twitter
    For Quick Alerts
    ALLOW NOTIFICATIONS  
    For Daily Alerts

    'ಜೋಗಿ', 'ಮುಂಗಾರು ಮಳೆ'ಗೆ ಒಂದೇ ಚಿತ್ರಮಂದಿರದಲ್ಲಿ ಅರ್ಧ ಕೋಟಿ ಕಲೆಕ್ಷನ್!

    |

    ಸಿನಿಮಾಗಳು ನಿರ್ಮಾಣವಾಗುವ ಮುನ್ನವೇ ಕಲೆಕ್ಷನ್ ಎಷ್ಟಾಗುತ್ತದೆಂದು ಲೆಕ್ಕಾಚಾರ ಹಾಕಲಾಗುತ್ತದೆ ಈಗ. ಎ ಸೆಂಟರ್ ಇಷ್ಟು, ಬಿ ಸೆಂಟರ್ ಇಷ್ಟು, ಮಲ್ಟಿಫ್ಲೆಕ್ಸ್ ಇಷ್ಟು ಲೆಕ್ಕಾಚಾರ ಹೀಗೆ ಸಾಗುತ್ತದೆ. ಅದರಲ್ಲಿಯೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಶೋ ಹೆಚ್ಚಿಸಿ ಒಂದೇ ವಾರದಲ್ಲಿ ಸಿನಿಮಾಕ್ಕೆ ಹೂಡಿದ ಅರ್ಧ ಬಂಡವಾಳ ಹಿಂಪಡೆಯುತ್ತಾರೆ ಈಗಿನ ಬಹುತೇಕ ನಿರ್ಮಾಪಕರು.

    Recommended Video

    ಒಂದು ಥಿಯೇಟರ್ ತಿಂಗಳಿಗೆ ಮಾಡುವ ಲಾಭ ಎಷ್ಟು ಗೊತ್ತಾ..?

    ಮಲ್ಟಿಫ್ಲೆಕ್ಸ್‌ಗಳು ಬಂದ ಮೇಲೆ ನಿರ್ಮಾಪಕರಿಗೆ, ವಿತರಕರಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮೇಲೆ ತುಸು ಅಸಡ್ಡೆ. ಕಲೆಕ್ಷನ್ ಕಡಿಮೆ ಆದರೆ ರಿಸ್ಕ್ ಹೆಚ್ಚು. ಚಿತ್ರಮಂದಿರ ಹಾಗೂ ನಿರ್ಮಾಪಕರ ನಡುವಿನ ಹಣ ಹಂಚಿಕೆ ವಿವಾದವಂತೂ ದಶಕಗಳಿಂದ ಇರುವಂಥಹದ್ದೆ. ನಿರ್ಮಾಪಕ-ಚಿತ್ರಮಂದಿರ ಮಾಲೀಕರದ್ದು ಹಾವು-ಮುಂಗುಸಿ ಸಂಬಂಧ.

    ಆದರೆ ಕೆಲವೇ ವರ್ಷಗಳ ಹಿಂದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನಿರ್ಮಾಪಕ, ವಿತರಕರ ಪಾಲಿಗೆ ಚಿನ್ನದ ಗಣಿಗಳಾಗಿದ್ದವು. ಅದರಲ್ಲಿಯೂ ಬೆಂಗಳೂರಿನ ಕೆಲವು ಮುಖ್ಯ ಚಿತ್ರಮಂದಿರಗಳ ಮುಂದೆ ನಿರ್ಮಾಪಕರು ಸಾಲು ಕಟ್ಟಿ ನಿಲ್ಲುತ್ತಿದ್ದರು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಿಸಲು. ಬೆಂಗಳೂರಿನ ನಾಲ್ಕೈದು ಮುಖ್ಯ ಥಿಯೇಟರ್‌ಗಳು ಸಿಕ್ಕರೆ ಸಾಕು ಸಿನಿಮಾದ ಅರ್ಧ ಬಂಡವಾಳ ಅಲ್ಲಿಯೇ ವಾಪಸ್ಸಾಗುತ್ತಿತ್ತು. ಇಡೀಯ ರಾಜ್ಯದ ಚಿತ್ರಮಂದಿರಗಳಿಂದ ಆಗುವ ಕಲೆಕ್ಷನ್ ಬೆಂಗಳೂರಿನ ಕೆಲವು ಚಿತ್ರಮಂದಿರಗಳಿಂದ ಆಗುವ ಕಲೆಕ್ಷನ್‌ಗೆ ಸಮವಾದ ಉದಾಹರಣೆಯೂ ಇವೆ. ಅಂಥಹಾ ಒಂದು ಮುಖ್ಯ ಚಿತ್ರಮಂದಿರ ಬೆಂಗಳೂರಿನ ನವರಂಗ್ ಚಿತ್ರಮಂದಿರ.

