twitter
    For Quick Alerts
    ALLOW NOTIFICATIONS  
    For Daily Alerts

    ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

    By Bharath Kumar
    |

    65ನೇ ಸಾಲಿನ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ರಾಷ್ಟಪತಿ ರಾಮ್ ನಾಥ್ ಕೋವಿಂದ್ ಅವರು ಇಂದು (ಮೇ 3) ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಜೊತೆಗೆ ಮಾಹಿತಿ ಮತ್ತು ಪ್ರಸಾರಣ ಇಲಾಖೆ ಸಚಿವೆ ಸ್ಮ್ರತಿ ಇರಾನಿ, ರಾಜ್ಯವರ್ಧನ್ ಸಿಂಗ್ ರಾಥೋರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    2017ನೇ ಸಾಲಿನ ಪ್ರತಿಷ್ಟಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ 2017ನೇ ಸಾಲಿನ ಪ್ರತಿಷ್ಟಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ

    ಹಿಂದಿ, ತಮಿಳು, ತೆಲುಗು ಸೇರಿದಂತೆ ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ದಿವಂಗತ ನಟಿ ಶ್ರೀದೇವಿ ಅವರಿಗೆ 65ನೇ ಸಾಲಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದ್ದು, ಅವರ ಪರವಾಗಿ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ ಬಾಲಿವುಡ್ ನಟ ವಿನೋದ್ ಖನ್ನಾ ಅವರಿಗೆ ಮರೋಣತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು.

    ಶ್ರೀದೇವಿ ಅತ್ಯುತ್ತಮ ನಟಿ

    ಶ್ರೀದೇವಿ ಅತ್ಯುತ್ತಮ ನಟಿ

    65ನೇ ಸಾಲಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ದಿವಂಗತ ಶ್ರೀದೇವಿಗೆ ಸಿಕ್ಕಿದ್ದು, ಅವರ ಪರವಾಗಿ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಪ್ರಶಸ್ತಿ ಸ್ವೀಕರಿಸಿದರು.

    ಹಿನ್ನೆಲೆ ಗಾಯಕಿ ಶಾಶಾ

    ಹಿನ್ನೆಲೆ ಗಾಯಕಿ ಶಾಶಾ

    ತಮಿಳಿನ 'ಕಾಟ್ರು ವೇಲಿಯಿಡು' ಚಿತ್ರದ ವಾನ್ ಹಾಡಿಗಾಗಿ ಶಾಶಾ ತಿರುಪತಿ ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಸಿಕ್ಕಿದೆ.

    ಅತ್ಯುತ್ತಮ ಮನರಂಜನಾ ಚಿತ್ರ

    ಅತ್ಯುತ್ತಮ ಮನರಂಜನಾ ಚಿತ್ರ

    ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ, ದಿ ಕನ್ ಕ್ಲೂಶನ್' ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಸಿಕ್ಕಿದ್ದು, ಈ ಪ್ರಶಸ್ತಿಯನ್ನ ಚಿತ್ರದ ನಿರ್ಮಾಪಕರು ಪಡೆದುಕೊಂಡರು.

    ಅತ್ಯುತ್ತಮ ಪೋಷಕ ನಟಿ

    ಅತ್ಯುತ್ತಮ ಪೋಷಕ ನಟಿ

    ಇರಾದಾ ಚಿತ್ರದ ಅಭಿನಯಕ್ಕಾಗಿ ದಿವ್ಯಾ ದತ್ತಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಂದ ಪಡೆದುಕೊಂಡರು.

    ಎ ಆರ್ ರೆಹಮಾನ್ ಗೆ ಎರಡು ಪ್ರಶಸ್ತಿ

    ಎ ಆರ್ ರೆಹಮಾನ್ ಗೆ ಎರಡು ಪ್ರಶಸ್ತಿ

    ತಮಿಳಿನ 'ಕಾಟ್ರು ವೇಲಿಯಿಡು' ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಹಾಗೂ ಹಿಂದಿಯ ಮಾಮ್ ಚಿತ್ರಕ್ಕೆ ಅತ್ಯುತ್ತಮ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ವಿಭಾಗದಲ್ಲಿ ಎ.ಆರ್.ರೆಹಮಾನ್ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇನ್ನು ಕನ್ನಡಕ್ಕೆ ಎರಡು ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಹೆಬ್ಬೆಟ್ ರಾಮಕ್ಕ ಹಾಗೂ ಮಾರ್ಚ್ 22 ಚಿತ್ರದ ''ಮುತ್ತು ರತ್ನದ ಪ್ಯಾಟೆ'' ಹಾಡಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಸಿಕ್ಕಿದೆ.

    English summary
    The 65th National Awards ceremony is being held in New Delhi in the presence of President Ram Nath Kovind. Late actor Sridevi, has been conferred with the award in Best Actor (Female) category and late actor Vinod Khanna is posthumously honoured with Dadasaheb Phalke Award.
    Thursday, May 3, 2018, 19:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X