'ನವಗ್ರಹ' ಸಿನಿಮಾ ಶೆಟ್ಟಿ ಖ್ಯಾತಿಯ ನಟ ಗಿರಿ ದಿನೇಶ್ ನಿಧನ

ಕನ್ನಡ ಚಿತ್ರರಂಗದ ನಟ ಗಿರಿ ದಿನೇಶ್ ಹೃದಯಾಘಾತದಿಂದ ಕೊನೆಯಿಸಿರೆಳೆದಿದ್ದಾರೆ. ಖ್ಯಾತ ಪೋಷಕ ನಟ ದಿನೇಶ್ ಪುತ್ರ ಗಿರಿ 'ನವಗ್ರಹ' ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ನಿನ್ನೆ(ಫೆಬ್ರವರಿ 7) ಸಂಜೆ ಮನೆಯಲ್ಲಿ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಮಾರ್ಗ ಮಧ್ಯೆ ಇಹಲೋಕ ತ್ಯಜಿಸಿದ್ದಾರೆ.

ಗಿರಿ ದಿನೇಶ್ ಅವರಿಗೆ 45 ವರ್ಷ ವಯಸ್ಸಾಗಿತ್ತು. ಮದುವೆ ಆಗದೇ ಇದ್ದ ಅವರು ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸೇರಿ ಕೆಲ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ 'ನವಗ್ರಹ' ಚಿತ್ರದ ಶೆಟ್ಟಿ ಪಾತ್ರ ಹೆಚ್ಚಿನ ಹೆಸರು ತಂದುಕೊಟ್ಟಿತ್ತು. ದಿನಕರ್ ನಿರ್ದೇಶನದ ಆ ಚಿತ್ರವನ್ನು ಮೀನಾ ತೂಗುದೀಪ ನಿರ್ಮಾಣ ಮಾಡಿದ್ದರು.

Navagraha movie fame actor Giri Dinesh dies of sudden cardiac arrest

ಕಳೆದ ವರ್ಷ ನವೆಂಬರ್ 8ಕ್ಕೆ 'ನವಗ್ರಹ' ಸಿನಿಮಾ ಮರುಬಿಡುಗಡೆ ಆಗಿತ್ತು. ಆಗ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿತ್ತು. ಆದರೆ ಗಿರಿ ಮಾತ್ರ ಭಾಗಿ ಆಗಿರಲಿಲ್ಲ. ಚಿತ್ರದಲ್ಲಿ ನಾಗೇಂಧ್ರ ಅರಸ್ ಹಾಗೂ ಗಿರಿ ಕಾಂಬಿನೇಷನ್ ಹಿಟ್ ಆಗಿತ್ತು. ನಾಗಿ- ಶೆಟ್ಟಿ ಪಾತ್ರಗಳಲ್ಲಿ ಡ್ಯೂಪ್ಲಿಕೇಟ್ ವಸ್ತುಗಳನ್ನು ಮಾಡುವುದು, ಜಗ್ಗು ಅಂಡ್ ಗ್ಯಾಂಗ್ ಜೊತೆ ಸೇರಿ ಕೊನೆಗೆ ಡಮ್ಮಿ ಅಂಬಾರಿಯನ್ನು ಮಾಡಿಟ್ಟು ಮೈಸೂರು ದಸರಾ ಅಂಬರಿ ಕದಿಯುವ ಕಥೆ ಚಿತ್ರದಲ್ಲಿತ್ತು.

ಗಿರಿ ದಿನೇಶ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ದಿನಕರ್ 'ನವಗ್ರಹ' ಚಿತ್ರ ಮಾಡಲು ಮುಂದಾದಾಗ ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳನ್ನು ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ದಿನೇಶ್ ಪುತ್ರ ಗಿರಿ ತಂಡ ಸೇರಿದ್ದರು. ಶೆಟ್ಟಿ ಪಾತ್ರ ಅವರಿಗೆ ಚೆನ್ನಾಗಿ ಸೂಟ್ ಆಗಿತ್ತು. ಒಳ್ಳೆ ಕಾಮಿಡಿ ಟೈಮಿಂಗ್ ಇರುವ ನಟ ಆಗಿದ್ದರೂ ಗಿರಿ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ.

ಗಿರಿ ದಿನೇಶ್ ಪಾರ್ಥೀವ ಶರೀರವನ್ನು ಮನೆಯಲ್ಲೇ ಅಂತಿಮ ದರ್ಶನಕ್ಕೆ ಇಟ್ಟು ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.

More from Filmibeat

English summary
Darshan close aide actor Giri Dinesh passes away due to cardiac arrest
Read more about: actor sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X