»   » ಅಮಿತಾಬ್ ಬಚ್ಚನ್ ಕಂಚಿನ ಕಂಠದಲ್ಲಿ 'ರಾಷ್ಟ್ರಗೀತೆ'

ಅಮಿತಾಬ್ ಬಚ್ಚನ್ ಕಂಚಿನ ಕಂಠದಲ್ಲಿ 'ರಾಷ್ಟ್ರಗೀತೆ'

Posted By:
Subscribe to Filmibeat Kannada

ಇಂದು 66 ನೇ ಗಣರಾಜ್ಯೋತ್ಸವದ ಸಂಭ್ರಮ. ದೇಶದಾದ್ಯಂತ ಗಣರಾಜ್ಯೋತ್ಸವದ ಸಡಗರ ಮುಗಿಲು ಮುಟ್ಟಿದೆ. ಎಲ್ಲೆಲ್ಲೂ ರಾಷ್ಟ್ರಗೀತೆ ಮೊಳಗುತ್ತಿದೆ.

ಇದೇ ಸಂಭ್ರಮದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಎಲ್ಲಾ ಭಾರತೀಯರಿಗೆ ಒಂದು ಸರ್ಪ್ರೈಸ್ ನೀಡಿದ್ದಾರೆ. 66 ನೇ ಗಣರಾಜ್ಯೋತ್ಸವದ ಪ್ರಯುಕ್ತ ತಮ್ಮ ಕಂಚಿನ ಕಂಠದಲ್ಲಿ ರಾಷ್ಟ್ರಗೀತೆಯನ್ನ ಹಾಡಿದ್ದಾರೆ ಅಮಿತಾಬ್ ಬಚ್ಚನ್.

Amitabh Bachchan

ಅಮಿತಾಬ್ ಕಂಠಕ್ಕೆ ಬಾಲಿವುಡ್ ನಲ್ಲಿ ಭಾರಿ ಬೇಡಿಕೆ ಇದೆ. ಅನೇಕ ಚಿತ್ರಗಳಿಗೆ ವಾಯ್ಸ್ ಓವರ್ ನೀಡಿರುವ ಬಚ್ಚನ್, ಗಾನಸುಧೆಯನ್ನ ಹರಿಸಿರುವುದು ಬೆರಳೆಣಿಕೆಯಷ್ಟು ಹಾಡುಗಳಿಗೆ ಮಾತ್ರ.

ಇದೀಗ ರಾಷ್ಟ್ರಗೀತೆಯನ್ನ ಗುನುಗುವ ಮೂಲಕ ದೇಶಕ್ಕೆ ನಮನ ಸಲ್ಲಿಸಿದ್ದಾರೆ ಅಮಿತಾಬ್ ಬಚ್ಚನ್. ಬಿಗ್ ಬಿ ಹಾಡಿರುವ ರಾಷ್ಟ್ರಗೀತೆ ವಿಡಿಯೋದಲ್ಲಿ ಮತ್ತೊಂದು ಸ್ಪೆಷಾಲಿಟಿ ಇದೆ. ಅದೇನಪ್ಪಾ ಅಂದ್ರೆ, ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿರುವ ಈ ತಾಣ, ರವೀಂದ್ರನಾಥ್ ಟ್ಯಾಗೋರ್ ರವರ ಪೂರ್ವಿಕರು ವಾಸವಿದ್ದ ಸ್ಥಳ.

ಕೋಲ್ಕತ್ತಾದ ಠಾಕುರ್ ಬಾಡಿಯಲ್ಲಿರುವ ಜೊರಾಸಂಕೋದಲ್ಲಿರುವ ರಾಷ್ಟ್ರಗೀತೆಯನ್ನ ರಚಿಸಿರುವ ರವೀಂದ್ರನಾಥ್ ಟ್ಯಾಗೋರ್ ರವರ ಗೃಹದಲ್ಲಿ ಅಮಿತಾಬ್ ದನಿಯಾಗಿರುವ ರಾಷ್ಟ್ರಗೀತೆಯ ನೂತನ ವಿಡಿಯೋವನ್ನ ಚಿತ್ರೀಕರಿಸಲಾಗಿದೆ.

Amitabh Bachchan

ಆ ಮೂಲಕ ರವೀಂದ್ರನಾಥ್ ಟ್ಯಾಗೋರ್ ಗೂ ಸಲಾಂ ಹೊಡೆದಿದ್ದಾರೆ ಬಿಗ್ ಬಿ. ಗಣರಾಜ್ಯೋತ್ಸವದ ಪ್ರಯುಕ್ತ, ಅಮಿತಾಬ್ ಜೊತೆ ನೀವು ದನಿಯಾಗಿ, ಭಾರತ ಮಾತೆಗೆ ನಮನ ಸಲ್ಲಿಸಿ...ಮತ್ತೊಮ್ಮೆ ಗಣರಾಜ್ಯೋತ್ಸವದ ಶುಭಾಶಯಗಳು.

English summary
Bollywood Actor Amitabh Bachchan has sung The National Anthem. The video was shot at ancestral home of Rabindra Nath Tagore in Kolkata.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada