Don't Miss!
- News
ಜುಲೈ 18ರಿಂದ ನೂತರ ಜಿಎಸ್ಟಿ ದರ ಜಾರಿ: ಯಾವೆಲ್ಲಾ ದುಬಾರಿ ತಿಳಿಯರಿ
- Sports
ICC T20 Ranking: ವಿರಾಟ್ ಕೊಹ್ಲಿಯ ಸುದೀರ್ಘ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಮ್
- Technology
ಈ ವರ್ಷದ ಅಂತ್ಯದೊಳಗೆ ಲಾಂಚ್ ಆಗಲಿರುವ ಪ್ರಮುಖ ಫೋನ್ಗಳು!
- Lifestyle
ನಿಮ್ಮ ಹುಬ್ಬಿನ ಅಂದ ಕೆಡಿಸುವ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
- Automobiles
ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!
- Finance
ಷೇರು ಪೇಟೆ ಮತ್ತೆ ಚೇತರಿಕೆ: ಬ್ರಿಟಾನಿಯಾ ಸ್ಟಾಕ್ಗೆ ಭಾರೀ ಲಾಭ
- Education
CBSE CISCE Result 2022 : ಬೋರ್ಡ್ ಪರೀಕ್ಷೆಗಳ ಫಲಿತಾಂಶ ಜು.15ರೊಳಗೆ ಪ್ರಕಟ ನಿರೀಕ್ಷೆ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
'ಧರಣಿ ಮಂಡಲ ಮಧ್ಯದೊಳಗೆ' ಬಾಕ್ಸರ್ ಕಥೆ: ತಿರುವುಗಳೇ ಜೀವಾಳ
ಸ್ಯಾಂಡಲ್‌ವುಡ್‌ನಲ್ಲಿ ಬಾಲ್ಯವನ್ನು ನೆನಪಿಸುವ ಸಿನಿಮಾವೊಂದು ನಿರ್ಮಾಣ ಆಗಿದೆ. ಅದುವೇ 'ಧರಣಿ ಮಂಡಲ ಮಧ್ಯದೊಳಗೆ'. ಈ ಟೈಟಲ್ ಹೇಳಿದರೆ, ನಮಗೆ ಶಾಲೆಯಲ್ಲಿ ಓದಿದ ಪುಣ್ಯಕೋಟಿಯ ಪದ್ಯ ನೆನಪಿಗೆ ಬರುತ್ತೆ. ಇದೀಗ ಆದೇ ಟೈಟಲ್ ಇಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಮಾಡಿದ್ದು, ಅದು ಬೇಜಾನ್ ಸದ್ದು ಮಾಡುತ್ತಿದೆ.
ಅಂದ್ಹಾಗೆ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗೂ ಒಂದು ಚಿಕ್ಕ ಸಂಬಂಧವಿದೆ. ಈ ಸಿನಿಮಾ ಆರಂಭದಲ್ಲಿ ಅಪ್ಪು ಅಭಯಹಸ್ತದಿಂದ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿತ್ತು. ಅಂದಿನಿಂದಲೇ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇತ್ತೀಚೆಗಷ್ಟೆ ಬಿಡುಗಡೆಯಾದ ಹಾಡು ಸಿನಿಪ್ರೇಮಿಗಳ ಮನ ಗೆದ್ದಿದೆ.
'ಗುಳ್ಟು' ಖ್ಯಾತಿಯ ನವೀನ್ ಶಂಕರ್ ನಾಯಕ
'ಧರಣಿ ಮಂಡಲ ಮಧ್ಯದೊಳಗೆ' ಈ ಚಿತ್ರಕ್ಕೆ 'ಗುಳ್ಟು' ಖ್ಯಾತಿಯ ನವೀನ್ ಶಂಕರ್ ಈ ಸಿನಿಮಾದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಾಗೇ ಸ್ಯಾಂಡಲ್‌ವುಡ್ ಶಾಕುಂತಲೆ ಐಶಾನಿ ಶೆಟ್ಟಿ ಲೀಡ್ ರೋಲ್‌ನಲ್ಲಿದ್ದಾರೆ. ಇವರೊಂದಿಗೆ ಯಶ್ ಶೆಟ್ಟಿ ,ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್ ಓಂಕಾರ್,ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭಾವಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ಶಿಕಾರಿಪುರ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಅವರೊಂದಿಗೆ ಕೆಲಸ ಮಾಡಿರುವ ಅನುಭವ ಶ್ರೀಧರ್ ಶಿಕಾರಿಪುರ ಅವರಿಗಿದೆ.
" ಈ ಸಿನಿಮಾದ ಕಥೆ ಇಂಟ್ರೆಸ್ಟಿಂಗ್ ಆಗಿದೆ. ನನ್ನದು ಆದಿ ಎಂಬ ಪಾತ್ರ. ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡಬೇಕೆಂಬ ಕನಸು ಇರುತ್ತೆ. ಈ ಕನಸನ್ನು ನನಸು ಮಾಡಿಕೊಳ್ಳಲು ಹೊರಟ ನಾಯಕನಿಗೆ ಒಂದು ಘಟನೆಯಿಂದ ಕಲೆವು ಪಾತ್ರಗಳು ಅವನ ಜೀವನದಲ್ಲಿ ಎದುರಾಗುತ್ತೆ. ಆ ಪಾತ್ರಗಳು ಆದಿ ಜೀವನದಲ್ಲಿ ಹೇಗೆ ತಿರಿವು ಪಡೆದುಕೊಳ್ಳುತ್ತೆ, ಅನ್ನೋದು ಸಿನಿಮಾ ಕಥೆ." ಎನ್ನುತ್ತಾರೆ ನವೀನ್ ಶಂಕರ್.
ಬೋಲ್ಡ್ ಪಾತ್ರದಲ್ಲಿ ಮಿಂಚಿದ ಐಶಾನಿ ಶೆಟ್ಟಿ
ಸಿನಿಮಾದ ನಾಯಕಿ ಐಶಾನಿ ಶೆಟ್ಟಿ ಕೂಡ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ. "ನಾನು ಇಲ್ಲಿವರೆಗೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಬೋಲ್ಡ್ ಲುಕ್‌ನಲ್ಲಿ ನಟಿಸಿದ್ದೇನೆ. ಈ ರೀತಿ ಪಾತ್ರ ಮಾಡೋದು ನನಗೂ ಚಾಲೆಂಜ್." ಎಂದು ಐಶಾನಿ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಂದ್ಹಾಗೆ ಪುಣ್ಯ ಕೋಟಿ ಕಥೆಗೂ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. 'ಧರಣಿ ಮಂಡಲ ಮಧ್ಯದೊಳಗೆ' ನಮ್ಮ ನಿಮ್ಮೆಲ್ಲರ ಕಾಮನ್ ಕತೆ ಎನ್ನುತ್ತಾರೆ ನಿರ್ದೇಶಕ ಶ್ರೀಧರ್ ಶಿಕಾರಿಪುರ.
'ಧರಣಿ ಮಂಡಲ ಮಧ್ಯದೊಳಗೆ' ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ. ಈ ಚಿತ್ರವನ್ನು ಓಂಕಾರ್ ಎಂಬುವರು ನಿರ್ಮಿಸಿದ್ದಾರೆ. ವೀರೇಂದ್ರ ಕಾಂಚನ್, ಕೆ ಗೌತಮಿ ರೆಡ್ಡಿ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಅವರ ಸಂಗೀತ ಉಜ್ವಲ್ ಚಂದ್ರ ಅವರ ಸಂಕಲನವಿದೆ.