twitter
    For Quick Alerts
    ALLOW NOTIFICATIONS  
    For Daily Alerts

    ನಾತಿಚರಾಮಿ ಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಭಾಷೆ ರಾಷ್ಟ್ರಪ್ರಶಸ್ತಿ

    |

    66ನೇ ರಾಷ್ಟ್ರಪ್ರಶಸ್ತಿ ವಿಜೇತರ ಪಟ್ಟಿಯನ್ನು ಆಗಸ್ಟ್ 09ರಂದು ಪ್ರಕಟಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಪ್ರಶಸ್ತಿ ಪಟ್ಟಿಗೆ ಈ ಮುಂಚೆಯೇ ಸಹಿ ಹಾಕಿದ್ದರು. ಆದರೆ, ಲೋಕಸಭೆ ಚುನಾವಣೆ 2019 ಹಿನ್ನಲೆಯಲ್ಲಿ ಪ್ರಶಸ್ತಿ ಘೋಷಣೆ ವಿಳಂಬವಾಗಿತ್ತು.

    ಅಂಧಾಧೂನ್(ಹಿಂದಿ) ಚಿತ್ರದ ನಟನೆಗಾಗಿ ಆಯುಷ್ಮಾನ್ ಖುರಾನಾ ಹಾಗೂ ಉರಿ ಚಿತ್ರದ ನಟನೆಗಾಗಿ ವಿಕ್ಕಿ ಕೌಶಲ್ ಗೆ ಶ್ರೇಷ್ಠ ನಟ ಪ್ರಶಸ್ತಿ ಗೆದ್ದಿದ್ದಾರೆ. ಮಹಾನಟಿ(ತೆಲುಗು) ಚಿತ್ರದ ನಟನೆಗಾಗಿ ಕೀರ್ತಿ ಸುರೇಶ್ ಅವರು ಶ್ರೇಷ್ಠ ನಟಿ ಗೆದ್ದಿದ್ದರೆ, ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧರ್ ಗೆ ಸಂದಿದೆ.

    National Film Awards 2019 Announced : Best Kannada Film: Nathicharami

    ಕನ್ನಡ ಚಿತ್ರಗಳು ಈ ಬಾರಿ ಒಟ್ಟು 11 ಪ್ರಶಸ್ತಿ ಬಾಚಿಕೊಂಡಿವೆ. ನಾತಿ ಚರಾಮಿ 5 ಪ್ರಶಸ್ತಿ ಗೆದ್ದುಕೊಂಡಿದೆ. ಒಂದಲ್ಲ ಎರಡಲ್ಲ, ಕೆಜಿಎಫ್ ಚಿತ್ರಕ್ಕೆ ತಲಾ 2, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಮೂಕಜ್ಜಿಯ ಕನಸು ಚಿತ್ರಕ್ಕೆ ಒಂದು ಪ್ರಶಸ್ತಿ ಬಂದಿದೆ.

    ರಾಷ್ಟ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ ವಿಕ್ಕಿ ಕೌಶಲ್, ಆಯುಷ್ಮಾನ್, ನಟಿ ಕೀರ್ತಿ ಸುರೇಶ್ರಾಷ್ಟ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ ವಿಕ್ಕಿ ಕೌಶಲ್, ಆಯುಷ್ಮಾನ್, ನಟಿ ಕೀರ್ತಿ ಸುರೇಶ್

    ನಾತಿಚರಾಮಿ ಚಿತ್ರವು 5 ಪ್ರಶಸ್ತಿ ಗೆದ್ದಿದೆ. ಶ್ರೇಷ್ಠ ಪ್ರಾದೇಶಿಕ ಭಾಷೆ ಚಿತ್ರ, ಶ್ರೇಷ್ಠ ಗಾಯಕಿ(ಬಿಂದು ಮಾಲಿನಿ), ಶ್ರೇಷ್ಠ ಗೀತ ರಚನೆ(ಮಂಜುನಾಥ್), ಶ್ರೇಷ್ಠ ಸಂಕಲನಕಾರ, ಶ್ರುತಿ ಹರಿಹನ್ ಗೆ ವಿಶೇಷ ಉಲ್ಲೇಖ ಪ್ರಶಸ್ತಿ ಸಿಕ್ಕಿದೆ.

