For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರ ಪ್ರಶಸ್ತಿ ವಿಜೇತ 'ಅಕ್ಷಿ' ಚಿತ್ರದ ಹಾಡುಗಳ ಬಿಡುಗಡೆ

  |

  ಕಳೆದ ಬಾರಿ ರಾಷ್ಟ್ರ‌ಪ್ರಶಸ್ತಿ ಪಡೆದ "ಅಕ್ಷಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ನಟಿ ಸ್ಪರ್ಷ ರೇಖಾ, ನಟ ವಿಜಯಸೂರ್ಯ, ಮಿಂಟೋ ಹಾಸ್ಪಿಟಲ್ ನಿರ್ದೇಶಕರಾದ ಡಾ.ಸುಜಾತ ರಾಥೋಡ್ ಹಾಗೂ ಉದ್ಯಮಿ ಗುಪ್ತ ಅವರು "ಅಕ್ಷಿ" ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

  ಡಾ ರಾಜಕುಮಾರ್ ಅವರು ನೇತ್ರದಾನ ಮಹಾದಾನ ಎಂದು ಹೇಳುತ್ತಿದ್ದರು. ಅವರ ನಿಧನದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಇದರ ಸ್ಪೂರ್ತಿಯಿಂದ ಈ ಚಿತ್ರ ನಿರ್ಮಾಣವಾಗಿದೆ. ದಿವಂಗತ ಡಾ ಎಸ್ ಪಿ ಬಾಲಸುಬ್ರಹ್ಮಣ್ಯಂ ಈ ಚಿತ್ರದ ಹಾಡೊಂದನ್ನು ಹಾಡಿರುವುದು ವಿಶೇಷ. ಕಣ್ಣಿಲ್ಲದವರಿಗೆ ಬಣ್ಣಗಳ ತಿಳಿಸಿ ಹೇಳುವ ಈ ಹಾಡಿನ ಸಾಹಿತ್ಯ ಕೇಳಿ, ನಾನು ಎಷ್ಟೋ ಹಾಡುಗಳನ್ನು ಹಾಡಿದ್ದೇನೆ. ಆದರೆ ಈ ರೀತಿಯ ಹಾಡು ಹಾಡಿದ್ದು ತುಂಬಾ ಖುಷಿಯಾಗಿದೆ ಎಂದಿದ್ದರಂತೆ ಎಸ್ ಪಿ ಬಿ.

  ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮೊದಲು ಎಸ್.ಪಿ.ಬಿ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು. ಅವರು ಹಾಡಿರುವ ಹಾಡನ್ನು ಹಾಗೂ ಅವರು ಹಾಡಿನ ಬಗ್ಗೆ ಮಾತನಾಡಿದ ಫೋನ್ ಸಂಭಾಷಣೆಯನ್ನು ಕೇಳಿಸಲಾಯಿತು. ಗಾನಕೋಗಿಲೆ ಎಸ್. ಜಾನಕಿ, ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀ ವಿನಯ್ ಗುರೂಜಿ ಮುಂತಾದ ಗಣ್ಯರು ಈ ಚಿತ್ರಕ್ಕೆ ಶುಭ ಕೋರಿದ್ದಾರೆ.

  ಮೊದಲಿಗೆ ಚಿತ್ರದ ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಚಿತ್ರದ ಸಂಗೀತ ನಿರ್ದೇಶಕ, ಗೀತ ರಚನೆಕಾರ, ನಿರ್ಮಾಪಕ, ನಟ ಕಲಾದೇಗುಲ ಶ್ರೀನಿವಾಸ್ ವಿವರಣೆ ನೀಡಿದರು. ಇಂತಹ ಕಥೆ ಆಯ್ಕೆ ಮಾಡಿಕೊಂಡಿದಕ್ಕಾಗಿ‌ ನಿರ್ದೇಶಕರಿಗೆ ಹ್ಯಾಟ್ಸ್ ಆಫ್. ನಾನು ಚಿತ್ರ ನೋಡಲು ಕಾತುರಳಾಗಿದ್ದೇನೆ. ನೇತ್ರದಾನ ಮಹಾದಾನ ಎಂಬ ವಿಷಯದೊಂದಿಗೆ ಈ ಚಿತ್ರ ನಿರ್ಮಾಣವಾಗಿರುವುದು ಸಂತೋಷ. ಹಾಡುಗಳು ಚೆನ್ನಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ನಟಿ ಸ್ಪರ್ಶ ರೇಖಾ.

