National Awards 2023: ಚಾರ್ಲಿಗೆ ಬೆಸ್ಟ್ ಫಿಲ್ಮ್ ಪ್ರಶಸ್ತಿ; ಪುಟ್ಟ ಮಗುವಿನಂತೆ ಸಂಭ್ರಮಿಸಿದ ನಿರ್ದೇಶಕನ ತಾಯಿ, ವಿಡಿಯೊ ವೈರಲ್
ನಿನ್ನೆ ( ಆಗಸ್ಟ್ 24 ) 69ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. 2021ರಲ್ಲಿ ಸೆನ್ಸಾರ್ ಆಗಿ ಬಿಡುಗಡೆಗೊಂಡ ಚಲನಚಿತ್ರಗಳ ಪೈಕಿ ವಿವಿಧ ವಿಭಾಗಗಳಲ್ಲಿ ಅದ್ಭುತ ಎನಿಸಿಕೊಂಡ ಸಿನಿಮಾಗಳಿಗೆ ಹಾಗೂ ಕಲಾವಿದರನ್ನು ಆರಿಸಿ ಪ್ರಶಸ್ತಿಯನ್ನು ನೀಡಲಾಯಿತು. ಆರ್ ಆರ್ ಆರ್ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ನಟ ಅಲ್ಲು ಅರ್ಜುನ್ ಪುಷ್ಪ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು ಹಾಗೂ ಮಿಮಿ ಚಿತ್ರದ ನಟನೆಗಾಗಿ ಕಿಯಾರಾ ಅಡ್ವಾಣಿ ಮತ್ತು ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿನ ನಟನೆಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.
ಇನ್ನು ಕನ್ನಡದ ಪರ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಅನಿರುದ್ಧ್ ಜತ್ಕರ್ ನಿರ್ದೇಶನದ ಬಾಳೇ ಬಂಗಾರ ಎಂಬ ನಾನ್ ಫೀಚರ್ ಸಿನಿಮಾಗೂ ಸಹ ಪ್ರಶಸ್ತಿ ಲಭಿಸಿತು. ಹೀಗೆ ಕನ್ನಡದ ಈ ಚಿತ್ರಗಳಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಕನ್ನಡದ ಹಲವಾರು ಕಲಾವಿದರು ಚಿತ್ರತಂಡಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ.

ಇನ್ನು ಸಾಕು ಪ್ರಾಣಿ ಮತ್ತು ಓರ್ವ ವ್ಯಕ್ತಿಯ ನಡುವಿನ ಬಂಧ ಎಂಥದ್ದು ಎಂಬುದನ್ನು ಸಿನಿಮಾ ಮಾಡಿ ಇಡೀ ದೇಶದ ಮನ ಗೆದ್ದಿದ್ದ 777 ಚಾರ್ಲಿಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದಕ್ಕೆ ಸದ್ಯ ದೇಶದ ಮೂಲೆ ಮೂಲೆಗಳಿಂದ ನಿರ್ದೇಶಕ ಕಿರಣ್ ರಾಜ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಕಿರಣ್ ರಾಜ್ ತಮ್ಮ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ 'ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರ ಪ್ರಶಸ್ತಿ' ಬಂದ ವಿಷಯ ತಿಳಿದಾಗ ಅವರ ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂಬು ವಿಡಿಯೊವನ್ನು ಹಂಚಿಕೊಂಡು "ಆ ಘಳಿಗೆ ಹೇಗಿತ್ತು ಎಂಬುದನ್ನು ಅಮ್ಮನ ಪ್ರತಿಕ್ರಿಯೆಯೇ ಹೇಳುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೊದಲ್ಲಿ ಕಿರಣ್ ರಾಜ್ ಅವರ ತಾಯಿ ತನ್ನ ಮಗನ ನಿರ್ದೇಶನದ ಚಿತ್ರಕ್ಕೆ ಪ್ರಶಸ್ತಿ ಘೋಷಣೆಯಾದದ್ದನ್ನು ಕಂಡು ಪುಟ್ಟ ಮಗುವಿನಂತೆ ಮೊಬೈಲ್ ಬಿಟ್ಟು ಚಪ್ಪಾಳೆ ತಟ್ಟಿ ಸಂಭ್ರಮಿಸಿ ಪಕ್ಕದಲ್ಲೇ ಇದ್ದ ಮಗನನ್ನು ಅಪ್ಪಿ ಸಂಭ್ರಮಿಸಿದ್ದಾರೆ. ಈ ವಿಡಿಯೊ ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗಿನ ಕ್ಯೂಟೆಸ್ಟ್ ವಿಡಿಯೊ ಎನಿಸಿಕೊಂಡಿದೆ.
