ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡಕ್ಕೆ 12 ಪ್ರಶಸ್ತಿ
2019ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಕನ್ನಡಕ್ಕೆ 12 ಪ್ರಶಸ್ತಿ ಸಿಕ್ಕಿವೆ. ಅದರಲ್ಲೂ ಅತಿಹೆಚ್ಚು ಪ್ರಶಸ್ತಿಯನ್ನು ಶ್ರುತಿ ಹರಿಹರನ್ ಅಭಿನಯದ, ಮನ್ಸೂರೆ ನಿರ್ದೇಶನದ ನಾತಿಚರಾಮಿ ಸಿನಿಮಾ ಬಾಚಿಕೊಂಡಿದೆ.
ಪ್ರಾದೇಶಿಕ ವಿಭಾಗದಲ್ಲಿ ಶ್ರುತಿ ಹರಿಹರನ್ ಅಭಿನಯದ ನಾತಿಚರಾಮಿ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ. ಅತ್ಯುತ್ತಮ ಆಕ್ಷನ್ ಸಿನಿಮಾ ಕೆಜಿಎಫ್ ಆಯ್ಕೆಯಾಗಿದೆ. ಉಳಿದಂತೆ ಪ್ರಶಸ್ತಿ ಗೆದ್ದು ಬೀಗಿದ ಸಿನಿಮಾಗಳ ಲಿಸ್ಟ್ ಹೀಗಿದೆ.

ಉತ್ಯುತ್ತಮ ಕನ್ನಡ ಸಿನಿಮಾ (ಪ್ರದೇಶಿಕ ವಿಭಾಗ) ನಾತಿಚರಾಮಿ
ಅತ್ಯುತ್ತಮ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ- ಒಂದಲ್ಲ ಎರಡಲ್ಲ
ಅತ್ಯುತ್ತಮ ಬಾಲ ನಟ ಪ್ರಶಸ್ತಿ - ಒಂದಲ್ಲ ಎರಡಲ್ಲ
ಅತ್ಯುತ್ತಮ ಮಕ್ಕಳ ಸಿನಿಮಾ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಅತ್ಯುತ್ತಮ ಆಕ್ಷನ್ ಸಿನಿಮಾ - ಕೆಜಿಎಫ್
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್- ಕೆಜಿಎಫ್
ಅತ್ಯುತ್ತಮ ಎಡಿಟಿಂಗ್- ನಾತಿಚರಾಮಿ
ಅತ್ಯುತ್ತಮ ಹಿನ್ನಲೆ ಗಾಯಕಿ- ನಾತಿಚರಾಮಿ, ಬಿಂದು ಮಣಿ
ತೀರ್ಪುಗಾರರ ವಿಶೇಷ ಪ್ರಶಸ್ತಿ- ಶ್ರುತಿ ಹರಿಹರನ್
ಉತ್ತಮ ಸಾಹಿತಿ- ನಾತಿಚರಾಮಿ
ನ್ಯಾಷನಲ್ ಆರ್ಕೈವ್ಸ್ ಪ್ರಶಸ್ತಿ- ಮೂಕಜ್ಜಿ ಕನಸು
ನಾನ್ ಫೀಚರ್ ವಿಭಾಗ- ಸರಳವಿರಳ (ಶ್ರೇಷ್ಠ ಕೃಷಿಕ, ಎಲ್ ನಾರಾಯಣ ರೆಡ್ಡಿ ಅವರ ಬಯೋಪಿಕ್, ಈರೇಗೌಡ)


Click it and Unblock the Notifications