  ಅಫ್ಘಾನ್ ಬಿಕ್ಕಟ್ಟು ಕುರಿತು ಚಿತ್ರ: ಬಾಲಿವುಡ್‌ನಲ್ಲಿ ರವಿ ಬಸ್ರೂರ್ ಹವಾಅಫ್ಘಾನ್ ಬಿಕ್ಕಟ್ಟು ಕುರಿತು ಚಿತ್ರ: ಬಾಲಿವುಡ್‌ನಲ್ಲಿ ರವಿ ಬಸ್ರೂರ್ ಹವಾ

  ಎಲ್ಲರೂ ಒಳ್ಳೆಯ ಸಂದೇಶವಿರುವ ಸಿನಿಮಾ ಮಾಡಬೇಕೆಂದುಕೊಳ್ಳುತ್ತರೆ. ಆದರೆ ಕಾರ್ಯರೂಪಕ್ಕೆ ತರುವುದು ವಿರಳ. ಏಕೆಂದರೆ ಕಮರ್ಷಿಯಲ್ ಸಿನಿಮಾಗಳ‌ ಮೇಲೆ ಎಲ್ಲರ ಒಲವು. ಇಂತಹ ಒಳ್ಳೆಯ ಕಥೆ ಆಧಾರಿತ ಚಿತ್ರ ತೆರಗೆ ತರುತ್ತಿರುವ ನಿರ್ದೇಶಕ ಮನೋಜ್ ಕುಮಾರ್ ತಂಡಕ್ಕೆ ಶುಭವಾಗಲಿ ಎಂದರು ನಟ ವಿಜಯ ಸೂರ್ಯ.

  ಒಬ್ಬ‌ ವ್ಯಕ್ತಿ ಸತ್ತ ಮೇಲೂ ಅವನ ಕಣ್ಣುಗಳು ಆರು ಗಂಟೆಗಳು ಜೀವಂತವಾಗಿರುತ್ತದೆ. ಎಷ್ಟೋ ಜನ ಕಣ್ಣಿಲ್ಲದೇ ಏನು ನೋಡಿಲ್ಲ. ಅಂತಹವರಿಗೆ ನಿಮ್ಮ ಕಣ್ಣುಗಳನ್ನು ದಾನ ಮಾಡಿ.‌ ಈ ರೀತಿಯ ಸಿನಿಮಾ ಬರುವುದು ವಿರಳ. ಚಿತ್ರತಂಡಕ್ಕೆ ಶುಭಾಶಯವೆಂದರು ಮಿಂಟೋ ಆಸ್ಪತ್ರೆ ನಿರ್ದೇಶಕರಾದ ಡಾ.ಸುಜಾತ ರಾಥೋಡ್.

  ನಾನು ಈ ಕಥೆ ಸಿದ್ದಮಾಡಿಕೊಂಡು ಐದು ವರ್ಷಗಳ ಕಾಲ ನಿರ್ಮಾಪಕರಿಗೆ ಹುಡುಕಾಡಿದೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು ಅಂತಾರಲ್ಲ..ಹಾಗೆ ಈಗ ಸಮಯ ಕೂಡಿ ಬಂದಿದೆ. ಸಿನಿಮಾ ಸಿದ್ದವಾಗಿದೆ. ಎಲ್ಲರ ಹಾರೈಕೆಯಿಂದ ರಾಷ್ಟ್ರಪ್ರಶಸ್ತಿಯೂ ಬಂದಿದೆ. ನನ್ನದು ಚಿಕ್ಕಹಳ್ಳಿ. ಅಲ್ಲಿ ಪೇಪರ್ ಕೂಡ ಸಿಗಲ್ಲ. ನನ್ನ ಚಿತ್ರಕ್ಕೆ ರಾಷ್ಟಪ್ರಶಸ್ತಿ ಬಂದಾಗ, ಎಲ್ಲಾ ಪತ್ರಿಕೆಗಳಲ್ಲಿ ಫೋಟೊ ಬಂದಿತ್ತು. ಅದನ್ನು ನೋಡಲು ನನ್ನ ಅಪ್ಪ ಏಳು ಕಿಲೋಮೀಟರ್ ದೂರದಿಂದ ಪತ್ರಿಕೆ ಕೊಂಡು, ನೋಡಿ ಸಂತೋಷ ಪಟ್ಟಿದ್ದರು. ನಾನು ಇಲ್ಲಿಯವರೆಗೂ ನನ್ನ ತಾಯಿಗೆ ಒಂದು ಸೀರೆ ಕೂಡ ಕೊಡಿಸಿಲ್ಲ. ಈ ಸಂತಸವೇ ನನ್ನ ಹೆತ್ತವರಿಗೆ ನನ್ನ ಗಿಫ್ಟ್ ಎಂದು ಭಾವುಕರಾದರು ನಿರ್ದೇಶಕ ಮನೋಜ್ ಕುಮಾರ್.

  ಚಿತ್ರ ತೆರೆಗೆ ತರುತ್ತಿರುವ ಉದ್ಯಮಿ ಗುಪ್ತ, ಚಿತ್ರದಲ್ಲಿ ಅಭಿನಯಿಸಿರುವ ಗೋವಿಂದೇಗೌಡ, ಬೇಬಿ ಸೌಮ್ಯ ಪ್ರಭು, ಮಾಸ್ಟರ್ ಮಿಥುನ್, ಇಳಾ ವಿಟ್ಲ ಮುಂತಾದವರು ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ‌ಹಂಚಿಕೊಂಡರು. ಶ್ರೀನಿವಾಸ್ ವಿ, ರಮೇಶ್ ಹಾಗೂ ರವಿ ಹೆಚ್ ಎಸ್ (ಹೊಳಲು), ಈ ಚಿತ್ರದ ನಿರ್ಮಾಪಕರು.

  English summary
  National Award winning film 'Akshi' audio released. the songs released by sparsha rekha and Actor Vijay surya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X