    'ಕನ್ನಡ ಫಿಲ್ಮಿಬೀಟ್‌'ನ 'ನಾನು ನನ್ನ ಥಿಯೇಟರ್' ವಿಡಿಯೋ ಸರಣಿಗೆ ವಿಶೇಷ ಸಂದರ್ಶನ ನೀಡಿರುವ ನವರಂಗ್ ಚಿತ್ರಮಂದಿರ ಮಾಲೀಕ ಕೆಸಿಎನ್ ಮೋಹನ್ ತಮ್ಮ ಚಿತ್ರಮಂದಿರದ ಇತಿಹಾಸ, ಚಿತ್ರಮಂದಿರ ಬೆಳೆದು ಬಂದ ಬಗೆಯ ಬಗ್ಗೆ ಮಾತನಾಡುತ್ತಾ ಒಂದೊಳ್ಳೆ ಸಿನಿಮಾ ಬಂದರೆ ಚಿತ್ರಮಂದಿರಗಳು ನಿರ್ಮಾಪಕರಿಗೆ ಎಷ್ಟು ಲಾಭ ಮಾಡಿಕೊಡಬಲ್ಲರು ಎಂಬುದನ್ನು ಉದಾಹರಣೆಗಳ ಸಹಿತವಾಗಿ ವಿವರಿಸಿದರು.

    ''ಮುಂಗಾರು ಮಳೆ, ಜೋಗಿಗೆ ಅರ್ಧ ಕೋಟಿ ಕೊಟ್ಟಿದ್ದೆವು''

    ''ಮುಂಗಾರು ಮಳೆ, ಜೋಗಿಗೆ ಅರ್ಧ ಕೋಟಿ ಕೊಟ್ಟಿದ್ದೆವು''

    ''ನಮ್ಮ ನವರಂಗ್ ಚಿತ್ರಮಂದಿರದಲ್ಲಿ 'ಮುಂಗಾರು ಮಳೆ' ಸಿನಿಮಾದ ಎರಡು ಶೋ ಮಾತ್ರವೇ ಹಾಕಿದ್ದೆವು. ಆದರೆ ಸಿನಿಮಾ 25 ವಾರಗಳ ಕಾಲ ಸಿನಿಮಾ ಓಡಿಸಿದೆವು. ಸಿನಿಮಾದ ನಿರ್ಮಾಪಕರಿಗೆ ನಮ್ಮ ಒಂದು ಚಿತ್ರಮಂದಿರದಿಂದ 52 ಲಕ್ಷ ಹಣ ಆಗಿನ ಕಾಲದಲ್ಲೇ ನಾವು ಕೊಟ್ಟಿದ್ದೆವು. ಶಿವರಾಜ್ ಕುಮಾರ್ ನಟಿಸಿದ್ದ 'ಜೋಗಿ' ಸಿನಿಮಾ ಸಹ ಅದ್ಭುತವಾಗಿ ಪ್ರದರ್ಶನ ಕಂಡಿತ್ತು ಆ ಸಿನಿಮಾಕ್ಕೂ ಸುಮಾರು 50 ಲಕ್ಷ ಲಾಭವನ್ನು ನಿರ್ಮಾಪಕರಿಗೆ ನಮ್ಮ ಒಂದು ಚಿತ್ರಮಂದಿರದಿಂದಲೇ ನೀಡಿದೆವು. ಈಗಿನ ಕಾಲದಲ್ಲಿ ಅಂಥಹಾ ಒಳ್ಳೆಯ ಸಿನಿಮಾಗಳು ಬಂದರೆ ಒಂದು ಕೋಟಿ ಲಾಭ ನಿರ್ಮಾಪಕರಿಗೆ ಕೊಡಬಲ್ಲೆವು'' ಎಂದಿದ್ದಾರೆ ಕೆಸಿಎನ್ ಮೋಹನ್.

