National Cinema Day 2023: 99 ರೂಗೆ ಟಿಕೆಟ್ ಬುಕ್ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಅಕ್ಟೋಬರ್ 13ರ ಗುರುವಾರ 2023 ರ ರಾಷ್ಟ್ರೀಯ ಸಿನಿಮಾ ದಿನವನ್ನು ಈ ಭಾರತದಾದ್ಯಂತ ಆಚರಿಸಲಾಗುವುದು ಎಂದು ಇತ್ತೀಚೆಗೆ ಘೋಷಿಸಿದೆ. ಈ ದಿನ ಸಿನಿಮಾ ಪ್ರೇಮಿಗಳಿಗಾಗಿ ಕೈಗೆಟುಕುವ ಬೆಲೆಯಲ್ಲಿ ಸಿನಿಮಾಗಳನ್ನು ನೋಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಅಕ್ಟೋಬರ್ 13 ರಂದು ಸಿನಿಮಾ ಟಿಕೆಟ್ ಬೆಲೆ 99 ರೂಪಾಯಿಯಾಗಿರಲಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ 2022 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲು ಪ್ರಾರಂಭಿಸಿತು. ಮೊದಲು ಸೆಪ್ಟೆಂಬರ್ 16 ಅನ್ನು ಸಿನಿಮಾ ದಿನ ಆಚರಿಸಬೇಕು ಎಂಬ ಪ್ರಸ್ತಾಪವಿತ್ತು, ಬಳಿಕ ಅದನ್ನು ಸೆಪ್ಟೆಂಬರ್ 23 ಕ್ಕೆ ಮುಂದೂಡಲಾಯಿತು. ಕಳೆದ ವರ್ಷದ ರಾಷ್ಟ್ರೀಯ ಸಿನಿಮಾ ದಿನದಂದು 65 ಲಕ್ಷಕ್ಕೂ ಹೆಚ್ಚು ಜನರು ಒಂದೇ ದಿನ ಸಿನಿಮಾ ವೀಕ್ಷಿಸಿದ್ದಾರೆ.

national-cinema-day-2023

2023ರ ರಾಷ್ಟ್ರೀಯ ಸಿನಿಮಾ ದಿನಾಚರಣೆಯ ಟಿಕೆಟ್‌ಗಳನ್ನು BookMyShow, PayTM ಮತ್ತು ಅಧಿಕೃತ ಸಿನಿಮಾದ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ದೇಶದಾದ್ಯಂತದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರೇಮಿಗಳಿಗಾಗಿ ಪ್ರತಿ ಪ್ರವೇಶಕ್ಕೆ ಟಿಕೆಟ್ ಬೆಲೆ ಕೇವಲ 99 ರೂಪಾಯಿ ಇರುತ್ತದೆ.

ರಾಷ್ಟ್ರೀಯ ಸಿನಿಮಾ ದಿನ 2023: ಎಲ್ಲೇಲ್ಲಿ ಸಿನಿಮಾ ನೋಡಬಹುದು?

ಪಿವಿಆರ್ ಇನೋಕ್ಸ್ (PVR INOX), Cinepolis, ಸಿನಿಪೋಲ್ಸ್ (Miraj) ಮತ್ತು ಡಿಲೈಟ್ (Delite) ಸೇರಿದಂತೆ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ 4,000 ಕ್ಕೂ ಹೆಚ್ಚು ಪರದೆಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನಾಚರಣೆ ಆಚರಿಸಲಾಗುತ್ತದೆ. ಈ ಎಲ್ಲಾ ಪರದೆಗಳಲ್ಲಿ ಸಿನಿಮಾ ಬೆಲೆ 99 ರೂಪಾಯಿ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪತ್ರದಲ್ಲಿ, "ಈ ವಿಶೇಷ ಸಂದರ್ಭವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಒಂದು ದಿನ ಕಡಿಮೆ ಬೆಲೆಯಲ್ಲಿ ಸಿನಿಮಾ ನೋಡಲು ಒಟ್ಟುಗೂಡಿಸುತ್ತದೆ, ಈ ವರ್ಷದ ಬಾಕ್ಸ್ ಆಫೀಸ್‌ನಲ್ಲಿ ಬಹು ಚಲನಚಿತ್ರಗಳ ಅದ್ಭುತ ಯಶಸ್ಸನ್ನು ಆಚರಿಸುತ್ತದೆ" ಎಂದು ಹೇಳಿದೆ. ರಿಕ್ಲೈನರ್ ಮತ್ತು ಪ್ರೀಮಿಯಂ ಫಾರ್ಮ್ಯಾಟ್‌ಗಳನ್ನು ಹೊರತುಪಡಿಸಿ, ಚಲನಚಿತ್ರ ಪ್ರೇಮಿಗಗಳು ಅಕ್ಟೋಬರ್ 13 ರಂದು ಯಾವುದೇ ಚಿತ್ರದ ಯಾವುದೇ ಪ್ರದರ್ಶನವನ್ನು 99 ರೂಪಾಯಿಗೆ ವೀಕ್ಷಿಸಬಹುದು ಎಂದು MAI ತಿಳಿಸಿದೆ.

