"ಬರೆದಿಟ್ಟುಕೊಳ್ಳಿ.. '45' ಸಿನಿಮಾ ಅದ್ಭುತವಾಗಿರುತ್ತದೆ" ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಭವಿಷ್ಯ
ಸಂಗೀತ ನಿರ್ದೇಶನ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಯುಗಾದಿ ಸಂಭ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಆಗಸ್ಟ್ 15ರಂದು ಸಿನಿಮಾ ತೆರೆಗೆ ಬರಲಿದೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವುದು ನಿರೀಕ್ಷೆ ಹುಟ್ಟಾಕ್ಕಿದೆ.
ಹಾಲಿವುಡ್ ತಂತ್ರಜ್ಞರು ಕೂಡ '45' ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಬರೀ ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ಈಗಾಗಲೇ ಬಂದಿರುವ ಪೋಸ್ಟರ್, ಟೀಸರ್ ಗಮನ ಸೆಳೆದಿದೆ. ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ '45' ಸಿನಿಮಾ ಅದ್ಭುತ ಅನುಭವ ನೀಡುತ್ತದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಭರವಸೆ ವ್ಯಕ್ತಪಡಿಸಿದ್ದಾರೆ.

'ಭೈರತಿ ರಣಗಲ್' ಬಳಿಕ ಶಿವಣ್ಣ ನಟಿಸುತ್ತಿರುವ ಸಿನಿಮಾ ಇದು. ಚಿತ್ರದ ಪ್ರಮೋಷನಲ್ ಸಾಂಗ್ ಅನ್ನು ಉಗಾಂಡ ದೇಶದಲ್ಲಿ ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಯುಗಾದಿ ಹಬ್ಬದ ದಿನ ಸಂಜೆ 6.45ಕ್ಕೆ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದಾರೆ. ಆದರೆ ನಿರ್ದೇಶಕರಾಗಿ ಯಾವ ರೀತಿ ಕಮಾಲ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
'45' ಚಿತ್ರದ ಕಥೆ ಏನು? ಎನ್ನುವ ಬಗ್ಗೆ ಬಹಳ ಕುತೂಹಲ ಇದೆ. 'ಕರಾಟೆ ಪಟು ಬರ್ತಿದ್ದಾರೆ' ಹುಷಾರು ಎಂದು ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪಾತ್ರದ ಪರಿಚಯ ಮಾಡಿಸಲಾಗಿತ್ತು. ಸತ್ಯ ಹೆಗಡೆ ಛಾಯಾಗ್ರಹಣ, ಅನಿಲ್ ಕುಮಾರ್ ಸಂಭಾಷಣೆ ಹಾಗೂ ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಇದೊಂದು ಫಿಲಾಸಫಿಕಲ್ ಎಂಟರ್‌ಟೈನರ್ ಎಂದು ಶಿವಣ್ಣ ಹೇಳಿದ್ದರು.
ಒಂದೂವರೆ ವರ್ಷದ ಕಾಲ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ನಡೆದಿತ್ತು. ಆನಿಮೇಷನ್ ರೂಪದಲ್ಲಿ ಮೊದಲೇ ಚಿತ್ರ ಹೇಗಿರಲಿದೆ ಎಂದು ಚಿತ್ರತಂಡಕ್ಕೆ ತೋರಿಸಿ ಅರ್ಜುನ್ ಜನ್ಯಾ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ಇಂತಹ ಪ್ರಯತ್ನ ಮಾಡಲಾಗುತ್ತದೆ. ಇನ್ನು ಕಥೆ ಕೇಳಿದಾಗಲೇ ಶಿವಣ್ಣ ಬಹಳ ಇಷ್ಟಪಟ್ಟು ನಟಿಸಲು ಒಪ್ಪಿದ್ದರು. ಒಟ್ಟು 106 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿದೆ. ಸಾಕಷ್ಟು ಸಿಜಿ ವರ್ಕ್ ಚಿತ್ರದಲ್ಲಿದೆ.
ಶಿವಣ್ಣ ಹಾಗೂ ಉಪೇಂದ್ರ ಅಭಿಮಾನಿಯಾಗಿದ್ದ ರಾಜ್ ಬಿ ಶೆಟ್ಟಿ ಇದೀಗ ಅವರಿಬ್ಬರ ಜೊತೆ ನಟಿಸಿ ಖುಷಿಯಾಗಿದ್ದಾರೆ. ಇಡೀ ಚಿತ್ರತಂಡ ಸಿನಿಮಾ ಬಗ್ಗೆ ಕಾನ್ಫಿಡೆಂಟ್ ಆಗಿದೆ. ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ '45' ಸಿನಿಮಾ ಬಗ್ಗೆ ಮೆಚ್ಚಿ ಟ್ವೀಟ್ ಮಾಡಿದೆ. ಸಿನಿಮಾದ ಕೆಲ ದೃಶ್ಯಗಳನ್ನು ನೋಡಿ ಅವರು ಫಿದಾ ಆಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ನನ್ನ ಮಾತು ನೆನಪಿಟ್ಟುಕೊಳ್ಳಿ. ಈ ವರ್ಷ ತೆರೆಕಾಣಲಿರುವ '45' ಕನ್ನಡ ಚಿತ್ರರಂಗದಲ್ಲೇ ವಿಶೇಷ ಅನುಭವದ ಜೊತೆಗೆ 100% ಮನರಂಜನೆ ನೀಡುವ ಸಿನೆಮಾ ಆಗಲಿದೆ. ವಿಷ್ಯುವಲಿ ಅದ್ಭುತವಾಗಿ ಇರಲಿದೆ. ಅರ್ಜುನ್ ಜನ್ಯಾ ಅವರ ನಿರ್ದೇಶನದ ಸಿನೆಮಾ ಕನ್ನಡಿಗರಿಗಂತೂ ಹಬ್ಬವೇ" ಎಂದು ಮಂಸೋರೆ ಟ್ವೀಟ್ ಮಾಡಿದ್ದಾರೆ. ಇದು ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ.


Click it and Unblock the Notifications