    ಒಂದು ವಾರದಲ್ಲಿ ಲಕ್ಷಾಂತರ ಕಲೆಕ್ಷನ್: ಮೋಹನ್

    ಒಂದು ವಾರದಲ್ಲಿ ಲಕ್ಷಾಂತರ ಕಲೆಕ್ಷನ್: ಮೋಹನ್

    ''ಒಳ್ಳೆಯ ಸಿನಿಮಾ ಬಂದರೆ ಚಿತ್ರಮಂದಿರಗಳು ನಿರ್ಮಾಪಕರಿಗೆ ಬಹಳ ದೊಡ್ಡ ಲಾಭ ಮಾಡಿಕೊಡುತ್ತವೆ. 'ರಾಬರ್ಟ್', 'ಪೊಗರು' ಸಿನಿಮಾಗಳನ್ನು ನಮ್ಮಲ್ಲಿ ಬಿಡುಗಡೆ ಮಾಡಿದ್ದೆವು ಆ ಸಿನಿಮಾಗಳು ಒಂದು ವಾರದಲ್ಲಿ 28-30 ಲಕ್ಷ ಕಲೆಕ್ಷನ್ ಮಾಡಿ ಕೊಟ್ಟವು. ವಿತರಕ ಶೇರ್ ಸುಮಾರು 23-24 ಲಕ್ಷ ಹೋಗಿತ್ತು. ಮೊದಲಿನ ಹಾಗೆ ಈಗೆಲ್ಲ ತಿಂಗಳಾನುಗಟ್ಟಲೆ ಸಿನಿಮಾಗಳನ್ನು ಓಡಿಸುವುದಿಲ್ಲ ಒಂದು ವಾರದಲ್ಲಿಯೇ ಹಾಕಿದ್ದ ಬಂಡವಾಳ ತೆಗೆಯಲು ನಿರ್ಮಾಪಕರು ಯೋಜನೆ ಹಾಕಿರ್ತಾರೆ'' ಎಂದಿದ್ದಾರೆ ಮೋಹನ್.

