»   » ನ್ಯಾಷನಲ್ ಕ್ರಶ್ ಪ್ರಿಯಾ ವಾರಿಯರ್ ಗೆ ತುಂಬಿ ತುಳುಕುತ್ತಿವೆ ಅವಕಾಶಗಳು.!

ನ್ಯಾಷನಲ್ ಕ್ರಶ್ ಪ್ರಿಯಾ ವಾರಿಯರ್ ಗೆ ತುಂಬಿ ತುಳುಕುತ್ತಿವೆ ಅವಕಾಶಗಳು.!

Posted By:
Subscribe to Filmibeat Kannada
ಪ್ರಿಯಾ ವಾರಿಯರ್ ಗೆ ತುಂಬಿ ತುಳುಕುತ್ತಿವೆ ಅವಕಾಶಗಳು | Filmibeat Kannada

ಒಂದೇ ದಿನದಲ್ಲಿ.. ಇಡೀ ಭಾರತದಲ್ಲಿ ಹೊಸ ಸಂಚಲನ ಹುಟ್ಟಿಸಿದಾಕೆ ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಣೋಟದಲ್ಲೇ ಕೋಟ್ಯಾಂತರ ಹುಡುಗರ ದಿಲ್ ಕದ್ದ ಈ ಚೋರಿ ಇಂದು ನ್ಯಾಷನಲ್ ಕ್ರಶ್ ಅಂತಲೇ ಜನಪ್ರಿಯ.

ಕಣ್ ಹೊಡೆದು ಎಲ್ಲರ ಕಣ್ಮನ ಸೆಳೆದ ಈ ಮಾಯಾಂಗನೆ ಅಭಿನಯದ ಚೊಚ್ಚಲ ಚಿತ್ರದ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ರೂಪಸಿಯ ಮೊದಲ ಚಿತ್ರದ ಟ್ರೈಲರ್ ಗೆ ಇಷ್ಟೊಂದು ಸೆನ್ಸೇಷನ್ ಇರುವಾಗ, ಇನ್ನೂ ಆ ಚಿತ್ರ ತೆರೆಗೆ ಬಂದರೆ ಗತಿ ಏನು.?

ಪ್ರಿಯಾ ಪ್ರಕಾಶ್ ವಾರಿಯರ್ ರ ಕೆಣಕುವ ಕಣ್ಣೋಟ ಇರುವ 'ಒರು ಅದಾರ್ ಲವ್' ಚಿತ್ರ ಸೂಪರ್ ಸಕ್ಸಸ್ ಆಗುವ ಸೂಚನೆ ನೀಡಿದೆ. ಪ್ರಿಯಾ ಪ್ರಕಾಶ್ ಗೆ ಅಭಿಮಾನಿಗಳ ಸಂಖ್ಯೆ ಏಕ್ದಂ ಹೆಚ್ಚಾಗಿರುವ ಕಾರಣ, ಆಕೆಗೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಿಂದ ಅವಕಾಶಗಳು ತುಂಬಿ ತುಳುಕುತ್ತಿವೆ. ಮುಂದೆ ಓದಿರಿ...

ಪ್ರಿಯಾ ವಾರಿಯರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

ಪ್ರಿಯಾ ವಾರಿಯರ್ ಅಭಿನಯದ ಚೊಚ್ಚಲ ಸಿನಿಮಾ 'ಒರು ಅದಾರ್ ಲವ್' ಇನ್ನೂ ತೆರೆಗೆ ಬಂದಿಲ್ಲ. ಟ್ರೈಲರ್ ಮಾತ್ರದಿಂದಲೇ ನ್ಯಾಷನಲ್ ಕ್ರಶ್ ಆಗಿರುವ ಪ್ರಿಯಾ ವಾರಿಯರ್ ಗೆ ಈಗ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಸುಂದರಿ ಪ್ರಿಯಾ ಕಾಲ್ ಶೀಟ್ ಗಾಗಿ ಮಾಲಿವುಡ್ ನಿರ್ಮಾಪಕರು ಕ್ಯೂ ನಿಂತಿದ್ದಾರೆ.

