For Quick Alerts
  ALLOW NOTIFICATIONS  
  For Daily Alerts

  ನಟ ಸಂಚಾರಿ ವಿಜಯ್ ಇಲ್ಲದ ಒಂದು ವರ್ಷ: ನೆನಪು ಇನ್ನೂ ಹಸಿರು

  |

  ಕನ್ನಡ ಚಿತ್ರರಂಗ ಕಳೆದುಕೊಂಡ ಅಪರೂಪದ ಉತ್ತಮ ಕಲಾವಿದರಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕೂಡ ಒಬ್ಬರು. ಸಂಚಾರಿ ವಿಜಯ್ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಒಪ್ಪಲು ಸುಲಭವಲ್ಲ. ಆದರೂ ಅವರು ನಮ್ಮೊಂದಿಗೆ ಇಲ್ಲದೆ ಒಂದು ವರ್ಷ ಕಳಿತು ಎನ್ನುವುದು ಕಹಿ ಸತ್ಯ.

  ನಟ ಸಂಚಾರಿ ವಿಜಯ್ ನಿಧನವಾಗಿ ಇಂದಿಗೆ (ಜೂನ್ 15) ಒಂದು ವರ್ಷ ಕಳೆಯಿತು. ಕಳೆದ ವರ್ಷ ಜೂನ್ 15ರಂದು ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ಹೋಗಿದ್ದಾರೆ. ಮೃತಪಟ್ಟು ಇಂದಿಗೆ ಸರಿಯಾಗಿ ಒಂದು ವರ್ಷವಾಗಿದೆ. ಆದರೆ ಅವರ ನೆನಪುಗಳು ಮಾತ್ರ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

  ನಟ ಸಂಚಾರಿ ವಿಜಯ್ ರಂಗಭೂಮಿ ಹಿನ್ನೆಲೆಯಿಂದ ಬಂದವರು. 'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದರು. ಸಂಚಾರಿ ವಿಜಯ್ ಎಂತಹ ಅದ್ಭುತ ನಟ ಎನ್ನುವುದನ್ನು ಈ ಚಿತ್ರ ತೋರಿಸಿಕೊಟ್ಟಿತ್ತು. ಸಂಚಾರಿ ವಿಜಯ್ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗವೇ ಇತ್ತು.

  ರಂಗಭೂಮಿಯ ಪ್ರತಿಭೆ ಸಂಚಾರಿ ವಿಜಯ್!

  ರಂಗಭೂಮಿಯ ಪ್ರತಿಭೆ ಸಂಚಾರಿ ವಿಜಯ್!

  ರಂಗಭೂಮಿ ಹಿನ್ನೆಲೆಯಿಂದ ಬಂದ ವಿಜಯ್ ಚಿಕ್ಕಮಗಳೂರು ಮೂಲದವರು. ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದ ಸಂಚಾರಿ ವಿಜಯ್ ಜನಿಸಿದ್ದರು. ಸಂಚಾರಿ ನಾಟಕ ತಂಡದಲ್ಲಿ ತೊಡಗಿಸಿಕೊಂಡಿದ್ದ ವಿಜಯ್ ಕುಮಾರ್ ಬಳಿಕ ಸಂಚಾರಿ ವಿಜಯ್ ಎಂದೇ ಹೆಸರುವಾಸಿಯಾದರು. ಅನೇಕ ನಾಟಕ ಪ್ರದರ್ಶನಗಳನ್ನೂ ಕೂಡ ವಿಜಯ್ ಕೊಟ್ಟಿದ್ದಾರೆ.

  ಸಾಮಾಜಿಕ ಸೇವೆಯಲ್ಲಿ ಮುಂದಿರುತ್ತಿದ್ದ ವಿಜಯ್!

  ಸಾಮಾಜಿಕ ಸೇವೆಯಲ್ಲಿ ಮುಂದಿರುತ್ತಿದ್ದ ವಿಜಯ್!

  ಸಂಚಾರಿ ವಿಜಯ್ ಮೊದಲಿನಿಂದಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ತಮ್ಮ ಗಮನಕ್ಕೆ ಬಂದವರಿಗೆ ಕಷ್ಟದಲ್ಲಿ ಇರುವವರಿಗೆ ವಿಜಯ್ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಹೀಗೆ ಅನೇಕರಿಗೆ ವಿಜಯ್ ಸಹಾಯ ಹಸ್ತ ಚಾಕಿದ್ದಾರೆ. ಇನ್ನು ಲಾಕ್​ಡೌನ್ ಸಂದರ್ಭದಲ್ಲೂ ಅನೇಕರಿಗೆ ಸಹಾಯ ಮಾಡಿದ್ದರು. ತಮ್ಮ ಸಿನಿಮಾಗಳ ಜೊತೆಗೆ ಸಾಮಾಜಿಕ ಸೇವೆಯಿಂದಲೂ ವಿಜಯ್ ಹೆಸರು ಮಾಡಿದ್ದಾರೆ.

  ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್!

  ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್!

  ಸಿನಿಮಾರಂಗಕ್ಕೆ ಬಂದ ಕಡಿಮೆ ಸಮಯದಲ್ಲೆ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಟ ಸಂಚಾರಿ ವಿಜಯ್. 'ನಾನು ಅವನಲ್ಲ ಅವಳು' ಚಿತ್ರದ ಅದ್ಭುತ ನಟನೆಗೆ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ಪಡದು, ಕನ್ನಡಕ್ಕೆ ಹೆಮ್ಮ ತಂದುಕೊಟ್ಟಿದ್ದಾರೆ. ಆದರೆ ಚಿತ್ರರಂಗದಲ್ಲಿ ಮತ್ತಷ್ಟು ಸಾಧಿಸಬೇಕು ಎನ್ನುವ ಹಂಬಲ ಇದ್ದ ನಟ ಅದಕ್ಕೂ ಮೊದಲೇ 38ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

  ಹಲವು ಚಿತ್ರಗಳಲ್ಲಿ ಸಂಚಾರಿ ವಿಜಯ್ ನಟನೆ!

  ಹಲವು ಚಿತ್ರಗಳಲ್ಲಿ ಸಂಚಾರಿ ವಿಜಯ್ ನಟನೆ!

  ಕನ್ನಡ ಮಾತ್ರವಲ್ಲದೆ ಹಲವು ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಸಂಚಾರಿ ವಿಜಯ್ ಕೆಲಸ ಮಾಡಿದ್ದಾರೆ. ನಾತಿಚರಾಮಿ, ಆ್ಯಕ್ಟ್​ 1978, ನಾನು ಅವನಲ್ಲ ಅವಳು, ಒಗ್ಗರಣೆ, ಕೃಷ್ಣ ತುಳಸಿ, ಆಟಕ್ಕುಂಟು ಲೆಕ್ಕಕ್ಕಿಕ್ಕ, ವಿಲನ್, ಕಿಲ್ಲಿಂಗ್ ವೀರಪ್ಪನ್, ಅಲ್ಲಮ ಮುಂತಾದ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಒಂದಷ್ಟು ಸಾಮಾಜಿಕ ಕಳಕಳಿ ಇರುವ ಸಿನಿಮಾಗಳನ್ನು ಮಾಡಲು ವಿಜಯ್ ಮುಂದಾಗಿದ್ದರು.

  ರಸ್ತೆ ಅಪಘಾತದಲ್ಲಿ ವಿಜಯ್ ನಿಧನ!

  ರಸ್ತೆ ಅಪಘಾತದಲ್ಲಿ ವಿಜಯ್ ನಿಧನ!

  ಕಳೆದ ವರ್ಷ ಬೈಕ್‌ನಲ್ಲಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಂಚಾರಿ ವಿಜಯ್ ತಲೆಗೆ ಭಾರೀ ಹೊಡೆತ ಬಿದ್ದಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಆದರೆ ಚಿಕಿತ್ಸೆ ಫಲಚಾರಿಯಾಗಲಿಲ್ಲ. ಬ್ರೈನ್ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದರಿಂದ ವಿಜಯ್ ಕೊನೆಯುಸಿರೆಳೆದರು. ವಿಜಯ್ ತಮ್ಮ ಸಂಚಾರ ನಿಲ್ಲಿಸಿ ಒಂದು ವರ್ಷವಾಗಿದೆ.

  English summary
  National Award Winner Sanchari Vijay 1st Death Anniversary Know About Sanchari Vijay Life,
  Wednesday, June 15, 2022, 13:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X