    ಮೊದಲಿನ ಹಾಗೆ ಚಿತ್ರಮಂದಿರ ನಡೆಸಲಾಗದು: ಕೆಸಿಎನ್ ಮೋಹನ್

    ಮೊದಲಿನ ಹಾಗೆ ಚಿತ್ರಮಂದಿರ ನಡೆಸಲಾಗದು: ಕೆಸಿಎನ್ ಮೋಹನ್

    ''ಮೊದಲಿನ ಹಾಗೆ ಈಗ ಚಿತ್ರಮಂದಿರ ನಡೆಸಲಾಗುವುದಿಲ್ಲ. ಎಲ್ಲಾ ಚೆನ್ನಾಗಿ ನಡೆದರೆ ಮಾತ್ರವೇ ಚಿತ್ರಮಂದಿರ ಮಾಲೀಕನಿಗೆ ಲಾಭ. ಈಗ ವಿತರಕರ ಮಾರುಕಟ್ಟೆ ಆಗಿಬಿಟ್ಟಿದೆ. ಅವರು ಹೇಳಿದಂತೆಯೇ ಸಿನಿಮಾ ಬಿಡುಗಡೆ ಆಗುತ್ತದೆ ರೇಟ್ ಫಿಕ್ಸ್ ಆಗುತ್ತದೆ. ಜನರೂ ಸಹ ಈಗ ಬದಲಾಗಿದ್ದಾರೆ. ಅವರಿಗೆ ಮನೊರಂಜನೆಗೆ ಹಲವು ದಾರಿಗಳು ಸಿಕ್ಕಿವೆ. ಸಿಂಗಲ್ ಸ್ಕ್ರೀನ್ ಮಾಲೀಕರು ಕೇವಲ ಫ್ಯಾಷನ್‌ಗಾಗಿ ಚಿತ್ರಮಂದಿರ ನಡೆಸಬೇಕಷ್ಟೆ. ಈಗಂತೂ ಕೊರೊನಾ ಬಂದಮೇಲೆ ಹಲವು ಚಿತ್ರಮಂದಿರಗಳನ್ನು ನಡೆಸುವುದು ಇನ್ನೂ ಕಷ್ಟವಾಗಿದೆ'' ಎಂದಿದ್ದಾರೆ ಮೋಹನ್.

    ಲಾಭ ಹಂಚಿಕೆ ವಿಚಾರದಲ್ಲಿ ಸಮಸ್ಯೆ

    ಲಾಭ ಹಂಚಿಕೆ ವಿಚಾರದಲ್ಲಿ ಸಮಸ್ಯೆ

    ನಿರ್ಮಾಪಕರು ಚಿತ್ರಮಂದಿರಗಳ ಮಾಲೀಕರ ನಡುವೆ ಸದಾ ಕಿರಿ-ಕಿರಿ ಇದ್ದದ್ದೆ. ಮೊದಲ ವಾರ ಬಾಡಿಗೆ ಲೆಕ್ಕದಲ್ಲಿ ಮಾತನಾಡುತ್ತಾರೆ. ಎರಡನೇ ವಾರಕ್ಕೆ ಸಿನಿಮಾದ ಕಲೆಕ್ಷನ್ ಕಡಿಮೆ ಆದಾಗ ಷೇರು ಲೆಕ್ಕಾಚಾರದಲ್ಲಿ ಹಣ ಕೊಡ್ತೀವಿ ಅಂತಾರೆ ಇದು ಸರಿಯಾದ ಕ್ರಮ ಅಲ್ಲ. ಒಂದೋ ಷೇರ್ ಲೆಕ್ಕಾಚಾರ ಕೊಡಿ ಇಲ್ಲವಾದರೆ ಸಂಪೂರ್ಣವಾಗಿ ಬಾಡಿಗೆ ಲೆಕ್ಕಾಚಾರದಲ್ಲಿ ಕೊಡಿ. ಅವರ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಮಾಡಿಕೊಂಡು ಚಿತ್ರಮಂದಿರಗಳ ಮಾಲೀಕರಿಗೆ ಲಾಸ್ ಮಾಡುತ್ತಿದ್ದಾರೆ. ಇದು ಬಹಳ ದಿನಗಳಿಂದ ಸಮಸ್ಯೆ ನಡೆಯುತ್ತಲೇ ಇದೆ. ಇದಕ್ಕೆ ಒಂದು ಸ್ಪಷ್ಟ ಪರಿಷ್ಕರಣೆ ಈವರೆಗೆ ಸಿಕ್ಕಿಲ್ಲ ಎಂದು ಬೇಸರದಿಂದ ನುಡಿದರು ಮೋಹನ್.

    English summary
    Navarang theater owner KCN Mohan said we given half crore profit for each Mungaru Male and Jogi movie producers.
    Wednesday, August 4, 2021, 13:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X