»   » 3 ಅನ್ನುವ ಈ ಹೊಸ ನಟನ ಅಡ್ಡ ಹೆಸರು ನಖರಾ ನವೀನ !

3 ಅನ್ನುವ ಈ ಹೊಸ ನಟನ ಅಡ್ಡ ಹೆಸರು ನಖರಾ ನವೀನ !

Posted By: Super
Subscribe to Filmibeat Kannada

ಉಪೇಂದ್ರ ಹಾಗೂ ಸುದೀಪ್‌ ನಂತರದ ಸ್ಟಾರ್‌ ನಾನೇ ಎಂದು ಬೀಗುತ್ತಿರುವ ಮುದ್ದು ಮುಖದ ನಟ ನವೀನ್‌ ಮಯೂರ್‌ಗೆ ಸ್ಯಾಂಡಲ್‌ವುಡ್‌ ಕೊಟ್ಟಿರುವ ಹೊಸ ಹೆಸರು ನಖರಾ ನವೀನ.

ಸ್ಪರ್ಶ ಚಿತ್ರದಲ್ಲಿ ಸುದೀಪ್‌ ಪರಮ ಗೆಳೆಯನಾಗಿ ಪರಿಚಿತನಾದ ಬೆಂಗಳೂರು ಮಹಾವೀರ್‌ ಜೈನ್‌ ಕಾಲೇಜಿನ ಈ ಹುಡುಗ ಸ್ಫುರದ್ರೂಪಿ. ಎತ್ತರ ನಿಲುವಿನ ಈತ ಕನ್ನಡವನ್ನು ಸ್ಪಷ್ಟವಾಗಿ ಮಾತಾಡಬಲ್ಲ. ಈ ಕಾರಣಕ್ಕೇ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. 'ನೀಲಾ"ದಲ್ಲೂ ನಾಗಾಭರಣ ಸುಮಾರಾದ ಪಾತ್ರ ಕೊಟ್ಟರು. ಈಗ ಈತ ಲವ್‌ಲವಿಕೆ ಹಾಗೂ ಪೂರ್ವಾಪರ ಚಿತ್ರಗಳ ಫುಲ್‌ ಟೈಂ ಹೀರೋ.

ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್‌ ಅಂಥವರಿಗೂ ಬೆವರು ಕೀಳಿಸಿರುವ ಈತ ತನ್ನನ್ನು ತಾನೇ ಹೃತಿಕ್‌ ಅಂತ ಭಾವಿಸಿದ್ದಾನೆ ಅನ್ನುವುದು ಈತನೊಟ್ಟಿಗೆ ಕೆಲಸ ಮಾಡುತ್ತಿರುವವರ ದೂರು. ಈತನ ಉಡಾಫೆ ಹಾಗೂ ಹಠಮಾರಿತನವೇ ಪೂರ್ವಾಪರ ಚಿತ್ರದ ವಿಳಂಬಕ್ಕೆ ಕಾರಣ ಎನ್ನುವ ಮಾತೂ ಉಂಟು. ನಾನೇ ರಾಜಕುಮಾರ ಅಂತ ಬೀಗುವ ಈತನ ಮಾತುಗಳಿಗೆ ಬ್ರೇಕ್‌ ಹಾಕುವ ಸಲುವಾಗಿ, ಮೊನ್ನೆ ತಾನೆ ಸುದೀಪ್‌ ಬುದ್ಧಿ ಮಾತು ಹೇಳಿದಾರಂತೆ.

ಸ್ಯಾಂಡಲ್‌ವುಡ್‌ ಹೇಳುತ್ತಿರುವಂತೆ ಈತನ ನಖರಾಗಳ ನಮೂನೆಗಳು....

  • ನನಗೆ ಹೊಸ ಡಿಸೈನಿನ ನೈಕೀ ಶೂಸೇ ಬೇಕು.
  • ನನಗೆ ಈಗ ಮೂಡ್‌ ಇಲ್ಲ. ಸಾರಿ ಐ ಕಾಂಟ್‌ ಡೂ ಇಟ್‌ !
  • ನಾಯಕಿಗೆ ಮುತ್ತು ಕೊಡಲು ನಾ ಒಲ್ಲೆ.
  • ಮಳೆಯಲ್ಲಿ ನೆನೆಯುವ ಸೀನ್‌ ಬೇಡ.

ಅಂದಹಾಗೆ, ಕೋಡ್ಲು ರಾಮಕೃಷ್ಣ ಹೊಸ ಚಿತ್ರ ನಿರ್ಮಿಸುತ್ತಿದ್ದು, ಅದರ ನಾಯಕರ ಪೈಕಿ ನವೀನ್‌ ಕೂಡ ಒಬ್ಬ. ಕೋಡ್ಲುವನ್ನು ದೇವರೇ ಕಾಪಾಡಲಿ.

English summary
Nakhra Naveen : New hero of Sandalwood !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada