Just In
Don't Miss!
- News
ಹಕ್ಕಿ ಜ್ವರ; ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ ಐಪಿಒ ಜ. 21ರಿಂದ 25
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಸತ್ ಪ್ರವೇಶಿಸಿದ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಚಿತ್ರದ ನಾಯಕಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿನಯಿಸಿದ್ದ ನಟಿಯೊಬ್ಬರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಸಂಸತ್ ಪ್ರವೇಶಿಸಿದ್ದಾರೆ. ದರ್ಶನ್ ಜೊತೆ ಅಭಿನಯಿಸಿದ್ದ ನಟಿ ನವನೀತ್ ಕೌರ್ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿದ್ದಾರೆ.
ಹೌದು, ದರ್ಶನ್ ಜೊತೆ ಅಭಿನಯಿಸುವ ಮೂಲಕ ಕನ್ನಡಲ್ಲಿ ಒಂದೆ ಒಂದು ಸಿನಿಮಾ ಮಾಡಿದ್ದ ನವನೀತ್ ಕೌರ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ಎರಡು ಬಾರಿ ಎಂಪಿಯಾಗಿದ್ದ ಶಿವಸೇನೆಯ ಆನಂದ್ ರಾವ್ ಅವರನ್ನು ಸೋಲಿಸಿ ಗೆದ್ದು ಬೀಗಿದ್ದಾರೆ ನವನೀತ್.
'ರಾಬರ್ಟ್' ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್?
ನವನೀತ್ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಮಿಂಚಿದ್ದಾರೆ. ಯುವ ಸ್ವಾಭಿಮಾನಿ ಪಕ್ಷದಿಂದ ಸ್ಪರ್ಧಿಸಿದ್ದ ನವನೀತ್ ಅಮರಾವತಿ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.ಮುಂದೆ ಓದಿ..

ದರ್ಶನ್ ಸಿನಿಮಾದ ನಾಯಕಿ
ನವನೀತ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದರ್ಶನ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 2003ರಲ್ಲಿ ರಿಲೀಸ್ ಆಗಿದ್ದ ದರ್ಶನ್ ಸಿನಿಮಾ ನವನೀತ್ ಅಭಿನಯದ ಮೊದಲ ಸಿನಿಮಾ. ದರ್ಶನ್ ಸಿನಿಮಾ ಮೂಲಕವೆ ನವನೀತ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ರಮೇಶ್ ಕಿಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿತ್ತು.
ಬೆನ್ನಮೇಲೆ ದರ್ಶನ್ ಟ್ಯಾಟು ಹಾಕಿಕೊಂಡ ಅಭಿಮಾನಿ

ಮಹಾರಾಷ್ಟ್ರ ಮೂಲದ ನಟಿ
ನಟಿ ನವನೀತ್ ಮೂಲತಹ ಮಹಾರಾಷ್ಟ್ರದವರು. ತಂದೆ ಆರ್ಮಿ ಅಧಿಕಾರಿ. ನವನೀತ್ ಓದಿದ್ದೆಲ್ಲ ಬೆಂಗಳೂರಿನಲ್ಲಿ. ಪಿಯುಸಿ ಮುಗಿಸಿರುವ ನವನೀತ್ ನಂತರ ವಿದ್ಯಾಭ್ಯಾಸಕ್ಕೆ ಗುಬ್ ಬೈ ಹೇಳಿ ಮಾಡಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. ಆ ನಂತರ ದರ್ಶನ್ ಅಭಿನಯದ 'ದರ್ಶನ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚಿಂಗ್
ಉತ್ತರ ಭಾರತದವರಾದ್ರು, ನವನೀತ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿಗಳಿಸಿದವರು. ಸ್ಯಾಂಡಲ್ ವುಡ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನವನೀತ್ ಆ ನಂತರ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲು ಮಿಂಚಿದ್ದಾರೆ. 20ಕ್ಕು ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ನವನೀತ್.
ಎಂಪಿ ಆದ ಸುಮಲತಾ ಅವರನ್ನ ದರ್ಶನ್-ಯಶ್ ಏನಂತ ಕರೀತಾರೆ?

2011ರಲ್ಲಿ ಮದುವೆಯಾದ ನವನೀತ್
ನವನೀತ್ ಕೊನೆಯದಾಗಿ ಪಂಜಾಬಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ನಂತರ ಸಿನಿಮಾದಿಂದ ಬ್ರೇಕ್ ಪಡೆದ ನಟಿ 2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮಹಾರಾಷ್ಟ್ರದ ಅಮರಾವತಿಯ ರವಿ ರಾಣಾ ಜೊತೆ ಸಪ್ತಪದಿ ತುಳಿದ ನವನೀತ್ ನಂತರ ಸಿನಿಮಾರಂಗದಿಂದ ದೂರ ಸರಿಯುತ್ತಾರೆ. ಪತಿ ರವಿ ರಾಣಾ ರಾಜಕೀಯದವರು. ಅಮರಾವತಿಯ ಬಡ್ನೇರಾ ಕ್ಷೇತ್ರದ ಸ್ವತಂತ್ರ ಎಂ ಎಲ್ ಎ ಅಭ್ಯರ್ಥಿ. ಪತಿ ರಾಜಕೀಯದಲ್ಲಿ ಇದ್ದ ಕಾರಣ ನವನೀತ್ ಅವರಿಗೆ ರಾಜಕೀಯ ಬಗ್ಗೆ ತಿಳಿದುಕೊಂಡಿದ್ದರು.

ಯುವ ಸ್ವಾಭಿಮಾನಿ ಪಕ್ಷದಿಂದ ಸ್ಪರ್ಧೆ
ನವನೀತ್ ಯುವ ಸ್ವಾಭಿಮಾನಿ ಪಕ್ಷದಿಂದ ನಿಂತು ಗೆಲುವು ಸಾಧಿಸಿದ್ದಾರೆ. ಕಳೆದ ಲೋಕಸಭಾ ಚುನಾಣೆಯಲ್ಲಿ ಸ್ಪರ್ಧಿಸಿ ಬರೋಬ್ಬರಿ 1.37 ಲಕ್ಷಮತಗಳ ಅಂತರದಿಂದ ಸೋಲನ್ನು ಕಂಡಿದ್ದರು ಆದ್ರೆ ಈ ಬಾರಿ ಅಚ್ಚರಿ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಎಂ ಪಿ ಆಗಿದ್ದ ಶಿವನೇಸಾ ಆನಂದ್ ರಾವ್ ಅವರನ್ನು ಸೋಲಿಸಿ ನವನೀತ್ ಸಂಸತ್ ಪ್ರವೇಶಿಸಿದ್ದಾರೆ.