National Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಇಲ್ಲಿದೆ ಪ್ರಶಸ್ತಿ ವಿಜೇತರ ಪಟ್ಟಿ
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದೆ. ಇಂದು (ಆಗಸ್ಟ್ 24) ಸಂಜೆ 5 ಗಂಟೆಗೆ ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು. ಈ ಬಾರಿ ಪ್ರಶಸ್ತಿಗಾಗಿ ಬಾಲಿವುಡ್ ಹಾಗೂ ದಕ್ಷಿಣದ ಸಿನಿಮಾಗಳ ನಡುವೆ ಭಾರೀ ಪೈಪೋಟಿಯೇ ನಡೆದಿತ್ತು.
ಸೆಪ್ಟೆಂಬರ್ 1, 2021ರಿಂದ ಆಗಸ್ಟ್ 31, 2022ರ ನಡುವೆ ಬಿಡುಗಡೆಯಾದ ಸಿನಿಮಾಗಳಿಗೆ ಇದೀಗ ರಾಷ್ಟ್ರಪ್ರಶಸ್ತಿ ಘೋಷಣೆ ಮಾಡಲಾಗಿದೆ. 'ಜೈ ಭೀಮ್', 'ಕೆಜಿಎಫ್ ಚಾಪ್ಟರ್- 2', 'ಗಂಗೂಬಾಯಿ ಕಥಿಯಾವಾಡ', 'ತಲೈವಿ', 'ಕರ್ಣನ್', 'ರಾಕೆಟ್ರಿ', 'ಪುಷ್ಪ', 'ಮಿನ್ನಲ್ ಮುರಳಿ', 'ನಾಯಟ್ಟು' ಸೇರಿದಂತೆ ಸಾಕಷ್ಟು ಸಿನಿಮಾಗಳು ಈ ಬಾರಿ ಪ್ರಶಸ್ತಿ ಕಣದಲ್ಲಿ ಇದ್ದವು.

'RRR' ಚಿತ್ರದಿಂದ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ನಡುವೆ ಅತ್ಯುತ್ತಮ ನಟ ಪ್ರಶಸ್ತಿಗಾಗಿ ಸೆಣಸಾಟ ನಡೆದಿತ್ತು. 'ನಾಟು ನಾಟು' ಗೀತೆಗಾಗಿ ಆಸ್ಕರ್ ಗೆದ್ದ ಕೀರವಾಣಿ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದರು. 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ನಟನೆಗಾಗಿ ಆಲಿಯಾ ಭಟ್, 'ತಲೈವಿ' ಚಿತ್ರದ ನಟನೆಗಾಗಿ ಕಂಗನಾ ಅತ್ಯುತ್ತಮ ನಟಿ ವಿಭಾಗದಲ್ಲಿ ಪೈಪೋಟಿ ನಡೆಸಿದ್ದರು.
ಸುಬ್ರಮಣ್ಯ ಬಡೂರು ಅವರಿಗೆ ಕ್ರಿಟಿಕ್ (ಸ್ಪೆಷಲ್ ಮೆನ್ಷನ್) ಪ್ರಶಸ್ತಿ
ಅನಿರುದ್ಧ್ ನಿರ್ದೇಶನದ 'ಬಾಳೇ ಬಂಗಾರ' ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ
'777 ಚಾರ್ಲಿ' ಅತ್ಯುತ್ತಮ ಕನ್ನಡ ಸಿನಿಮಾ
'ಸರ್ದಾರ್ ಉದಮ್' (ಬೆಸ್ಟ್ ಹಿಂದಿ ಫಿಲ್ಮ್ )
ಚೆಲ್ಲೋ ಶೋ (ಬೆಸ್ಟ್ ಗುಜರಾತಿ)
ಏಕ್ದ ಕಾಯ್ ಜಾಲ (ಅತ್ಯುತ್ತಮ ಮರಾಠಿ ಸಿನಿಮಾ)
ಹೋಮ್ (ಅತ್ಯುತ್ತಮ ಮಲಯಾಳಂ ಸಿನಿಮಾ)
ಉಪ್ಪೆನಾ (ಅತ್ಯುತ್ತಮ ತೆಲುಗು ಸಿನಿಮಾ)
ಸಾಹಸ ನಿರ್ದೇಶಕ- RRR (ಅತ್ಯುತ್ತಮ ಸಾಹಸ ಸಂಯೋಜನೆ))
ಕೊರಿಯೋಗ್ರಫಿ- RRR (ಅತ್ಯುತ್ತಮ ನೃತ್ಯ ನಿರ್ದೇಶನ)
ಸ್ಪೆಷಲ್ ಎಫೆಕ್ಟ್- RRR (ಸ್ಪೆಷಲ್ ಎಫೆಕ್ಟ್)
ದೇವಿಶ್ರೀ ಪ್ರಸಾದ್- ಅತ್ಯುತ್ತಮ ಸಂಗೀತ ನಿರ್ದೇಶನ(ಪುಷ್ಪ)