'ನ್ಯಾಷನಲ್ ಕ್ರಶ್' ಆಗಿರುವ ಪ್ರಿಯಾ ಆಡಿರುವ ಮಾತು ಮಿಸ್ ಮಾಡದೆ ಕೇಳಿ

ಕಾಲಿವುಡ್, ಟಾಲಿವುಡ್ ನಿಂದಲೂ ಬರ್ತಿವೆ ಆಫರ್ ಗಳು

ಮಲ್ಲು ಬೆಡಗಿಗೆ ಬರೀ ಮಾಲಿವುಡ್ ನಿಂದ ಮಾತ್ರ ಅಲ್ಲ, ಕಾಲಿವುಡ್ ಹಾಗೂ ಟಾಲಿವುಡ್ ನಿಂದಲೂ ಬುಲಾವ್ ಬಂದಿದ್ಯಂತೆ.

ಪ್ರಿಯಾ ವಾರಿಯರ್ ಕಣ್ಣಿನ ನೋಟಕ್ಕೆ ಹಿಂದೆ ಬಿದ್ದ ಹುಡುಗರ ಸಂಖ್ಯೆ ಅಪಾರ

ಬಾಲಿವುಡ್ ನಿಂದ ಕರೆ

ಪ್ರಿಯಾ ಪ್ರಕಾಶ್ ವಾರಿಯರ್ ಗೆ ಬಾಲಿವುಡ್ ನಿಂದಲೂ ಕರೆ ಬಂದಿದೆ ಎಂಬ ಸುದ್ದಿ ಸದ್ಯ ಎಲ್ಲೆಡೆ ಗಿರಗಿಟ್ಲೆ ಹೊಡೆಯುತ್ತಿದೆ. ಅದು ಜಸ್ಟ್ ರೂಮರ್ ಅಲ್ಲ, ಸತ್ಯವಾಗಲೂ ಬಾಲಿವುಡ್ ನಿಂದ ಆಫರ್ ಬಂದಿದೆ ಅಂತ ಪ್ರಿಯಾ ಪ್ರಕಾಶ್ ವಾರಿಯರ್ ಒಪ್ಪಿಕೊಂಡಿದ್ದಾರೆ.

ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

ಸದ್ಯಕ್ಕೆ ಯಾವುದನ್ನೂ ಓಕೆ ಮಾಡಿಲ್ಲ!

ಇನ್ನೂ ಕಾಲೇಜಿನಲ್ಲಿ ಓದುತ್ತಿರುವ ಕನ್ಯಾಮಣಿ ಈ ಪ್ರಿಯಾ ಪ್ರಕಾಶ್ ವಾರಿಯರ್. ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದ್ದರೂ, ಯಾವುದಕ್ಕೂ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಮೊದಲು ಓದು ಮುಗಿಯಬೇಕು ಅಂತಾರೆ ಪ್ರಿಯಾ.

ಪ್ರಿಯಾ ವಾರಿಯರ್ ಮುಂದೆ ಡಮ್ಮಿ ಆಗೋದಳು ಸನ್ನಿ!

ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸಬೇಕು.!

''ಬಾಲಿವುಡ್ ನಲ್ಲಿ ನಟಿಸಬೇಕು ಎಂಬ ಆಸೆ ಖಂಡಿತ ಇದೆ. ಅದರಲ್ಲೂ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ಅಭಿನಯಸಬೇಕೆಂಬ ಬಯಕೆ ಇದೆ ಎನ್ನುತ್ತಾರೆ ಪ್ರಿಯಾ. ಅಂದ್ಹಾಗೆ, ಪ್ರಿಯಾಗೆ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅಚ್ಚುಮೆಚ್ಚಿನ ತಾರೆಯರಂತೆ.

English summary
National Crush Priya Prakash Varrier is in Demand. She admits getting offers from Kollywood and Bollywood.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X