National Awards 2023: ಚಾರ್ಲಿಗೆ ಬಂತು ಪ್ರಶಸ್ತಿ; ಕಾಂತಾರ, ಕೆಜಿಎಫ್ 2ಗೆ ಯಾಕಿಲ್ಲ? ಇದೇ ಕಾರಣ
ಇಂದು ( ಆಗಸ್ಟ್ 24 ) ಬಹು ನಿರೀಕ್ಷಿತ 69ನೇ ರಾಷ್ಟ್ರ ಪ್ರಶಸ್ತಿಯನ್ನು ಘೋಷಿಸಲಾಗಿದೆ. ವಿವಿಧ ಭಾಷೆಯ ಹಲವಾರು ಸಿನಿಮಾಗಳು ಹಾಗೂ ಕಲಾವಿದರು ಈ ಬಾರಿ ಪ್ರಶಸ್ತಿಯನ್ನು ಗೆದ್ದು ಬೀಗಿವೆ. ನಟ ಅಲ್ಲು ಅರ್ಜುನ್ ಪುಷ್ಪ ದ ರೈಸ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರೆ, ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಕೃತಿ ಸೆನನ್ ಮಿಮಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.
ಇನ್ನು ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಕಿರಣ್ ರಾಜ್ ನಿರ್ದೇಶನದ ಹಾಗೂ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರ ಬಾಚಿಕೊಂಡಿತು. ಹೀಗೆ 2022ರಲ್ಲಿ ಬಿಡುಗಡೆಗೊಂಡ ಚಾರ್ಲಿ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ಈ ಚಿತ್ರ ಮಾತ್ರವಲ್ಲದೇ ಕಳೆದ ವರ್ಷ ಬಿಡುಗಡೆಗೊಂಡ ಹಲವಾರು ಚಿತ್ರಗಳು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಹೀಗಾಗಿ ಸಾಮಾನ್ಯವಾಗಿ ಕೆಲ ಸಿನಿಮಾ ಪ್ರೇಮಿಗಳಲ್ಲಿ ಕಳೆದ ವರ್ಷ ಬಿಡುಗಡೆಗೊಂಡ ಹಲವು ಚಿತ್ರಗಳಿಗೆ ಪ್ರಶಸ್ತಿ ಲಭಿಸಿರುವಾಗ ಅದೇ ವರ್ಷ ತೆರೆಗೆ ಬಂದ ಕನ್ನಡದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳಿಗೆ ಯಾಕೆ ಪ್ರಶಸ್ತಿ ಲಭಿಸಿಲ್ಲ ಎಂಬ ಪ್ರಶ್ನೆ ಹಾಗೂ ಅನುಮಾನ ಮೂಡಿದೆ.

ಈ ಗೊಂದಲ ಹಲವರಲ್ಲಿ ಮೂಡಿದ್ದು ಇದಕ್ಕೆ ಉತ್ತರ ಈ ಬಾರಿ ಪ್ರಶಸ್ತಿ ನೀಡಿರುವುದು 2021ರಲ್ಲಿ ಸೆನ್ಸಾರ್ ಆದ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ನೀಡಿರುವುದು. ಹೌದು, ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳು 2022ರಲ್ಲಿ ಸೆನ್ಸಾರ್ ಆಗಿದ್ದು ಮುಂದಿನ ಬಾರಿಯ ರಾಷ್ಟ್ರ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲಿವೆ.
ಈ ಬಾರಿ ಪ್ರಶಸ್ತಿ ಗೆದ್ದ ಸಿನಿಮಾಗಳು ಹಾಗೂ ಕಲಾವಿದರ ಪಟ್ಟಿ ಈ ಕೆಳಕಂಡಂತಿದೆ..
ಸುಬ್ರಮಣ್ಯ ಬಡೂರು ಅವರಿಗೆ ಕ್ರಿಟಿಕ್ (ಸ್ಪೆಷಲ್ ಮೆನ್ಷನ್) ಪ್ರಶಸ್ತಿ
ಅನಿರುದ್ಧ್ ನಿರ್ದೇಶನದ 'ಬಾಳೇ ಬಂಗಾರ' ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ
'777 ಚಾರ್ಲಿ' ಅತ್ಯುತ್ತಮ ಕನ್ನಡ ಸಿನಿಮಾ
'ಸರ್ದಾರ್ ಉದಮ್' (ಬೆಸ್ಟ್ ಹಿಂದಿ ಫಿಲ್ಮ್ )
ಚೆಲ್ಲೋ ಶೋ (ಬೆಸ್ಟ್ ಗುಜರಾತಿ)
ಏಕ್ದ ಕಾಯ್ ಜಾಲ (ಅತ್ಯುತ್ತಮ ಮರಾಠಿ ಸಿನಿಮಾ)