    ಮಿಕ್ಕಂತೆ ಶ್ರೇಷ್ಠ ಪ್ರಾದೇಶಿಕ ಚಿತ್ರಗಳ ಪಟ್ಟಿ:
    ಶ್ರೇಷ್ಠ ರಾಜಸ್ಥಾನಿ ಚಿತ್ರ: ಟರ್ಟಲ್
    ಶ್ರೇಷ್ಠ ಪಂಚಾಂಗ(Panchanga) ಚಿತ್ರ: ಇನ್ ದಿ ಲ್ಯಾಂಡ್ ಆಫ್ ಪಾಯ್ಸನಸ್ ವುಮೆನ್
    ಶ್ರೇಷ್ಠ ಗರೋ ಚಿತ್ರ: ಅಣ್ಣಾ
    ಶ್ರೇಷ್ಠ ಮರಾಠಿ ಚಿತ್ರ: ಭೊಂಗ
    ಶ್ರೇಷ್ಠ ತಮಿಳು ಚಿತ್ರ: ಬರಂ
    ಶ್ರೇಷ್ಠ ಹಿಂದಿ ಚಿತ್ರ: ಅಂಧಾಧೂನ್
    ಶ್ರೇಷ್ಠ ಉರ್ದು ಚಿತ್ರ: ಹಮೀದ್
    ಶ್ರೇಷ್ಠ ಬೆಂಗಾಳಿ ಚಿತ್ರ: ಎಕ್ ಜೆ ಚಿಲೋ ರಾಜ.
    ಶ್ರೇಷ್ಠ ಮಲೆಯಾಳಂ ಚಿತ್ರ: ಸುದಾನಿ ಫ್ರಮ್ ನೈಜೀರಿಯಾ
    ಶ್ರೇಷ್ಠ ತೆಲುಗು ಚಿತ್ರ: ಮಹಾನಟಿ
    ಶ್ರೇಷ್ಠ ಕನ್ನಡ ಚಿತ್ರ: ನಾತಿಚರಾಮಿ
    ಶ್ರೇಷ್ಠ ಕೊಂಕಣಿ ಚಿತ್ರ: ಅಮೋರಿ
    ಶ್ರೇಷ್ಠ ಅಸ್ಸಾಮಿ ಚಿತ್ರ: ಬುಲ್ಬುಲ್ ಕ್ಯಾನ್ ಸಿಂಗ್
    ಶ್ರೇಷ್ಠ ಪಂಜಾಬಿ ಚಿತ್ರ: ಹರ್ಜೀತಾ
    ಶ್ರೇಷ್ಠ ಗುಜರಾತಿ ಚಿತ್ರ: ರೆವಾ

    66ನೇ ರಾಷ್ಟ್ರ ಪ್ರಶಸ್ತಿಯ ಫೀಚರ್ ಕೆಟಗರಿಯಲ್ಲಿ ಒಟ್ಟು 31 ವಿಭಾಗದಲ್ಲಿ ಒಟ್ಟು 419 ಚಿತ್ರಗಳನ್ನು 45 ದಿನಗಳಲ್ಲಿ ಜ್ಯೂರಿ ಸದಸ್ಯರು ನೋಡಿ ಪ್ರಶಸ್ತಿ ಪಟ್ಟಿ ತಯಾರಿಸಿದ್ದಾರೆ. ನಾನ್ ಫೀಚರ್ ವಿಭಾಗದಲ್ಲಿ 23 ಪ್ರಶಸ್ತಿಗಳನ್ನು 253 ಚಿತ್ರಗಳನ್ನು 28ದಿನಗಳಲ್ಲಿ ನೋಡಿ ಪಟ್ಟಿ ಮಾಡಿದ್ದಾರೆ.

    English summary
    National Film Awards 2019: Naticharami directed by declared as Best Kannada Language Film.
    Friday, August 9, 2019, 16:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X