ಈ ಬಾರಿ ಪ್ರಶಸ್ತಿ ಗೆದ್ದ ಕಲಾವಿದರು ಹಾಗೂ ಸಿನಿಮಾಗಳ ಪಟ್ಟಿ:
ಸುಬ್ರಮಣ್ಯ ಬಡೂರು ಅವರಿಗೆ ಕ್ರಿಟಿಕ್ (ಸ್ಪೆಷಲ್ ಮೆನ್ಷನ್) ಪ್ರಶಸ್ತಿ
ಅನಿರುದ್ಧ್ ನಿರ್ದೇಶನದ 'ಬಾಳೇ ಬಂಗಾರ' ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ
'777 ಚಾರ್ಲಿ' ಅತ್ಯುತ್ತಮ ಕನ್ನಡ ಸಿನಿಮಾ
'ಸರ್ದಾರ್ ಉದಮ್' (ಬೆಸ್ಟ್ ಹಿಂದಿ ಫಿಲ್ಮ್ )
ಚೆಲ್ಲೋ ಶೋ (ಬೆಸ್ಟ್ ಗುಜರಾತಿ)
ಏಕ್ದ ಕಾಯ್ ಜಾಲ (ಅತ್ಯುತ್ತಮ ಮರಾಠಿ ಸಿನಿಮಾ)
ಹೋಮ್ (ಅತ್ಯುತ್ತಮ ಮಲಯಾಳಂ ಸಿನಿಮಾ)
ಉಪ್ಪೆನಾ (ಅತ್ಯುತ್ತಮ ತೆಲುಗು ಸಿನಿಮಾ)
ಸಾಹಸ ನಿರ್ದೇಶಕ- RRR (ಅತ್ಯುತ್ತಮ ಸಾಹಸ ಸಂಯೋಜನೆ))
ಕೊರಿಯೋಗ್ರಫಿ- RRR (ಅತ್ಯುತ್ತಮ ನೃತ್ಯ ನಿರ್ದೇಶನ)
ಸ್ಪೆಷಲ್ ಎಫೆಕ್ಟ್- RRR (ಸ್ಪೆಷಲ್ ಎಫೆಕ್ಟ್)
ದೇವಿಶ್ರೀ ಪ್ರಸಾದ್- ಅತ್ಯುತ್ತಮ ಸಂಗೀತ ನಿರ್ದೇಶನ(ಪುಷ್ಪ)
ಎಂಎಂ ಕೀರವಾಣಿ- ಅತ್ಯುತ್ತಮ ಹಿನ್ನೆಲೆ ಸಂಗೀತ(RRR)
RRR- ಅತ್ಯುತ್ತಮ ಜನಪ್ರಿಯ ಚಿತ್ರ
ಅಲ್ಲು ಅರ್ಜುನ್- ಅತ್ಯುತ್ತಮ ನಟ (ಪುಷ್ಪ)
ಆಲಿಯಾ ಭಟ್- ಅತ್ಯುತ್ತಮ ನಟಿ (ಗಂಗೂಬಾಯಿ ಕಥಿಯಾವಾಡ)
ಕೃತಿ ಸನೂನ್- ಅತ್ಯುತ್ತಮ ನಟಿ (ಮಿಮಿ)
'ರಾಕೆಟ್ರಿ' - ಅತ್ಯುತ್ತಮ ಹಿಂದಿ ಸಿನಿಮಾ
ನಿಖಿಲ್ ಮಹಾಜನ್- ಅತ್ಯುತ್ತಮ ನಿರ್ದೇಶಕ (ಗೋಧಾವರಿ (ಮರಾಠಿ)
ಶ್ರೇಯಾ ಘೋಷಾಲ್- ಅತ್ಯುತ್ತಮ ಗಾಯಕಿ (ಇರವಿನ್ ನಿಜಾಲ್)
ಅನುನಾದ್- ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ(ಅಸ್ಸಾಮಿ)
ಗಂಗೂಬಾಯಿ ಕಾಠಿಯಾವಾಡಿ- ಅತ್ಯುತ್ತಮ ಸಂಕಲನ