ಹೋಮ್ (ಅತ್ಯುತ್ತಮ ಮಲಯಾಳಂ ಸಿನಿಮಾ)
ಉಪ್ಪೆನಾ (ಅತ್ಯುತ್ತಮ ತೆಲುಗು ಸಿನಿಮಾ)
ಸಾಹಸ ನಿರ್ದೇಶಕ- RRR (ಅತ್ಯುತ್ತಮ ಸಾಹಸ ಸಂಯೋಜನೆ))
ಕೊರಿಯೋಗ್ರಫಿ- RRR (ಅತ್ಯುತ್ತಮ ನೃತ್ಯ ನಿರ್ದೇಶನ)
ಸ್ಪೆಷಲ್ ಎಫೆಕ್ಟ್- RRR (ಸ್ಪೆಷಲ್ ಎಫೆಕ್ಟ್)
ದೇವಿಶ್ರೀ ಪ್ರಸಾದ್- ಅತ್ಯುತ್ತಮ ಸಂಗೀತ ನಿರ್ದೇಶನ(ಪುಷ್ಪ)
ಎಂಎಂ ಕೀರವಾಣಿ- ಅತ್ಯುತ್ತಮ ಹಿನ್ನೆಲೆ ಸಂಗೀತ(RRR)
RRR- ಅತ್ಯುತ್ತಮ ಜನಪ್ರಿಯ ಚಿತ್ರ
ಅಲ್ಲು ಅರ್ಜುನ್- ಅತ್ಯುತ್ತಮ ನಟ (ಪುಷ್ಪ)
ಆಲಿಯಾ ಭಟ್- ಅತ್ಯುತ್ತಮ ನಟಿ (ಗಂಗೂಬಾಯಿ ಕಥಿಯಾವಾಡ)
ಕೃತಿ ಸನೂನ್- ಅತ್ಯುತ್ತಮ ನಟಿ (ಮಿಮಿ)
'ರಾಕೆಟ್ರಿ' - ಅತ್ಯುತ್ತಮ ಹಿಂದಿ ಸಿನಿಮಾ
ನಿಖಿಲ್ ಮಹಾಜನ್- ಅತ್ಯುತ್ತಮ ನಿರ್ದೇಶಕ (ಗೋಧಾವರಿ (ಮರಾಠಿ)
ಶ್ರೇಯಾ ಘೋಷಾಲ್- ಅತ್ಯುತ್ತಮ ಗಾಯಕಿ (ಇರವಿನ್ ನಿಜಾಲ್)
ಅನುನಾದ್- ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ(ಅಸ್ಸಾಮಿ)
ಗಂಗೂಬಾಯಿ ಕಾಠಿಯಾವಾಡಿ- ಅತ್ಯುತ್ತಮ ಸಂಕಲನ
ಅತ್ಯುತ್ತಮ ಸಂಭಾಷಣೆ- ಗಂಗೂಬಾಯಿ ಕಾಠಿಯಾವಾಡಿ
ಪಂಕಜ್ ತ್ರಿಪಾಠಿ- ಅತ್ಯುತ್ತಮ ಪೋಷಕ ನಟ (ಮಿಮಿ)
ಪಲ್ಲವಿ ಜೋಶಿ- ಅತ್ಯುತ್ತಮ ಪೋಷಕ ನಟಿ (ದಿ ಕಶ್ಮೀರ್ ಫೈಲ್ಸ್)
ಶೇರ್ಷಾ- ತೀರ್ಪುಗಾರರ ವಿಶೇಷ ಬಹುಮಾನ
ಮುಖ್ಯೋಫಾಧ್ಯಾಯ್- ಅತ್ಯುತ್ತಮ ಛಾಯಾಗ್ರಹಣ (ಸರ್ದಾರ್ ಉದ್ಧಮ್)
ಸಿಂಗ್ ಡಿಸೋಜಾ - ಅತ್ಯುತ್ತಮ ಮೇಕಪ್(ಗಂಗೂಬಾಯಿ ಕಾಠಿಯಾವಾಡಿ)
ವೀರಕಪೂರ್ ಇ- ಅತ್ಯುತ್ತಮ ವಸ್ತ್ರಾಲಂಕಾರ (ಸರ್ದಾರ್ ಉದ್ಧಮ್)
ಚಂದ್ರಭೋಸ್- ಅತ್ಯುತ್ತಮ ಸಾಹಿತ್ಯ (ಕೊಂಡಪೋಲಂ)
ದಿ ಕಾಶ್ಮೀರ್ ಫೈಲ್ಸ್- ನ್ಯಾಷನಲ್ ಇಂಟಿಗ್ರೇಷನ್
ನಾನ್ ಫೀಚರ್
'ಬಾಳೇ ಬಂಗಾರ'- ಸ್ಪೆಷನ್ ಮೆನ್ಷನ್
ಚಾಂದ್ ಸಾನ್ಸೆ- ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ
ಲುಕಿಂಗ್ ಫಾರ್ ಚಾಲನ್- ಅತ್ಯುತ್ತಮ ತನಿಖಾ ಸಿನಿಮಾ
ಸಿರ್ಪಂಗಲಿನ್ ಸಿರ್ಪಗಲಿಲ್- ಅತ್ಯುತ್ತಮ ಶೈಕ್ಷಣಿಕ ಸಿನಿಮಾ
ರೇಖಾ- ತೀರ್ಪುಗಾರರ ವಿಶೇಷ ಪ್ರಶಸ್ತಿ
ರುಕುಮಾತಿರ್ ದುಕುಮಾಜಿ -ಅತ್ಯುತ್ತಮ ಬಯೋಗ್ರಫಿ ಸಿನಿಮಾ (ಬಂಗಾಲಿ)
ಮುನ್ನಂ ವಲೈವ್- ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ (ಮಲಯಾಳಂ)
ಟಿಎನ್ ಕೃಷ್ಣನ್- ಕಲೆ ಸಂಸ್ಕೃತಿ ಬಗೆಗಿನ ಚಿತ್ರ ಪುರುಷೋತ್ತಮ
ಚಾರ್ಯಾಲು- ಅತ್ಯುತ್ತಮ ಚಿತ್ರ ವಿಮರ್ಶೆ (ತೆಲುಗು)
ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ- ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ


Click it and Unblock the Notifications











