌ಮ್ಯಾನ್ ಒಬ್ಬ ಆಕಸ್ಮಿಕವಾಗಿ ಹಸುವೊಂದನ್ನು ಕೊಂದಾಗ ಆ ಊರಿನ ಜನ ಆತನನ್ನು ನೋಡುವ ಬಗೆ, ಆತನಲ್ಲಿ ಆಗುವ ಬದಲಾವಣೆ ಇತರೆ ಅಂಶಗಳನ್ನು 'ಪೆದ್ರೊ' ಸಿನಿಮಾ ಒಳಗೊಂಡಿದೆ.

    'ಪೆದ್ರೊ' ಸಿನಿಮಾ ಈ ಹಿಂದೆ ಪ್ರತಿಷ್ಠಿತ ಬೂಸಾನ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸ್ಕ್ರೀನಿಂಗ್ ಆಗಿದೆ. ಲಂಡನ್ ಸಿನಿಮೋತ್ಸದಲ್ಲಿಯೂ ಸ್ಕ್ರೀನಿಂಗ್ ಆಗಿದೆ. ಇನ್ನೂ ಹಲವು ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡ ಬಳಿಕ ಸಿನಿಮಾವನ್ನು ವೀಕ್ಷಕರಿಗೆ ನೋಡಲು ಚಿತ್ರಮಂದಿರ ಅಥವಾ ಒಟಿಟಿಯಲ್ಲಿ ಒದಗಿಸುವ ಸಾಧ್ಯತೆ ಇದೆ.

    ನಟೇಶ್ ಹೆಗ್ಡೆ ಈ ಮೊದಲು 'ಕುರ್ಲಿ' ಹೆಸರಿನ ಕಿರು ಚಿತ್ರ ನಿರ್ದೇಶನ ಮಾಡಿದ್ದರು. 'ಪೆದ್ರೊ' ಅವರ ನಿರ್ದೇಶನದ ಮೊತ್ತ ಮೊದಲ ಸಿನಿಮಾ.

    English summary
    Natesh Hegde's Pedro movie won best director award in Pingyao international film festival. Award included 10000 US dollar.
    Wednesday, October 20, 2021, 10:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X