ಎಂಎಂ ಕೀರವಾಣಿ- ಅತ್ಯುತ್ತಮ ಹಿನ್ನೆಲೆ ಸಂಗೀತ(RRR)
RRR- ಅತ್ಯುತ್ತಮ ಜನಪ್ರಿಯ ಚಿತ್ರ
ಅಲ್ಲು ಅರ್ಜುನ್- ಅತ್ಯುತ್ತಮ ನಟ (ಪುಷ್ಪ)
ಆಲಿಯಾ ಭಟ್- ಅತ್ಯುತ್ತಮ ನಟಿ (ಗಂಗೂಬಾಯಿ ಕಥಿಯಾವಾಡ)
ಕೃತಿ ಸನೂನ್- ಅತ್ಯುತ್ತಮ ನಟಿ (ಮಿಮಿ)
'ರಾಕೆಟ್ರಿ' - ಅತ್ಯುತ್ತಮ ಹಿಂದಿ ಸಿನಿಮಾ
ನಿಖಿಲ್ ಮಹಾಜನ್- ಅತ್ಯುತ್ತಮ ನಿರ್ದೇಶಕ (ಗೋಧಾವರಿ (ಮರಾಠಿ)
ಶ್ರೇಯಾ ಘೋಷಾಲ್- ಅತ್ಯುತ್ತಮ ಗಾಯಕಿ (ಇರವಿನ್ ನಿಜಾಲ್)
ಅನುನಾದ್- ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ(ಅಸ್ಸಾಮಿ)
ಗಂಗೂಬಾಯಿ ಕಾಠಿಯಾವಾಡಿ- ಅತ್ಯುತ್ತಮ ಸಂಕಲನ
ಅತ್ಯುತ್ತಮ ಸಂಭಾಷಣೆ- ಗಂಗೂಬಾಯಿ ಕಾಠಿಯಾವಾಡಿ
ಪಂಕಜ್ ತ್ರಿಪಾಠಿ- ಅತ್ಯುತ್ತಮ ಪೋಷಕ ನಟ (ಮಿಮಿ)
ಪಲ್ಲವಿ ಜೋಶಿ- ಅತ್ಯುತ್ತಮ ಪೋಷಕ ನಟಿ (ದಿ ಕಶ್ಮೀರ್ ಫೈಲ್ಸ್)
ಶೇರ್ಷಾ- ತೀರ್ಪುಗಾರರ ವಿಶೇಷ ಬಹುಮಾನ
ಮುಖ್ಯೋಫಾಧ್ಯಾಯ್- ಅತ್ಯುತ್ತಮ ಛಾಯಾಗ್ರಹಣ (ಸರ್ದಾರ್ ಉದ್ಧಮ್)
ಸಿಂಗ್ ಡಿಸೋಜಾ - ಅತ್ಯುತ್ತಮ ಮೇಕಪ್ (ಗಂಗೂಬಾಯಿ ಕಾಠಿಯಾವಾಡಿ)
ವೀರಕಪೂರ್ ಇ- ಅತ್ಯುತ್ತಮ ವಸ್ತ್ರಾಲಂಕಾರ (ಸರ್ದಾರ್ ಉದ್ಧಮ್)
ಚಂದ್ರಭೋಸ್- ಅತ್ಯುತ್ತಮ ಸಾಹಿತ್ಯ (ಕೊಂಡಪೋಲಂ)
ದಿ ಕಾಶ್ಮೀರ್ ಫೈಲ್ಸ್- ನ್ಯಾಷನಲ್ ಇಂಟಿಗ್ರೇಷನ್
ನಾನ್ ಫೀಚರ್
'ಬಾಳೇ ಬಂಗಾರ'- ಸ್ಪೆಷನ್ ಮೆನ್ಷನ್
ಚಾಂದ್ ಸಾನ್ಸೆ- ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ
ಲುಕಿಂಗ್ ಫಾರ್ ಚಾಲನ್- ಅತ್ಯುತ್ತಮ ತನಿಖಾ ಸಿನಿಮಾ
ಸಿರ್ಪಂಗಲಿನ್ ಸಿರ್ಪಗಲಿಲ್- ಅತ್ಯುತ್ತಮ ಶೈಕ್ಷಣಿಕ ಸಿನಿಮಾ
ರೇಖಾ- ತೀರ್ಪುಗಾರರ ವಿಶೇಷ ಪ್ರಶಸ್ತಿ
ರುಕುಮಾತಿರ್ ದುಕುಮಾಜಿ -ಅತ್ಯುತ್ತಮ ಬಯೋಗ್ರಫಿ ಸಿನಿಮಾ (ಬಂಗಾಲಿ)
ಮುನ್ನಂ ವಲೈವ್- ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ (ಮಲಯಾಳಂ)
ಟಿಎನ್ ಕೃಷ್ಣನ್- ಕಲೆ ಸಂಸ್ಕೃತಿ ಬಗೆಗಿನ ಚಿತ್ರ
ಪುರುಷೋತ್ತಮ ಚಾರ್ಯಾಲು- ಅತ್ಯುತ್ತಮ ಚಿತ್ರ ವಿಮರ್ಶೆ (ತೆಲುಗು)
ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ- ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ


Click it and Unblock the Notifications