ಅತ್ಯುತ್ತಮ ಸಂಭಾಷಣೆ- ಗಂಗೂಬಾಯಿ ಕಾಠಿಯಾವಾಡಿ
ಪಂಕಜ್ ತ್ರಿಪಾಠಿ- ಅತ್ಯುತ್ತಮ ಪೋಷಕ ನಟ (ಮಿಮಿ)
ಪಲ್ಲವಿ ಜೋಶಿ- ಅತ್ಯುತ್ತಮ ಪೋಷಕ ನಟಿ (ದಿ ಕಶ್ಮೀರ್ ಫೈಲ್ಸ್)
ಶೇರ್ಷಾ- ತೀರ್ಪುಗಾರರ ವಿಶೇಷ ಬಹುಮಾನ
ಮುಖ್ಯೋಫಾಧ್ಯಾಯ್- ಅತ್ಯುತ್ತಮ ಛಾಯಾಗ್ರಹಣ (ಸರ್ದಾರ್ ಉದ್ಧಮ್)
ಸಿಂಗ್ ಡಿಸೋಜಾ - ಅತ್ಯುತ್ತಮ ಮೇಕಪ್(ಗಂಗೂಬಾಯಿ ಕಾಠಿಯಾವಾಡಿ)
ವೀರಕಪೂರ್ ಇ- ಅತ್ಯುತ್ತಮ ವಸ್ತ್ರಾಲಂಕಾರ (ಸರ್ದಾರ್ ಉದ್ಧಮ್)
ಚಂದ್ರಭೋಸ್- ಅತ್ಯುತ್ತಮ ಸಾಹಿತ್ಯ (ಕೊಂಡಪೋಲಂ)
ದಿ ಕಾಶ್ಮೀರ್ ಫೈಲ್ಸ್- ನ್ಯಾಷನಲ್ ಇಂಟಿಗ್ರೇಷನ್
ನಾನ್ ಫೀಚರ್
'ಬಾಳೇ ಬಂಗಾರ'- ಸ್ಪೆಷನ್ ಮೆನ್ಷನ್
ಚಾಂದ್ ಸಾನ್ಸೆ- ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ
ಲುಕಿಂಗ್ ಫಾರ್ ಚಾಲನ್- ಅತ್ಯುತ್ತಮ ತನಿಖಾ ಸಿನಿಮಾ
ಸಿರ್ಪಂಗಲಿನ್ ಸಿರ್ಪಗಲಿಲ್- ಅತ್ಯುತ್ತಮ ಶೈಕ್ಷಣಿಕ ಸಿನಿಮಾ
ರೇಖಾ- ತೀರ್ಪುಗಾರರ ವಿಶೇಷ ಪ್ರಶಸ್ತಿ
ರುಕುಮಾತಿರ್ ದುಕುಮಾಜಿ -ಅತ್ಯುತ್ತಮ ಬಯೋಗ್ರಫಿ ಸಿನಿಮಾ (ಬಂಗಾಲಿ)
ಮುನ್ನಂ ವಲೈವ್- ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ (ಮಲಯಾಳಂ)
ಟಿಎನ್ ಕೃಷ್ಣನ್- ಕಲೆ ಸಂಸ್ಕೃತಿ ಬಗೆಗಿನ ಚಿತ್ರ ಪುರುಷೋತ್ತಮ
ಚಾರ್ಯಾಲು- ಅತ್ಯುತ್ತಮ ಚಿತ್ರ ವಿಮರ್ಶೆ (ತೆಲುಗು)
ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ- ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ


Click it and Unblock the Notifications











