ಮುಂಬೈ ಚಲನಚಿತ್ರೋತ್ಸವಕ್ಕೆ ಆಯ್ಕೆ ಆದ 'ನಾತಿಚರಾಮಿ'
Recommended Video

ಕನ್ನಡದ 'ನಾತಿಚರಾಮಿ' ಸಿನಿಮಾ ಈಗ ಮುಂಬೈ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಮುಂಬೈ ಅಕಾಡೆಮಿ ಆಫ್ ದ ಮೂವಿಂಗ್ ಇಮೇಜ್ (ಮಾಮಿ) ಆಯೋಜನೆ ಮಾಡಿರುವ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿವೆ.
ಈ ಬಾರಿ ಕನ್ನಡದಲ್ಲಿ 'ನಾತಿಚರಾಮಿ' ಸಿನಿಮಾ ಮುಂಬೈ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಅಕ್ಟೋಬರ್ 25 ರಿಂದ ನವೆಂಬರ್ 1 ವರೆಗೆ ಮುಂಬೈನಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ದೇಶ ಹಾಗೂ ವಿದೇಶದ ಅನೇಕ ಸಿನಿಮಾಗಳು ಇಲ್ಲಿ ಪ್ರದರ್ಶನ ಆಗಲಿದೆ.
'ನಾತಿಚರಾಮಿ' ನಿರ್ದೇಶಕ ಮಂಸೋರೆ ಅವರ ಎರಡನೇ ಸಿನಿಮಾಗಿದೆ. 'ಹರಿವು' ನಂತರ 'ನಾತಿಚರಾಮಿ' ಚಿತ್ರವನ್ನು ಅವರು ಮಾಡುತ್ತಿದ್ದಾರೆ. ಇಲ್ಲಿ ಸಂಚಾರಿ ವಿಜಯ್ ಹಾಗೂ ಶೃತಿ ಹರಿಹರನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಶೃತಿ ಹರಿಹರನ್ ಈ ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಬಿಂದುಮಾಲಿನಿ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಮದನ್ ಬೆಳ್ಳಿಸಾಲು, ನಂದಿನಿ ನಂಜಪ್ಪ ಹಾಗೂ ಕಿರಣ್ ಕಾವೇರಪ್ಪ ಸಾಹಿತ್ಯ ಹಾಡಿನಲ್ಲಿ ಇರಲಿದೆ. ಮದನ್ ಈಗಾಗಲೇ 'ಬ್ಯೂಟಿಫುಲ್ ಮನಸುಗಳು', 'ವೆನಿಲ್ಲಾ' ಸೇರಿದಂತೆ ಕೆಲ ಚಿತ್ರಗಳ ಸುಂದರ ಹಾಡುಗಳ ಮೂಲಕ ಗಮನ ಸೆಳೆದಿದ್ದಾರೆ. ಸಂಧ್ಯಾರಾಣಿಯವರ ಕತೆ-ಸಂಭಾಷಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


Click it and Unblock the Notifications











