»   » ಅಣ್ಣಾವ್ರ ಹಾಡಿಗೆ ಹೊಸ ಮೆರಗು ನೀಡಿದ ಮಲ್ನಾಡ್ ಸಿಸ್ಟರ್ಸ್

ಅಣ್ಣಾವ್ರ ಹಾಡಿಗೆ ಹೊಸ ಮೆರಗು ನೀಡಿದ ಮಲ್ನಾಡ್ ಸಿಸ್ಟರ್ಸ್

Posted By:
Subscribe to Filmibeat Kannada

ನಟ ಸಾರ್ವಭೌಮ ರಾಜಕುಮಾರ್ ಹುಟ್ಟಿದಹಬ್ಬಕ್ಕೆ ಎಲ್ಲರೂ ಒಂದೊಂದು ರೀತಿ ಕಾಣಿಕೆ ನೀಡಿದ್ರೆ ಮಲ್ನಾಡ್ ಸೋದರಿಯರು ಅಣ್ಣಾವ್ರ ಹಾಡನ್ನು ಹಾಡುವುದರ ಜೊತೆಗೆ ಒಂದು ವಿಶಿಷ್ಟ ನಾಟ್ಯವನ್ನೂ ಸೇರಿಸಿ ಹಳೆಯ ಹಾಡಿಗೆ ಹೊಸ ಮೆರುಗು ತಂದಿದ್ದಾರೆ. ಈ ವಿಡಿಯೋ ಮೆಲುಕು ನಿಮಗಾಗಿ ಇಲ್ಲಿದೆ.

ಕನ್ನಡ ಸಿನಿಮಾಗಳ ಹಿನ್ನೆಲೆ ಗಾಯನದಲ್ಲಿ ಹೆಸರು ಮಾಡಿರುವಂತಹ ಮಾನಸ ಹೊಳ್ಳ (ಅರ್ಚನಾ ರವಿ) ಅವರು ಮತ್ತು ಅವರ ಸೋದರಿ ಪ್ರಾರ್ಥನಾ ಅವರ ಸುಮಧುರ ಕಂಠದಲ್ಲಿ ಅಣ್ಣಾವ್ರ "ನೀ ಬಂದು ನಿಂತಾಗ" ಹಾಡನ್ನು ಇಲ್ಲಿ ಕೇಳಿ,ನೋಡಿ ಆನಂದಿಸಬಹುದು.

NAVAJEEVA is a musical video, dedicated to a legendary actor Dr.Rajkumar

ಈ ವಿಡಿಯೋದಲ್ಲಿ ಹಾಡಿಗೆ ತಕ್ಕ ಹೆಜ್ಜೆ ಹಾಕಿರುವ ಅಮೂಲ್ಯ ರವಿಕುಮಾರ್ ಅವರೇ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ವಿಶಿಷ್ಟ ವಿಡಿಯೋವನ್ನು ಮಹೇಶ್ ಗೌಡ ಅವರು ನಿರ್ದೇಶಿಸಿದ್ದಾರೆ. ವಿಡಿಯೋ ನೋಡಿ ಆನಂದಿಸಿ:

ಮೂಲ ಹಾಡು ಕಸ್ತೂರಿ ನಿವಾಸ ಚಿತ್ರದ್ದಾಗಿದ್ದು, ಪಿ ಸುಶೀಲಾ ಹಾಗೂ ಪಿ.ಬಿ ಶ್ರೀನಿವಾಸ್ ಹಾಡಿದ್ದಾರೆ. ಆರ್ ಎನ್ ಜಯಗೋಪಾಲ್ ಅವರ ಗೀತಾ ಸಾಹಿತ್ಯಕ್ಕೆ ಜಿಕೆ ವೆಂಕಟೇಶ್ ಅವರ ರಾಗ ಸಂಯೋಜನೆಯಿದೆ.

English summary
NAVAJEEVA is a musical video, dedicated to a legendary actor Dr.Rajkumar and to all music lovers. This video directed by Mahesh Gowda, features Malnad sisters Manasa Holla, Prathana Kiran and Amulya Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada