Martin: ದರೋಡೆಕೋರನಾಗಿದ್ದ ನಥನ್.. ದೊಡ್ಡ ಕುತ್ತಿಗೆ ರುಬಿಲ್: ಈ ದೈತ್ಯದೇಹಿಗಳ ಹಿನ್ನಲೆ, ಡಯೆಟ್ ಏನು?

By ಫಿಲ್ಮಿಬೀಟ್ ಡೆಸ್ಕ್

ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಟೀಸರ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 4 ದಿನಕ್ಕೆ 70 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ಎ. ಪಿ ಅರ್ಜುನ್ ಟೇಕಿಂಗ್, ಸಿನಿಮಾ ಮೇಕಿಂಗ್, ಧ್ರುವ ಆರ್ಭಟ, ವಿಎಫ್‌ಎಕ್ಸ್ ಎಲ್ಲವೂ ಸಖತ್ ಕಿಕ್ ಕೊಡ್ತಿದೆ. ಇನ್ನು ಟೀಸರ್‌ನಲ್ಲಿ ಇಬ್ಬರು ಫಾರಿನ್ ಬಾಡಿ ಬಿಲ್ಡರ್‌ಗಳ ಜೊತೆ ಧ್ರುವ ಗುದ್ದಾಡಿರೋದು ಹೈಲೆಟ್ ಎನಿಸಿಕೊಂಡಿದೆ.

'ಮಾರ್ಟಿನ್' ಟೀಸರ್‌ ಸಿನಿಮಾ ಬಗ್ಗೆ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಟೀಸರ್‌ನಲ್ಲಿ ಸಾಕಷ್ಟು ಹೈ ಮೊಮೆಂಟ್ಸ್ ಇದೆ. ಅದರಲ್ಲಿ ದೈತ್ಯದೇಹಿಗಳ ಧ್ರುವ ಕಾದಾಡುವ ಝಲಕ್ ಅಭಿಮಾನಿಗಳ ಗಮನ ಸೆಳೆದಿದೆ. ಧ್ರುವ ಹೀಗೆ ಅಂತರಾಷ್ಟ್ರೀಯ ಬಾಡಿ ಬಿಲ್ಡರ್ಸ್‌ ಜೊತೆ ಫೈಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 'ಪೊಗರು' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅಂತರಾಷ್ಟ್ರೀಯ ಬಾಡಿ ಬಿಲ್ಡರ್‌ಗಳಾದ ಮೋರ್ಗನ್ ಆಸ್ಟೆ, ಕೈಗ್ರೀನ್, ಜಾನ್ ಲುಕಾಸ್, ಜೋಸ್ಥೆಟಿಕ್ಸ್ ಜೊತೆ ಗುದ್ದಾಡಿದ್ದರು.

Nathan Jonas - Rubil Mosqueras background diet workout Details Who Acted in Dhruva Sarjas martin

ಇದೀಗ 'ಮಾರ್ಟಿನ್' ಚಿತ್ರದಲ್ಲಿ ಮತ್ತಿಬ್ಬರು ದೈತ್ಯ ದೇಹಿಗಳಾದ ನಥನ್ ಜೋನ್ಸ್, ರುಬೀಲ್ ಮೋಸ್ಕೆರಾ ಜೊತೆ ಧ್ರುವ ಸರ್ಜಾ ಫೈಟ್ ಮಾಡಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರ್ತಿದ್ದು ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ಎಲ್ಲಾ ನಡೀತಿದೆ. ಪಾಕಿಸ್ತಾನದ ಜೈಲಿನಲ್ಲಿ ಧ್ರುವ ಸರ್ಜಾನನ್ನು ದೈತ್ಯದೇಹಿಗಳಿಬ್ಬರು ಎದುರಿಸುವಂತೆ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಲಾಗಿದೆ. ರಾಮ್‌- ಲಕ್ಷ್ಮಣ್ ಮಾಸ್ಟರ್ ಈ ಫೈಟ್ ಡಿಸೈನ್ ಮಾಡಿದ್ದಾರೆ.

ಆಸ್ಟ್ರೇಲಿಯಾ ಮೂಲದ ವ್ರೆಸ್ಲರ್ ನಥನ್ ಜೋನ್ಸ್‌ಗೆ ಸಿನಿಮಾಗಳೇನು ಹೊಸದಲ್ಲ. ಒಂದಷ್ಟು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನತನ್ ತಮಿಳಿನ 'ಭೂಲೋಕಂ', ಬಾಲಿವುಡ್‌ನ 'ಫ್ಲೈಯಿಂಗ್ ಜಟ್' ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದನು. ನಥನ್‌ಗೆ 'ಮಾರ್ಟಿನ್' ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಸಿನಿಮಾ. ಅಡಿ 11 ಇಂಚು ಎತ್ತರ, 156 ಕೆಜಿ ತೂಕದ ನಥನ್ 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಎದುರು ಅಬ್ಬರಿಸಿದ್ದಾನೆ.

WWE ಟೈಟಲ್ ಕೂಡ ಗೆದ್ದಿರುವ ನಥನ್ ಜೋನ್ಸ್‌ ಆಸ್ಟ್ರೇಲಿಯಾದಲ್ಲಿ ದರೋಡೆಕೋರನಾಗಿದ್ದನು. 16 ವರ್ಷಗಳ ಕಾಲ ಸೆರೆವಾಸವನ್ನು ಅನುಭವಿಸಿದ್ದಾನೆ. ಜೈಲಿನಲ್ಲಿ ಇದ್ದಾಗಲೇ ವೇಯ್ಟ್ ಲಿಫ್ಟಿಂಗ್, ಬಾಡಿ ಬಿಲ್ಡಿಂಗ್ ಆರಂಭಿಸಿದ್ದನು. ಅಲ್ಲಿಂದ ಆತನ ಜೀವನವೇ ಬದಲಾಗಿತ್ತು. ವೇಯ್ಟ್ ಲಿಫ್ಟಿಂಗ್ ನಥನ್ ಇಷ್ಟದ ವರ್ಕೌಟ್‌ . ದೈತ್ಯಾಕಾರದ ದೇಹವನ್ನು ಬೆಳೆಸಲು ವೆಜ್, ನಾನ್‌ ವೆಜ್ ಎರಡನ್ನೂ ಸೇವಿಸುತ್ತಾನೆ.

Nathan Jonas - Rubil Mosqueras background diet workout Details Who Acted in Dhruva Sarjas martin

'ಮಾರ್ಟಿನ್' ಚಿತ್ರದಲ್ಲಿ ನಟಿಸಿರುವ ಮತ್ತೊಬ್ಬ ಅಂತರಾಷ್ಟ್ರೀಯ ವ್ರೆಸ್ಲರ್ ರುಬಿಲ್‌ ಇಷ್ಟು ದಿನ ಮೋಸ್ಕೆರಾ ಸಿನಿಮಾಗಳಿಂದ ದೂರವೇ ಉಳಿದಿದ್ದ. ಕೊಲಂಬಿಯಾ ಮೂಲದ ರುಬಿಲ್‌ ತಮ್ಮ ದೊಡ್ಡ ಕುತ್ತಿಗೆಯಿಂದ ಜನಪ್ರಿಯ. ಪ್ರಪಂಚದಲ್ಲಿ ಇಷ್ಟು ದೊಡ್ಡ ಕುತ್ತಿಗೆ ಯಾರಿಗೂ ಇಲ್ಲ ಎನ್ನಲಾಗುತ್ತದೆ. ಕುತ್ತಿಗೆಯ ಮಾಂಸ ಖಂಡಕ್ಕಾಗಿ ರುಬೀಲ್ ಪ್ರತ್ಯೇಕ ಕಸರತ್ತುಗಳನ್ನು ಮಾಡುತ್ತಾನೆ. IFBB ವ್ರೆಸ್ಲಿಂಗ್ ಕಾಂಪಿಟೇನಷನ್‌ಲ್ಲಿ ಈತ ಭಾಗವಹಿಸಿದ್ದಾನೆ. ಧ್ರುವ ಸರ್ಜಾ ಕೂಡ ಬಾಡಿ ಬಿಲ್ಡ್ ಮಾಡಿ ಇವರಿಬ್ಬರ ಎದುರು ಅಬ್ಬರಿಸಿದ್ದಾರೆ.

ಒಟ್ನಲ್ಲಿ ನಥನ್ ಹಾಗೂ ರುಬೀಲ್ 'ಮಾರ್ಟಿನ್' ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಸಹಜವಾಗಿಯೇ ಸಿನಿಮಾ ಬಗ್ಗೆ ಹೈಪ್ ಹೆಚ್ಚಿಸಿದೆ. ಇನ್ನು ಉದಯ್ ಕೆ. ಮೆಹ್ತಾ ನಿರ್ಮಾಣದ ಚಿತ್ರವನ್ನು ಎ. ಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಚಿತ್ರಕ್ಕೆ ಕಥೆ ಬರೆದಿರುವುದು ವಿಶೇಷ. ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಚುನಾವಣೆ ನಂತರ ಜುಲೈ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.

More from Filmibeat

English summary
Nathan Jonas - Rubil Mosquera's background diet workout Details Who Acted in Dhruva Sarja's martin. Action Packed Martin teaser crossed 75 million views in just 6 days. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X