ಹೊಸ ಆಫರ್ ಘೋಷಿಸಿರುವ ಪಿವಿಆರ್!

ಪಿವಿಆರ್ ಇನೋಕ್ಸ್ ಸಿನಿಮಾ ಟಿಕರಟ್ ಕಡಿಮೆ ಬೆಲೆ ಜೊತೆಗೆ ಹೊಸ ಆಫರ್ ಕೂಡ ಘೋಷಿಸಿದೆ. "ಚಲನಚಿತ್ರ ಪ್ರೇಮಿಗಳು ತಮ್ಮ ಸಿನಿಮೀಯ ಅನುಭವವನ್ನು ಹೆಚ್ಚಿಸಲು ಕೇವಲ ರೂ. 99 ರಿಂದ ಪ್ರಾರಂಭವಾಗುವ ರುಚಿಕರವಾದ ಆಹಾರ ಮತ್ತು ಪಾನೀಯಗಳನ್ನು ಸವಿಯಬಹುದು" ಎಂದು ಹೇಳಿದೆ. ಜೊತೆಗೆ ಈ ಆಫರ್ ಆಯ್ದ ನಗರಗಳು ಮತ್ತು ಚಿತ್ರಮಂದಿರಗಳಲ್ಲಿ ಅನ್ವಯಿಸುತ್ತದೆ. ಮೀರಜ್ ಸಿನಿಮಾಸ್ ಕೂಡ ಆಯ್ದ ಸ್ಥಳಗಳಲ್ಲಿ ಆಫರ್ ನೀಡಿದೆ.

ರಾಷ್ಟ್ರೀಯ ಸಿನಿಮಾ ದಿನ 2023: ಟಿಕೆಟ್‌ಗಳನ್ನು ಬುಕ್ ಮಾಡುವುದು ಹೇಗೆ

ರಾಷ್ಟ್ರೀಯ ಸಿನಿಮಾ ದಿನದಂದು ಆಸಕ್ತ ವೀಕ್ಷಕರು BookMyShow, PayTM ಮತ್ತು ಅಧಿಕೃತ ಸಿನಿಮಾ ಸರಣಿ ವೆಬ್‌ಸೈಟ್‌ಗಳ ಮೂಲಕ 2023ರ ರಾಷ್ಟ್ರೀಯ ಸಿನಿಮಾ ದಿನಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ನಿಮ್ಮ ಆದ್ಯತೆಯ ಸಿನಿಮಾ ಬುಕ್ಕಿಂಗ್ ನೆಟ್‌ವರ್ಕ್‌ಗೆ ಹೋಗಿ (ಉದಾಹರಣೆಗೆ: BookMyShow)

*BookMyShow ಗೆ ಭೇಟಿ ನೀಡಿ

*ನಿಮ್ಮ ನಗರವನ್ನು ಆಯ್ಕೆಮಾಡಿ

*ಎಲ್ಲಾ ಟಿಕೆಟ್‌ಗಳು ಭಾರತದಾದ್ಯಂತ ರೂ.99 ಕ್ಕೆ ಲಭ್ಯವಿರುತ್ತವೆ

* ದಿನಾಂಕ ಮತ್ತು ಸಮಯ ಆಯ್ಕೆಮಾಡಿ

*ಆನ್‌ಲೈನ್ ಪಾವತಿ ಮಾಡಿದರೇ ಸಿನಿಮಾ ಟಿಕೆಟ್ ಬುಕ್ ಆದಂತೆ

More from Filmibeat

English summary
National Cinema Day 2023: How to book movie tickets for rs 99.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X