twitter
    For Quick Alerts
    ALLOW NOTIFICATIONS  
    For Daily Alerts

    ತಾತ್ಕಾಲಿಕವಾಗಿ ಪ್ರದರ್ಶನ ನಿಲ್ಲಿಸಿದ 'ನವರಂಗ್' ಚಿತ್ರಮಂದಿರ

    |

    Recommended Video

    ಪ್ರದರ್ಶನ ನಿಲ್ಲಿಸಿದ 'ನವರಂಗ್' ಚಿತ್ರಮಂದಿರ | FILMIBEAT KANANDA

    ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರಗಳು ಒಂದೊಂದೆ ಮೂಲೆಗೆ ಸೇರುತ್ತಿದೆ. ಅದರಲ್ಲಿ ಕೆಲವು ಶಾಶ್ವತವಾಗಿ ಸ್ತಬ್ದವಾದರೆ, ಇನ್ನು ಕೆಲವು ಆಧುನಿಕರಣಗೊಂಡು ಹೊಸ ರೂಪ ಪಡೆದು ಪುನರ್ ಚಾಲನೆ ಬಂದಿದೆ.

    ಕೆಜಿ ರಸ್ತೆಯಲ್ಲಿದ್ದ ಮೆಜೆಸ್ಟಿಕ್, ಸಾಗರ್, ಕಲ್ಪನಾ, ಕೈಲಾಶ್, ಕೆಂಪೆಗೌಡ, ಕಪಾಲಿ ಅಂತಹ ಚಿತ್ರಮಂದಿರಗಳು ಕ್ಲೋಸ್ ಆಗಿದೆ. ಇದೀಗ, ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಚಿತ್ರಮಂದಿರ ಪ್ರದರ್ಶನವನ್ನ ಸ್ಥಗಿತಗೊಳಿಸಿದೆ.

    ಮೆಜೆಸ್ಟಿಕ್ನಲ್ಲಿರುವ 'ಕಪಾಲಿ' ಚಿತ್ರಮಂದಿರ ಕ್ಲೋಸ್!ಮೆಜೆಸ್ಟಿಕ್ನಲ್ಲಿರುವ 'ಕಪಾಲಿ' ಚಿತ್ರಮಂದಿರ ಕ್ಲೋಸ್!

    ಹೌದು, ರಾಜಾಜಿನಗರದ ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ 'ನವರಂಗ್' ಚಿತ್ರಮಂದಿರ ಪ್ರದರ್ಶನ ನಿಲ್ಲಿಸಿದೆ. ತಾತ್ಕಾಲಿಕವಾಗಿ ಥಿಯೇಟರ್ ಮುಚ್ಚಿರುವ ಮಾಲಿಕ ಕೆಸಿಎನ್ ಮೋಹನ್ ಅವರು, ಹೊಸದಾಗಿ ನವೀಕರಣ ಮಾಡಿ ಆರಂಭಿಸಲಿದ್ದಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರವಾಗಿದ್ದ ನವರಂಗ್ ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ ಸಿದ್ಧವಾಗಲಿ ಶೀಘ್ರದಲ್ಲಿ ರೀ-ಓಪನ್ ಆಗಲಿದೆ.

    Navrang Film Theater Stopped Show

    ಎಂಜಿ ರಸ್ತೆಯಲ್ಲಿದ್ದ ಶಂಕರ್ ನಾಗ್ ಥಿಯೇಟರ್ ಕ್ಲೋಸ್.!ಎಂಜಿ ರಸ್ತೆಯಲ್ಲಿದ್ದ ಶಂಕರ್ ನಾಗ್ ಥಿಯೇಟರ್ ಕ್ಲೋಸ್.!

    ಡಾ ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್ ಅವರ ಬಹುತೇಕ ಚಿತ್ರಗಳ ಇಲ್ಲಿ ಪ್ರದರ್ಶನ ಕಂಡಿದೆ. ಯೋಗರಾಜ್ ಭಟ್ ಮತ್ತು ಗಣೇಶ್ ಅಭಿನಯದ 'ಮುಂಗಾರುಮಳೆ' ಸಿನಿಮಾ 25 ವಾರ ಪ್ರದರ್ಶನ ಕಂಡಿದ್ದು ಇದೇ ಚಿತ್ರಮಂದಿರದಲ್ಲಿ.

    ಡಾ ರಾಜ್ ಕುಮಾರ್ ಅಭಿನಯಿಸಿದ್ದ 'ವೀರಕೇಸರಿ' ಸಿನಿಮಾ ಈ ಚಿತ್ರಮಂದಿರದಲ್ಲಿ ಮೊದಲ ಸಿನಿಮಾ. 1961ರಲ್ಲಿ ಮೈಸೂರು ರಾಜ್ಯದ ಅಂದಿನ ಮುಖ್ಯಮಂತ್ರಿ ಬಿ.ಡಿ ಜತ್ತಿ ಅವರು ಚಿತ್ರಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 1963ರಲ್ಲಿ ಎಸ್ ನಿಜಲಿಂಗಪ್ಪ ಉದ್ಘಾಟಿಸಿದ್ದರು.

    English summary
    Bangalore famous film theater navarang has stopped his show for some time.
    Saturday, August 31, 2019, 11:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X